ಟೆಲ್ ಅವಿವ್: ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಮೇಲೆ ನಡೆದ ವಾಯುದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಘಟನೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಇಸ್ರೇಲ್ ಸೇನೆ ಹೇಳಿದ್ದು, ವಾಯು ಗಸ್ತು ಹೆಚ್ಚಿಸುವುದಾಗಿ ಹೇಳಿದೆ.
.ಗಾಜಾವನ್ನು ಕೂಡಲೇ ತೊರೆಯಿರಿ: ಪ್ಯಾಲೆಸ್ಟೀನಿಯರಿಗೆ ಇಸ್ರೇಲ್ ತಾಕೀತು.
ಇಸ್ರೇಲಿ ವಾಯು ರಕ್ಷಣೆಯನ್ನು ಭೇದಿಸಿ ಹೇಗೆ ದಾಳಿ ನಡೆಯಿತು, ಇದಕ್ಕೆ ಇಸ್ರೇಲ್ ಪಡೆಗಳು ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದು ಇನ್ನೂ ಸ್ಪಷ್ಟವಗಿಲ್ಲ.

‘ಇದೊಂದು ಡ್ರೋನ್ ದಾಳಿ’ ಎಂದು ಟೆಲ್ ಅವಿವ್ ಮೇಯರ್ ರಾನ್ ಹುಲ್ಡೈ ಎಕ್ಸ್ನಲ್ಲಿ ತಿಳಿಸಿದ್ದಾರೆ. ಆದರೆ ಯಾವ ರೀತಿಯ ದಾಳಿ ಎನ್ನುವುದರ ಬಗ್ಗೆ ಸೇನೆಯಿಂದ ಮಾಹಿತಿ ಲಭ್ಯವಾಗಿಲ್ಲ.
.ಪ್ಯಾಲೆಸ್ಟೀನ್ ಪರ, ಇಸ್ರೇಲ್ ವಿರುದ್ಧ ಘೋಷಣೆ .
ಶುಕ್ರವಾರ ಮುಂಜಾನೆ 3.10ರ ವೇಳೆಗೆ ಸ್ಫೋಟ ನಂಭವಿಸಿದೆ. ಗಾಳಿಯಲ್ಲೇ ಸ್ಫೋಟಗೊಂಡಿರುವುದರಿಂದ ಭೂಮಿಯಲ್ಲಿ ಸ್ಫೋಟದ ಯಾವುದೇ ಕುರುಹುಗಳು ಕಾಣಿಸಿಲ್ಲ ಎಂದು ಟೆಲ್ ಅವಿವ್ ಜಿಲ್ಲಾ ಕಮಾಂಡರ್ ಪೆರೆಡ್ಜ್ ಅಮರ್ ತಿಳಿಸಿದ್ದಾರೆ.

ಸ್ಫೋಟದಿಂದ ಹೆಚ್ಚಿನ ಹಾನಿ ಸಂಭವಿಸಿದ್ದರೂ, ಅದರ ಪರಿಣಾಮ ಹಲವು ಪ್ರದೇಶಗಳ ಮೇಲೆ ಬೀರಿದೆ ಎಂದು ಅವರು ಹೇಳಿದ್ದಾರೆ.
.ಗಾಜಾಗೆ ವೈದ್ಯಕೀಯ, ಮಾನವೀಯ ನೆರವು: ‘ಸೀಮಿತ ವಿರಾಮ’ ಘೋಷಿಸಿದ ಇಸ್ರೇಲ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.