ಕಠ್ಮಂಡು (ನೇಪಾಳ): ಭಾರತದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಖಂಡಿಸಿ 'ನಾಗರಿಕ ಯುವ ಶಕ್ತಿ ನೇಪಾಳ' ಸಂಘಟನೆ ಕಠ್ಮಂಡುವಿನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಹೊರಗೆ ಶನಿವಾರ ಪ್ರತಿಭಟನೆ ನಡೆಸಿದೆ.

ದಾಳಿ ವೇಳೆ ಮೃತಪಟ್ಟ ಸುದೀಪ್ ನ್ಯೂಪನೆ (27) ಅವರ ಭಾವಚಿತ್ರ ಹಾಗೂ 'ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿ', 'ಉಗ್ರರನ್ನು ಶಿಕ್ಷಿಸಿ' ಹಾಗೂ 'ಹಿಂದೂಗಳ ಹತ್ಯೆ ನಿಲ್ಲಿಸಿ' ಎಂಬಿತ್ಯಾದಿ ಬರಹಗಳಿದ್ದ ಪೋಸ್ಟರ್ಗಳನ್ನು ಹಿಡಿದಿದ್ದ ಹಲವು ಯುವಕರು ದಾಳಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದ್ದಾರೆ.

ಸುದೀಪ್ ಅವರು ಪಶ್ಚಿಮ ನೇಪಾಳದ ಬುಟವಾಲ್ ನಗರದವರು.
.Pahalgam Terror Attack: ಮತ್ತೆ ಮೂವರು ಶಂಕಿತ ಉಗ್ರರ ಮನೆಗಳು ಧ್ವಂಸ.Terror Attack | ಪಾಕಿಸ್ತಾನಿ ಪ್ರಜೆಗಳ ವಾಪಸ್ಗೆ ಕ್ರಮ: ಸಿಎಂ ಸಿದ್ದರಾಮಯ್ಯ.
ಅವರ ಹತ್ಯೆಯನ್ನು ಖಂಡಿಸಿ, ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಸಹ ಪಾಕಿಸ್ತಾನ ರಾಯಭಾರ ಕಚೇರಿ ಎದುರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪಟ್ಟಣ ಸಮೀಪದ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮಂಗಳವಾರ (ಏಪ್ರಿಲ್ 22ರಂದು) ಗುಂಡಿನ ದಾಳಿ ನಡೆಸಿದ್ದರು. 26 ಮಂದಿ ಮೃತಪಟ್ಟು, ಕನಿಷ್ಠ 20 ಜನರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.