ವಾಷಿಂಗ್ಟನ್: ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಅವರ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತಾಶೆಗೊಂಡಿದ್ದಾರೆ, ಆದರೆ ಅವರೊಂದಿಗೆ ದೀರ್ಘಕಾಲದ ದ್ವೇಷ ಇಟ್ಟುಕೊಳ್ಳಲು ಅವರು ಬಯಸುತ್ತಿಲ್ಲ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಬುಧವಾರ ಹೇಳಿದ್ದಾರೆ.
.ಟ್ರಂಪ್ ಬಗೆಗಿನ ಕೆಲ ಪೋಸ್ಟ್ ಕುರಿತಂತೆ ವಿಷಾದ ವ್ಯಕ್ತಪಡಿಸಿದ ಮಸ್ಕ್.
ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ಬಗ್ಗೆ ಮಾಡಿದ ಕೆಲ ಪೋಸ್ಟ್ಗಳಿಗೆ ಮಸ್ಕ್ ವಿಷಾದ ವ್ಯಕ್ತಪಡಿಸಿದ ಬೆನ್ನಲ್ಲೇ ಉಪಾಧ್ಯಕ್ಷರು ಹೀಗೆ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರಿಗೆ ಮಸ್ಕ್ ಭಾರೀ ಪ್ರಮಾಣದಲ್ಲಿ ದೇಣಿಗೆ ನೀಡಿದ್ದರು. ಅಧಿಕಾರಕ್ಕೆ ಬಂದ ಬಳಿಕ ಸಿಬ್ಬಂದಿ ಕಾರ್ಯದಕ್ಷತೆ ಇಲಾಖೆಯ ಮುಖ್ಯಸ್ಥನ ಹೊಣೆಯನ್ನು ಮಸ್ಕ್ ಅವರಿಗೆ ಟ್ರಂಪ್ ವಹಿಸಿದ್ದರು. ಇದೀಗ ಇಬ್ಬರ ನಡುವೆ ಅಸಮಾಧಾನ ಉಂಟಾಗಿದ್ದು, ಬಹಿರಂಗವಾಗಿಯೇ ಪರಸ್ಪರ ಟೀಕೆ ಮಾಡಿಕೊಳ್ಳುತ್ತಿದ್ದಾರೆ.
.ಟ್ರಂಪ್– ಮಸ್ಕ್ ಜಟಾಪಟಿ: ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ಟೀಕಾ ಪ್ರಹಾರ.
‘ನಾನು ಟ್ರಂಪ್ ಹಾಗೂ ಮಸ್ಕ್ ಜೊತೆ ಮಾತನಾಡಿದ್ದೇನೆ. ಮಸ್ಕ್ ಮತ್ತೆ ಅಧ್ಯಕ್ಷರಿಗೆ ಬೆಂಬಲವಾಗಿ ನಿಲ್ಲುವಂತೆ ಮಾಡಲು ಪ್ರಯತ್ನಿಸುತ್ತಿದ್ದೇನೆ’ ಎಂದು ವ್ಯಾನ್ಸ್ ಮಾಧ್ಯಮದವರೊಂದಿಗೆ ಹೇಳಿದ್ದಾರೆ.

ಸರ್ಕಾರ ಹೆಚ್ಚು ಕಾರ್ಯಕ್ಷಮತೆಯಿಂದ ಇರಲು ಮಸ್ಕ್ ಮಾಡಿದ ಕೆಲಸಗಳಿಗೆ ಟ್ರಂಪ್ ಅವರ ತಂಡ ಋಣಿಯಾಗಿದೆ ಎಂದು ವ್ಯಾನ್ಸ್ ತಿಳಿಸಿದ್ದಾರೆ.

ಟ್ರಂಪ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡ ಕೆಲವು ಪೋಸ್ಟ್ಗಳಿಗೆ ಮಸ್ಕ್ ವಿಷಾದ ವ್ಯಕ್ತಪಡಿಸಿದ್ದರು. ಇದು ಬಹುದೂರ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಮಸ್ಕ್ ಅವರ ಈ ನಿಲುವು ಟ್ರಂಪ್ ಮೆಚ್ಚುಗೆಗೂ ಪಾತ್ರವಾಗಿತ್ತು.
.ಉಪಗ್ರಹ ಆಧಾರಿತ ಅಂತರ್ಜಾಲ: ಭಾರತದಲ್ಲಿ ಮಸ್ಕ್ ಒಡೆತನದ ಸ್ಟಾರ್ಲಿಂಕ್ಗೆ ಪರವಾನಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.