ಲಾಹೋರ್: ಪಾಕಿಸ್ತಾನದ ಖ್ಯಾತ ಗಾಯಕಿ ಹನಿಯಾ ಅಸ್ಲಮ್ ನಿಧರಾಗಿದ್ದಾರೆ. ಈ ಬಗ್ಗೆ ಹನಿಯಾ ಅವರ ಸಹೋದರಿ ಜೆಬ್ ಬಂಗಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕೋಕ್ ಸ್ಟೂಡಿಯೊದಲ್ಲಿ ‘ಲೈಲಿಜಾನ್’, ‘ಬಿಬಿ ಸನಮ್’, ‘ಚಹುಪ್’ ಸೇರಿಂದತೆ ಹಲವು ಹಿಟ್ ಹಾಡುಗಳನ್ನು ಹನಿಯಾ ಹಾಡಿದ್ದರು. ಅಲ್ಲದೆ ಭಾರತೀಯ ಸಿನಿಮಾಗಳೊಂದಿಗೂ ನಂಟು ಹೊಂದಿದ್ದ ಹನಿಯಾ ಅವರು, ಬಾಲಿವುಡ್ ನಟಿ ಆಲಿಯಾ ಭಟ್ ನಟನೆಯ ‘ಹೈವೇ’ ಮತ್ತು ಹಿಂದಿಯ ‘ಮದ್ರಾಸ್ ಕೆಫೆ’ ಸಿನಿಮಾಗಳಲ್ಲಿ ಹಾಡುಗಳನ್ನು ಹಾಡಿದ್ದರು.
ಹನಿಯಾ ಅವರಿಗೆ 30 ವರ್ಷ ವಯಸ್ಸಾಗಿತ್ತು. ಅವರು ಹೃದಯಸ್ಥಂಭನದಿಂದ ನಿಧನರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಹನಿಯಾ ನಿಧನಕ್ಕೆ ಆಘಾತ ವ್ಯಕ್ತಪಡಿಸಿರುವ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಪಾಕಿಸ್ತಾನ ಮಾತ್ರವಲ್ಲದೆ ಭಾರತೀಯ ಸಂಗೀತ ಕಲಾವಿದರಾದ ಅನಿರುದ್ಧ ವರ್ಮಾ ಸೇರಿದಂತೆ ಹಲವರು ಹನಿಯಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.