ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಪ್ರಚೋದನೆಯೇ ಕ್ರಾಕಸ್‌ ಹಾಲ್‌ ಮೇಲಿನ ಐಎಸ್ ದಾಳಿಗೆ ಕಾರಣ: ಪುಟಿನ್

Published 26 ಮಾರ್ಚ್ 2024, 2:04 IST
Last Updated 26 ಮಾರ್ಚ್ 2024, 2:04 IST
ಅಕ್ಷರ ಗಾತ್ರ

ಮಾಸ್ಕೊ: ಮಾಸ್ಕೊದ ಕ್ರಾಕಸ್‌ ಸಿಟಿ ಹಾಲ್‌ ಸಭಾಂಗಣದ ಮೇಲೆ ಈಚೆಗೆ ನಡೆದ ದಾಳಿಯ ಹೊಣೆಯನ್ನು ಐಎಸ್ (ಇಸ್ಲಾಮಿಕ್ ಸ್ಟೇಟ್) ಸಂಘಟನೆ ಹೊಣೆ ಹೊತ್ತುಕೊಂಡಿದೆ. ಆದರೆ, ಈ ದಾಳಿಗೆ ಉಕ್ರೇನ್‌ ಪ್ರಚೋದನೆಯೇ ಪ್ರಮುಖ ಕಾರಣ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಪಿಸಿದ್ದಾರೆ.

ನಮ್ಮ ದೇಶದಲ್ಲಿ ದಾಳಿಯನ್ನು ನಡೆಸುವ ಮೂಲಕ ಆತಂಕ ಸೃಷ್ಟಿಸುವುದು ಉಗ್ರರ ಉದ್ದೇಶವಾಗಿತ್ತು. ಆದರೆ, ನಾವು ಏಕತೆಯಿಂದ ಎದುರಿಸಲು ಸಿದ್ಧರಿದ್ದೇವೆ ಎಂದು ಪುಟಿನ್ ಹೇಳಿದ್ದಾರೆ.

ಮಾಸ್ಕೊದಲ್ಲಿ ಸಂಗೀತ ಕಾರ್ಯಕ್ರಮವೊಂದು ನಡೆಯಬೇಕಿದ್ದ ಕ್ರಾಕಸ್‌ ಸಿಟಿ ಹಾಲ್‌ ಸಭಾಂಗಣದ ಮೇಲೆ ಶುಕ್ರವಾರ ತಡರಾತ್ರಿ ನಡೆದ ದಾಳಿಯಲ್ಲಿ ಕನಿಷ್ಠ 140ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ರಷ್ಯಾದ ಅಧಿಕಾರಿಗಳು 11 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.

ಶಂಕಿತರ ಪೈಕಿ ನಾಲ್ಕು ಮಂದಿ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದರು ಎಂದು ರಷ್ಯಾದ ತನಿಖಾ ಸಮಿತಿ ಹೇಳಿತ್ತು. ದಾಳಿಗೆ ತಾನು ಹೊಣೆ ಎಂದು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೇಳಿಕೊಂಡಿದೆ. ಆದರೆ ದಾಳಿಗೆ ಉಕ್ರೇನ್ ನಂಟು ಇದೆ ಎಂಬ ಅರ್ಥದ ಮಾತುಗಳನ್ನು ರಷ್ಯಾದ ತನಿಖಾ ಸಂಸ್ಥೆಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT