ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Iran Conflict | ಇಸ್ರೇಲ್‌ಗೆ ನಮ್ಮ ಬೆಂಬಲ ಕಬ್ಬಿಣದಷ್ಟೇ ಗಟ್ಟಿ: ಅಮೆರಿಕ

Published 14 ಏಪ್ರಿಲ್ 2024, 4:24 IST
Last Updated 14 ಏಪ್ರಿಲ್ 2024, 4:24 IST
ಅಕ್ಷರ ಗಾತ್ರ

ವಾಷಿಂಗ್ಟನ್: ಇಸ್ರೇಲ್–ಇರಾನ್ ಕದನದಲ್ಲಿ ಅಮೆರಿಕವು ಇಸ್ರೇಲ್ ಬೆಂಬಲಕ್ಕೆ ನಿಂತಿದೆ. ಇಸ್ರೇಲ್‌ಗೆ ನಮ್ಮ ಬೆಂಬಲ ಕಬ್ಬಿಣದಷ್ಟೇ ಗಟ್ಟಿ ಎಂದು ಹೇಳಿದೆ.

‘ಅಮೆರಿಕವು ಇಸ್ರೇಲ್ ಜನರ ಪರವಾಗಿದೆ. ಇರಾನ್ ದಾಳಿಯಿಂದ ರಕ್ಷಣೆ ಪಡೆಯಲು ಇಸ್ರೇಲ್ ನಡೆಸುತ್ತಿರುವ ಪ್ರಯತ್ನವನ್ನು ಬೆಂಬಲಿಸುತ್ತದೆ’ ಎಂದು ಶ್ವೇತಭವನದಲ್ಲಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ಕೌನ್ಸಿಲ್ ವಕ್ತಾರ ಅಡ್ರಿನ್ ವಾಟ್ಸನ್ ಹೇಳಿದ್ದಾರೆ.

ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ‘ಇಸ್ರೇಲ್ ಮೇಲೆ ಇರಾನ್ ವಾಯು ದಾಳಿ ಆರಂಭಿಸಿದೆ. ಅಧ್ಯಕ್ಷ ಜೋ ಬೈಡನ್ ಅವರ ತಂಡವು ಇಸ್ರೇಲ್ ಅಧಿಕಾರಿಗಳೊಂದಿಗೆ ಹಾಗೂ ಇತರ ಪಾಲುದಾರರೊಂದಿಗೆ ಸಂಪರ್ಕದಲ್ಲಿದೆ’ ಎಂದು ಅವರು ಹೇಳಿದ್ದಾರೆ.

ಮಧ್ಯಪ್ರಾಚ್ಯದ ಬೆಳವಣಿಗೆಗಳ ಬಳಿಕ ಡೆಲಾವೆರ್‌ನ ತಮ್ಮ ನಿವಾಸದಿಂದ ವಾಷಿಂಗ್ಟನ್‌ಗೆ ಮರಳಿರುವ ಜೋ ಬೈಡನ್‌, ಈ ಬಗ್ಗೆ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಅಲ್ಲಿನ ಬೆಳವಣಿಗೆ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್‌ ಸುಲ್ಲಿವಾನ್ ಹಾಗೂ ಪ್ರಧಾನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಫೈನರ್ ಅವರು ಜೋ ಬೈಡನ್‌ಗೆ ಈ ಬಗ್ಗೆ ವಿವರಣೆ ನೀಡಿದ್ದಾರೆ.

‘ಬೈಡನ್ ಅವರ ನಿಲುವು ಸ್ಪಷ್ಟವಾಗಿದೆ. ಇಸ್ರೇಲ್ ಭದ್ರತೆಗೆ ನಮ್ಮ ಬೆಂಬಲ ಕಬ್ಬಿಣದಷ್ಟೇ ಬಲಿಷ್ಠ’ ಎಂದು ವಾಟ್ಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT