ವಾಷಿಂಗ್ಟನ್ ಡಿಸಿ: 'ತೆರಿಗೆ ವಿಷಯವನ್ನು ಮುಂದಿರಿಸಿ ಏಳು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.

ಈ ಸಂಬಂಧ ಟ್ರಂಪ್ ಅವರ ಹೇಳಿಕೆಯನ್ನು ಪಿಟಿಐ ಹಂಚಿಕೊಂಡಿದೆ.

ವಾಷಿಂಗ್ಟನ್ ಡಿಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, 'ಸಂಧಾನ ನಡೆಸಲು ನಮಗೆ ಅಪಾರ ಶಕ್ತಿ ಇದೆ. ತೆರಿಗೆ ಪ್ರಸ್ತಾಪ ಮುಂದಿರಿಸಿ ಏಳು ಯುದ್ಧಗಳನ್ನು ಇತ್ಯರ್ಥಗೊಳಿಸಿದ್ದೇನೆ. ಅವುಗಳಲ್ಲಿ ಸುಂಕ ವಿಧಿಸಿದ್ದ ಕಾರಣ ನಾಲ್ಕು ಯುದ್ಧಗಳನ್ನು ಕೊನೆಗೊಳಿಸಲು ಸಾಧ್ಯವಾಯಿತು' ಎಂದು ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ಕೊನೆಗೊಳಿಸಿರುವುದಾಗಿ ಟ್ರಂಪ್ ಪದೇ ಪದೇ ಹೇಳಿಕೆ ನೀಡುತ್ತಲೇ ಬಂದಿದ್ದರು. ಆದರೆ ಮೂರನೇ ರಾಷ್ಟ್ರದ ಮಧ್ಯಪ್ರವೇಶವನ್ನು ಭಾರತ ನಿರಾಕರಿಸುತ್ತಲೇ ಬಂದಿತ್ತು.
.ರಷ್ಯಾ-ಉಕ್ರೇನ್ ಯುದ್ಧ ಕೊನೆಗಾಣಿಸಲು ಬೆಂಬಲ: ಮೋದಿಗೆ ಟ್ರಂಪ್ ಧನ್ಯವಾದ.ಭಾರತ-ಅಮೆರಿಕ ಬಾಂಧವ್ಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಬದ್ಧ: ಟ್ರಂಪ್ಗೆ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.