ಕಂಠ್ಮಡು: ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್‌ನಲ್ಲೂ ಕೋವಿಡ್–19 ಪ್ರಕರಣವೊಂದು ಪತ್ತೆಯಾಗಿದೆ.

ಇಲ್ಲಿನ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿದ್ದ ನಾರ್ವೆಯ ಪರ್ವತಾರೋಹಿಯೊಬ್ಬರಿಗೆ ಈಚೆಗೆ ಕೋವಿಡ್– 19 ಇರುವುದು ಪರೀಕ್ಷೆಯಿಂದ ದೃಢಪಟ್ಟ ನಂತರ ಅವರನ್ನು ಹೆಲಿಕಾಪ್ಟರ್ ಮೂಲಕ ಕಠ್ಮಂಡುವಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

‘ನನಗೆ ಏಪ್ರಿಲ್ 15ರಂದು ಕೋವಿಡ್ ಇರುವುದು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಳಿಕ ನಾನು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ’ ಎಂದು ನಾರ್ವೆಯ ಪರ್ವತಾರೋಹಿ ಎರ್ಲೆಂಡ್ ನೆಸ್ ತಿಳಿಸಿದ್ದಾರೆ.

ಎರ್ಲೆಂಟ್ ನೆಸ್ ಅವರು, 18 ಪರ್ವತಾರೋಹಿಗಳ ತಂಡದೊಂದಿಗೆ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ತಂಗಿದ್ದರು.

ನಾರ್ವೆಯ ಪರ್ವತಾರೋಹಿಯು ಇತರ ಪರ್ವತಾರೋಹಿಗಳ ಜೊತೆಗೆ ಹಲವು ವಾರಗಳ ವಾಸವಿದ್ದ ಕಾರಣ ಇತರ ಪರ್ವತಾರೋಹಿಗಳಿಗೂ ಸೋಂಕು ತಗಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೌಂಟ್ ಎವರೆಸ್ಟ್ ಪರ್ವತದಲ್ಲಿ ಕೋವಿಡ್–19ನ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ ನೇಪಾಳದ ಪರ್ವತಾರೋಹಣದ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಕೋವಿಡ್–19 ಪ್ರಕರಣಗಳ ಬಗ್ಗೆ ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ನ್ಯುಮೋನಿಯಾ ಮತ್ತು ಎತ್ತರದ ಪ್ರದೇಶಗಳಲ್ಲಿ ಬರುವ ಕಾಯಿಲೆಗಳ ವರದಿಗಳು ಮಾತ್ರ ನನ್ನ ಬಳಿ ಇವೆ’ ಎಂದು ಪರ್ವತಾರೋಹಣ ವಿಭಾಗದ ನಿರ್ದೇಶಕಿ ಮೀರಾ ಆಚಾರ್ಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.