ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿಗೀಡಾಗುವ ಔಷಧ ಸೇವಿಸಲು ಅವಕಾಶ ಕಲ್ಪಿಸುವ ಕಾನೂನು: ಮ್ಯಾಕ್ರಾನ್‌

Published 11 ಮಾರ್ಚ್ 2024, 15:31 IST
Last Updated 11 ಮಾರ್ಚ್ 2024, 15:31 IST
ಅಕ್ಷರ ಗಾತ್ರ

ಪ್ಯಾರಿಸ್‌: ಗುಣಮುಖವಾಗದ ಕಾಯಿಲೆಗಳಿಂದ ಬಳಲುತ್ತಿರುವವರು ಸಾವಿಗೀಡಾಗುವ ಔಷಧ ಸೇವಿಸಲು ಅವಕಾಶ ಕಲ್ಪಿಸುವ ಕಾನೂನು ಜಾರಿಗೊಳಿಸುವುದಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರಾನ್‌ ಅವರು ಘೋಷಿಸಿದ್ದಾರೆ.

ಮಾರಣಾಂತಿಕ ರೋಗದಿಂದ ಬಳಲುತ್ತಿರುವ ವಯಸ್ಕರಿಗೆ ಈ ಕಾನೂನಿನಿಂದ ಪ್ರಯೋಜನವಾಗಲಿದೆ ಎಂದು ಮೂಲಗಳು ಹೇಳಿವೆ.

ಗುಣಪಡಿಸಲಾಗದ ಕಾಯಿಲೆಗೆ ಒಳಗಾಗಿ ದೈಹಿವಾಗಿ ಮತ್ತು ಮಾನಸಿಕವಾಗಿ ನೋವನ್ನು ಅನುಭವಿಸುವ ವಯಸ್ಕರಿಗೆ ಈ ಹೊಸ ಕಾನೂನು ಸೀಮಿತವಾಗಲಿದೆ ಎಂದು ‘ಲಾ ಕ್ರೊಯಿಕ್ಸ್’ ಮತ್ತು ‘ಲಿಬರೇಶನ್’ ಪತ್ರಿಕೆಗಳಿಗೆ ನೀಡಿರುವ ಸಂದರ್ಶನದಲ್ಲಿ ಮ್ಯಾಕ್ರಾನ್‌ ಹೇಳಿದ್ದಾರೆ.

ನಿಖರವಾದ ಮಾನದಂಡಗಳಿಗೆ ಅನುಗುಣವಾಗಿ ಕೈಗೊಳ್ಳುವ ವೈದ್ಯಕೀಯ ನಿರ್ಧಾರಗಳಿಗೆ ಈ ಕಾನೂನಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಕ್ಯಾನ್ಸರ್‌ ರೋಗದ ಕೊನೆಯ ಹಂತದಲ್ಲಿರುವ ರೋಗಿಗಳಿಗೆ ಇದರ ಪ್ರಯೋಜನ ಪಡೆಯಬಹುದು ಎಂದು ಅವರು ಉದಾಹರಣೆ ನೀಡಿದ್ದಾರೆ.

18 ಮತ್ತು ಅದಕ್ಕಿಂತ ಅಧಿಕ ವಯಸ್ಸಿನ ಸ್ವಯಂ ತೀರ್ಮಾನ ತೆಗೆದುಕೊಳ್ಳಲು ಪ್ರಾಪ್ತರಾಗಿರುವವರಿಗೆ ಈ ಕಾನೂನಿನ ಪ್ರಯೋಜನ ಪಡೆಯಬಹುದು. ತೀವ್ರ ಮಾನಸಿಕ ಕಾಯಿಲೆ, ಆಲ್‌ಝೈಮರ್‌ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ಈ ಕಾನೂನಿಗೆ ಅರ್ಹರಲ್ಲ ಎಂದು ಮ್ಯಾಕ್ರಾನ್‌ ಅವರು ವಿವರಿಸಿದ್ದಾರೆ.

ಯಾವ ದಿನಾಂಕದಿಂದ ಇದು ಜಾರಿಯಾಗಲಿದೆ ಎಂಬುದನ್ನು ಮ್ಯಾಕ್ರಾನ್‌ ಅವರು ಸ್ಪಷ್ಟಪಡಿಸಿಲ್ಲ. ಕಾನೂನು ಜಾರಿಗೂ ಮುನ್ನ ತಿಂಗಳುಗಳ ಕಾಲ ಶಾಸಕಾಂಗ ಪ್ರಕ್ರಿಯೆಗಳು ನಡೆಯಲಿವೆ. ಈ ಪ್ರಕ್ರಿಯೆ ಮೇ ತಿಂಗಳಲ್ಲಿ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT