ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ, ಜಪಾನ್ ಆಗ್ರಹ ಧಿಕ್ಕರಿಸಿ ತೈವಾನ್ ಸುತ್ತ ಸಮರಾಭ್ಯಾಸ ಮುಂದುವರಿಸಿದ ಚೀನಾ

Last Updated 8 ಆಗಸ್ಟ್ 2022, 6:13 IST
ಅಕ್ಷರ ಗಾತ್ರ

ಬೀಜಿಂಗ್‌:ದ್ವೀಪರಾಷ್ಟ್ರ ತೈವಾನ್‌ ಸುತ್ತಲೂ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಕೊನೆಗೊಳಿಸಬೇಕು ಎಂಬ ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಆಗ್ರಹವನ್ನು ಚೀನಾ ದಿಕ್ಕರಿಸಿದೆ. ಹೊಸದಾಗಿ ಸಮರಾಭ್ಯಾಸ ನಡೆಸುತ್ತಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ.

ಚೀನಾ ಸೇನೆಯ ಪೂರ್ವ ಪಡೆ, ಕಾರ್ಯಾಚರಣೆಗೆಸಂಬಂಧಿಸಿದಹೇಳಿಕೆ ಬಿಡುಗಡೆ ಮಾಡಿದ್ದು, 'ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯು (ಪಿಎಲ್‌ಎ) ತೈವಾನ್‌ ದ್ವೀಪದ ಸುತ್ತಲಿನ ಸಮುದ್ರ ಮತ್ತು ವಾಯು ಪ್ರದೇಶದಲ್ಲಿ ನಡೆಯಬಹುದಾದ ಆಕ್ರಮಣಗಳನ್ನು ಗಮನದಲ್ಲಿರಿಸಿ ಪ್ರಾಯೋಗಿಕವಾಗಿ ಜಂಟಿ ಸಮರಾಭ್ಯಾಸ ಮುಂದುವರಿಸಿದೆ' ಎಂದು ಪ್ರಕಟಿಸಿದೆ.

ತೈವಾನ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆಗೆ ಬದ್ಧವಾಗಿರುವುದಾಗಿಅಮೆರಿಕ, ಆಸ್ಟ್ರೇಲಿಯಾ, ಜಪಾನ್ ದೇಶಗಳು ಪ್ರತಿಪಾದಿಸಿವೆ.

ತೈವಾನ್‌ ಭೂ ಪ್ರದೇಶ ತನ್ನದೇ ಎಂದುಚೀನಾ ವಾದಿಸುತ್ತಿರುವುದರ ನಡುವೆಯೇ,ಅಮೆರಿಕ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ಕಳೆದ ವಾರ ತೈವಾನ್‌ಗೆ ಭೇಟಿ ನೀಡಿದ್ದರು. ಇದರಿಂದ ಕೆರಳಿದ ಚೀನಾ,ತೈವಾನ್‌ ಗಡಿಯಲ್ಲಿತಾಲೀಮು ಚುರುಕುಗೊಳಿಸಿತ್ತು.

ಚೀನಾದ ಆಕ್ರಮಣಕಾರಿ ಧೋರಣೆಯನ್ನು ಖಂಡಿಸಿದ್ದ ಪೆಲೋಸಿ,ತೈವಾನ್ ಅನ್ನು ಜಾಗತಿಕ ಸಮುದಾಯದಿಂದ ಪ್ರತ್ಯೇಕಿಸಲು ನಾವು ಬಿಡುವುದಿಲ್ಲ ಕಿಡಿಕಾರಿದ್ದರು.

ಇವನ್ನೂ ಓದಿ
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT