ಜೆರುಸಲೇಂ: ಕಳೆದ ವರ್ಷ ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ನ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಹಮಾಸ್ ಬಂಡುಕೋರರ ಒತ್ತೆಯಾಳುಗಳಾಗಿ ಸೆರೆಯಾಗಿದ್ದ ಐವರ ಮೃತದೇಹಗಳನ್ನು ಗಾಜಾ ಪಟ್ಟಿಯಿಂದ ಇಸ್ರೇಲ್ ಸೇನೆಯು ವಶಕ್ಕೆ ಪಡೆದಿದೆ.
.ಯುಎಇ, ಇಸ್ರೇಲ್ ನೆರವಿನೊಂದಿಗೆ ಗಾಜಾ ಆಸ್ಪತ್ರೆಯಲ್ಲಿ ಇಂಟರ್ನೆಟ್ ಸಕ್ರಿಯ: ಮಸ್ಕ್.
ಒತ್ತೆಯಾಳುಗಳಾಗಿದ್ದ ಮಾಯಾ ಗೊರೆನ್, ಸೈನಿಕರಾದ ರಾವಿಡ್ ಆರ್ಯೆ ಕಜ್, ಒರೆನ್ ಗೋಲ್ಡಿನ್, ತೋಮರ್ ಅಹಿಮಸ್ ಹಾಗೂ ಕಿರಿಲ್ ಬ್ರೋಡ್ಸ್ಕಿ ಮುಂತಾದವರ ಮೃತದೇಹಗಳನ್ನು ಇಸ್ರೇಲ್ಗೆ ತರಲಾಗಿದೆ ಎಂದು ಸೇನೆ ತಿಳಿಸಿದೆ.

ದಕ್ಷಿಣ ಗಾಜಾದ ಖಾನ್ ಯೂನಿಸ್ ಪ್ರದೇಶದಲ್ಲಿ ಬುಧವಾರ ನಡೆದ ಕಾರ್ಯಾಚರಣೆ ವೇಳೆ ಈ ದೇಹಗಳು ಪತ್ತೆಯಾಗಿವೆ. ನಾಲ್ವರು ಯೋಧರು ಅಕ್ಟೋಬರ್ 7ರಂದು ನಡೆದ ಹಮಾಸ್ ದಾಳಿಯಲ್ಲಿ ಸಾವಿಗೀಡಾಗಿದ್ದರು.
.ಇಸ್ರೇಲ್ | ಟೆಲ್ ಅವಿವ್ ಮೇಲೆ ವಾಯು ದಾಳಿ: ಒಬ್ಬರ ಸಾವು, ಕನಿಷ್ಠ 10 ಮಂದಿಗೆ ಗಾಯ.
ಗೊರೆನ್ ಅವರು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಸೇನೆ ಡಿಸೆಂಬರ್ನಲ್ಲಿಯೇ ಘೋಷಣೆ ಮಾಡಿತ್ತು.

ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ದಕ್ಷಿಣ ಇಸ್ರೇಲ್ ಮೇಲೆ ನಡೆಸಿದ್ದ ದಾಳಿಯಲ್ಲಿ 1,197 ಮಂದಿ ಸಾವಿಗೀಡಾಗಿದ್ದರು. 251 ಮಂದಿಯನ್ನು ಒತ್ತೆಯಾಳುಗಳಾಗಿ ಸೆರೆಹಿಡಿದಿದ್ದರು.

ಈ ಪೈಕಿ 11 ಮಂದಿ ಇನ್ನೂ ಸೆರೆಯಲ್ಲಿಯೇ ಇದ್ದು, 39 ಮಂದಿ ಸಾವಿಗೀಡಾಗಿದ್ದಾರೆ.

ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಈವರೆಗೂ 39,145 ಮಂದಿ ಅಸುನೀಗಿದ್ದಾರೆ.
.ಹಮಾಸ್ ಮುಖ್ಯಸ್ಥನನ್ನು ಗುರಿಯಾಗಿಸಿ ಇಸ್ರೇಲ್ ದಾಳಿ: 71 ಪ್ಯಾಲೆಸ್ಟೀನಿಯರು ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.