ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಣ ಸಂಘರ್ಷವನ್ನು ಕೊನೆಗೊಳಿಸಲು ನೆರವಾಗಲು ಸಿದ್ಧವಿರುವುದಾಗಿ ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್ ಹೇಳಿದೆ.

'ಪರಿಸ್ಥಿತಿಯನ್ನು ತಿಳಿಗೊಳಿಸಲು, ಹಿಂಸಾಚಾರ ಮತ್ತಷ್ಟು ಉಲ್ಬಣಗೊಳ್ಳದಂತೆ ಹಾಗೂ ಗಾಜಾ ಪಟ್ಟಿಯಲ್ಲಿ ಮಾನವೀಯ ದುರಂತವನ್ನು ತಡೆಯಲು ರಷ್ಯಾ ಕ್ರಮ ಕೈಗೊಳ್ಳುತ್ತಿರುವುದಾಗಿ ನೆತನ್ಯಾಹು ಅವರಿಗೆ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ' ಎಂದು ಕ್ರೆಮ್ಲಿನ್ ಮಾಹಿತಿ ನೀಡಿದೆ.
.ಆಳ–ಅಗಲ: ಹಮಾಸ್–ಇಸ್ರೇಲ್ ಯುದ್ಧ ಮುಂದುವರಿದರೆ ಭಾರತಕ್ಕೂ ಆಗಲಿದೆ ನಷ್ಟ.
ಪುಟಿನ್ ಅವರು ಇರಾನ್, ಈಜಿಪ್ಟ್, ಸಿರಿಯಾ ಮತ್ತು ಪ್ಯಾಲೆಸ್ಟೇನ್ ನಾಯಕರರೊಂದಿಗೆ ಸೋಮವಾರ ಮಾತುಕತೆ ನಡೆಸಿದ್ದಾರೆ. ನಾಗರಿಕರ ವಿರುದ್ಧದ ಯಾವುದೇ ಹಿಂಸಾಚಾರವನ್ನು ಒಪ್ಪಲಾಗದು ಎಂದೂ ಅದು ಪ್ರತಿಪಾದಿಸಿದೆ.

ಹಮಾಸ್ ಬಂಡುಕೋರ ಸಂಘಟನೆ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ಆರಂಭಿಸಿದ ಒಂದು ವಾರದಲ್ಲಿ ಗಾಜಾ ಪಟ್ಟಿಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ನೆಲೆ ಕಳೆದುಕೊಂಡಿದ್ದಾರೆ. ವಿದ್ಯುತ್, ಇಂಧನ, ಆಹಾರ, ನೀರಿನ ಸರಬರಾಜು ಇಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ದಾಳಿ ಇದೀಗ ಸಿರಿಯಾಗೂ ವಿಸ್ತರಿಸಿದೆ. ಇದರ ನಡುವೆ, ಅರಬ್ ದೇಶಗಳು ಇಸ್ರೇಲ್ ವಿರುದ್ಧ ಒಂದಾಗಬೇಕು ಎಂದು ಇರಾನ್ ಕರೆ ನೀಡಿರುವುದು ಹೊಸದೊಂದು ಪ್ರಾದೇಶಿಕ ಬಿಕ್ಕಟ್ಟಿಗೆ ನಾಂದಿ ಹಾಡಿದೆ.
.ಆಳ–ಅಗಲ: ಹಮಾಸ್–ಇಸ್ರೇಲ್ ಸಂಘರ್ಷ– ಕ್ರೌರ್ಯ ಮೆರೆದ ಯುದ್ಧಾಪರಾಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.