ಕ್ರೈಸ್ಟ್ಚರ್ಚ್, ನ್ಯೂಜಿಲೆಂಡ್: ಜಸ್ಟಿನ್ ಗ್ರೀವ್ಸ್ (ಔಟಾಗದೇ 202; 388ಎ, 4x19) ಅವರ ಅಮೋಘ ದ್ವಿಶತಕ ಮತ್ತು ಕೆಮರ್ ರೋಚ್ (ಔಟಾಗದೇ 58;233ಎ) ಅವರ ಹೋರಾಟದ ಬಲದಿಂದ ವೆಸ್ಟ್ ಇಂಡೀಸ್ ತಂಡವು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸೋಲಿನ ಅಪಾಯದಿಂದ ಪಾರಾಗಿ ಡ್ರಾ ಸಾಧಿಸಿತು.

ಗೆಲುವಿಗೆ 531 ರನ್ಗಳ ಗುರಿ ಪಡೆದಿದ್ದ ವಿಂಡೀಸ್ ತಂಡವು ಗ್ರೀವ್ಸ್ ಮತ್ತು ಕೆಮರ್ ಅವರ ತಾಳ್ಮೆ ಆಟದ ನೆರವಿನಿಂದ ಕೊನೆಯ ದಿನದಾಟದ ಅಂತ್ಯಕ್ಕೆ 6 ವಿಕೆಟ್ಗಲಿಗೆ 457 ರನ್ ಗಳಿಸಿತು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ಕನೇ ಇನ್ನಿಂಗ್ಸ್ನ ಎರಡನೇ ಅತ್ಯಧಿಕ ಮೊತ್ತವಾಗಿದೆ.

277 ರನ್ಗಳಿಗೆ ಆರು ವಿಕೆಟ್ ಕಳೆದುಕೊಂಡು ಸೋಲಿನ ದವಡೆಯಲ್ಲಿದ್ದ ತಂಡಕ್ಕೆ ಗ್ರೀವ್ಸ್ ಮತ್ತು ಕೆಮರ್ ಅವರು ಮುರಿಯದ ಏಳನೇ ವಿಕೆಟ್ ಜೊತೆಯಾಟದಲ್ಲಿ 180 ರನ್ ಪೇರಿಸಿದರು. ಅದಕ್ಕಾಗಿ ಅವರಿಬ್ಬರು ಎಸೆತಗಳನ್ನು 410 ಬಳಸಿಕೊಂಡರು. ಸುಮಾರು 10 ಗಂಟೆಗಳ ಕಾಲ ಕ್ರೀಸ್ನಲ್ಲಿದ್ದ ಗ್ರೀವ್ಸ್ ಅವರು ಚೊಚ್ಚಲ ದ್ವಿಶತಕವನ್ನು ಗಳಿಸಿದರು.

ಎರಡನೇ ಟೆಸ್ಟ್ ಬುಧವಾರ ವೆಲ್ಲಿಂಗ್ಟನ್ನಲ್ಲಿ ಆರಂಭವಾಗಲಿದೆ. ಮೂರು ಪಂದ್ಯಗಳ ಸರಣಿ ಇದಾಗಿದೆ.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 231 ಮತ್ತು 8 ವಿಕೆಟ್ಗೆ 466 ಡಿಕ್ಲೇರ್ಡ್.

ವೆಸ್ಟ್ ಇಂಡೀಸ್: 167 ಮತ್ತು 6 ವಿಕೆಟ್ಗೆ 457 (ಶಾಯಿ ಹೋಪ್ 140, ಜಸ್ಟಿನ್ ಗ್ರೀವ್ಸ್ ಔಟಾಗದೇ 202, ಕೆಮರ್ ರೋಚ್ ಔಟಾಗದೇ 58; ಜಾಕೋಬ್ ಡಫ್ಫಿ 122ಕ್ಕೆ 3). ಫಲಿತಾಂಶ: ಪಂದ್ಯ ಡ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.