ಇಸ್ಲಾಮಾಬಾದ್: ‘ಶಾಂತಿ ಮಾರ್ಗ ಹಿಡಿಯಿರಿ ಇಲ್ಲವೇ ಅರಾಜಕತೆಯ ಅವ್ಯವಸ್ಥೆ ಅನುಭವಿಸಿ’ ಎಂದು ಅಫ್ಗಾನಿಸ್ತಾನಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಆಸಿಂ ಮುನೀರ್ ಶನಿವಾರ ಎಚ್ಚರಿಕೆ ನೀಡಿದರು.

ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಪಾಕಿಸ್ತಾನ ಮಿಲಿಟರಿ ಅಕಾಡೆಮಿಯ ಆರ್ಮಿ ಕೆಡೆಟ್ಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಉಗ್ರರು ಅಫ್ಗಾನಿಸ್ತಾನದಲ್ಲಿ ನಿಂತು ಪಾಕಿಸ್ತಾನದ ಮೇಲೆ ದಾಳಿ ನಡೆಸುವುದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ’ ಎಂದು ತಾಕೀತು ಮಾಡಿದರು.

ಅಫ್ಗನ್ನಲ್ಲಿನ ಉಗ್ರರ ಸೇನಾ ನೆಲೆಗಳ ಮೇಲೆ ಪಾಕಿಸ್ತಾನ ಶುಕ್ರವಾರ ತಡರಾತ್ರಿ ದಾಳಿ ನಡೆಸಿದೆ. ಈ ಬೆನ್ನಲ್ಲೇ ಮುನೀರ್ ಈ ಹೇಳಿಕೆ ನೀಡಿದರು.

ಶಾಂತಿ ಮಾತುಕತೆ: ಪಾಕಿಸ್ತಾನ–ಅಫ್ಗಾನಿಸ್ತಾನ ನಡುವಣ ಸೇನಾ ಸಂಘರ್ಷದಿಂದಾಗಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಘರ್ಷ ನಿಲ್ಲಿಸಲು ಕತಾರ್ ಸರ್ಕಾರವು ನಿರಂತರವಾಗಿ ಯತ್ನಿಸುತ್ತಿದೆ.

ಈ ಮಧ್ಯೆ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ನೇತೃತ್ವದ ನಿಯೋಗವು ಅಫ್ಗಾನಿಸ್ತಾನದ ಪ್ರತಿನಿಧಿಗಳೊಂದಿಗೆ ದೋಹಾದಲ್ಲಿ ಮಾತುಕತೆ ನಡೆಸಲಿದೆ ಎಂದು ಪಾಕಿಸ್ತಾನ ಸರ್ಕಾರವು ಶನಿವಾರ ತಿಳಿಸಿದೆ.

ಪಾಕ್ ಸೇನೆಯಿಂದ 1200 ಬಾರಿ ಗಡಿ ಉಲ್ಲಂಘನೆ

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನ ಸೇನೆಯು 1200 ಬಾರಿ ಅಫ್ಗಾನಿಸ್ತಾನದ ಗಡಿಯನ್ನು ಮತ್ತು 710 ಬಾರಿ ವಾಯುಮಾರ್ಗವನ್ನು ಉಲ್ಲಂಘಿಸಿದೆ ಎಂದು ಅಫ್ಗನ್ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ ಈ ನಾಲ್ಕು ವರ್ಷಗಳಲ್ಲಿ ನಡೆದ ದಾಳಿಗಳಲ್ಲಿ 102 ನಾಗರಿಕರು ಮತ್ತು ಅಫ್ಗನ್ ಬಾರ್ಡರ್ ಗಾರ್ಡ್ಸ್ ಹತ್ಯೆಯಾಗಿದ್ದಾರೆ. 139 ಮಂದಿ ಗಾಯಗೊಂಡಿದ್ದಾರೆ. ಅಸಂಖ್ಯಾತ ಮನೆಗಳು ಮತ್ತು ಅಂಗಡಿಗಳು ನಾಶವಾಗಿವೆ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.