ಕೀವ್: ರಷ್ಯಾ ಸೇನೆಯು ಸೋಮವಾರ ರಾತ್ರಿ ನಡೆಸಿದ ದಾಳಿಯಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ 11ನೇ ಶತಮಾನದ ಸಂತ ಸೋಫಿಯಾ ಕೆಥಡ್ರೆಲ್ ಐತಿಹಾಸಿಕ ಚರ್ಚ್ಗೆ ಹಾನಿಯಾಗಿದೆ ಎಂದು ಉಕ್ರೇನ್ನ ಸಂಸ್ಕೃತಿ ಸಚಿವ ಮೈಕೊಲಾ ಚೋತ್ಸ್ಕಿ ಮಂಗಳವಾರ ತಿಳಿಸಿದ್ದಾರೆ.

‘ಉಕ್ರೇನ್ನ ಪ್ರಸಿದ್ಧ ತಾಣಗಳಲ್ಲಿ ಸಂತ ಸೋಫಿಯಾ ಕೆಥಡ್ರೆಲ್ ಪ್ರಮುಖವಾದದ್ದಾಗಿತ್ತು. ಕಳೆದ ರಾತ್ರಿ ನಡೆದ ದಾಳಿಯಲ್ಲಿ ಶತ್ರು ಪಾಳಯವು ನಮ್ಮ ಹೆಗ್ಗುರುತು ಹಾಗೂ ಹೃದಯದ ಮೇಲೆ ಮತ್ತೆ ಪ್ರಹಾರ ನಡೆಸಿದೆ. ನಮ್ಮ ಉಕ್ರೇನ್ನ ಅಸ್ಥಿತ್ವವಾಗಿರುವ ಕಳೆದ ಹಲವು ಶತಮಾನಗಳಿಂದ ಉಳಿದಿದ್ದ ಧಾರ್ಮಿಕ ಕೇಂದ್ರ ಹಾನಿಗೀಡಾಗಿದೆ’ ಎಂದು ಚೋತ್ಸ್ಕಿ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

‘ದಾಳಿಯಲ್ಲಿ ಕೆಥಡ್ರೆಲ್ನ ಗೋಡೆಗಳಿಗೆ ಹಾನಿಯಾಗಿದೆ. ಅದರ ಕೆಲ ಭಾಗಗಳು ಕಳಚಿ ಬಿದ್ದಿವೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯಲ್ಲಿ ಇದೇ ಮೊದಲ ಬಾರಿಗೆ ಧಾರ್ಮಿಕ ಕೇಂದ್ರ ಹಾನಿಗೀಡಾಗಿದೆ. ರಷ್ಯಾದ ಡ್ರೋನ್ಗಳು ನೆಲಕ್ಕೆ ಸಮೀಪದಲ್ಲೇ ಹಾರಾಟ ನಡೆಸುತ್ತಿವೆ. ಯಾವುದೇ ಸಮಯದಲ್ಲಿ ವಾಯು ದಾಳಿ ನಡೆಯುವ ಅಪಾಯ ಎದುರಾಗಿದೆ’ ಎಂದು ಮೊದಲ ಉಪ ಮಹಾನಿರ್ದೇಶಕ ವಡಿಮ್ ಕಿರಿಲೆಂಕೊ ಆತಂಕ ವ್ಯಕ್ತಪಡಿಸಿದ್ದಾರೆ.

‘ವಿಭಿನ್ನ ಶೈಲಿಯ ವಾಸ್ತುಶಿಲ್ಪದಿಂದಾಗಿ 1990ರಲ್ಲಿ ಈ ಕೆಥಡ್ರೆಲ್ ಅನ್ನು ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ಶ್ವೇತ ವರ್ಣದ ಈ ಕೆಥಡ್ರೆಲ್ನ ಹಸಿರು ಮೇಲ್ಛಾವಣಿ ಮತ್ತು ಹೊಂಬಣ್ಣದ ಗೋಪುರಗಳು ಇದರ ವಿಶೇಷತೆಗಳಾಗಿವೆ. ಡ್ರೋನ್ಗಳು ಕೆಲವೊಮ್ಮೆ 76 ಮೀಟರ್ ಎತ್ತರದಲ್ಲಿರುವ ಗಂಟೆ ಗೋಪುರದ ಎತ್ತರದಲ್ಲಿ ಹಾರಾಟ ನಡೆಸುತ್ತಿವೆ. ಸಾವಿರ ವರ್ಷಗಳ ಇತಿಹಾಸ ಇರುವ ಈ ಚರ್ಚ್ಗೆ ಆಗಿರುವ ಹಾನಿಯ ಕುರಿತು ತಜ್ಞರು ಪರಿಶೀಲನೆ ನಡೆಸಿದ್ದಾರೆ’ ಎಂದಿದ್ದಾರೆ.

2022ರ ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದಲ್ಲಿ ದಾಳಿ ಆರಂಭಿಸಿದ ನಂತರ ವಿಶ್ವ ಪಾರಂಪರಿಕ ತಾಣವಾದ ಸಂತ ಸೋಫಿಯಾ ಕೆಥಡ್ರೆಲ್ ಅಪಾಯದಲ್ಲಿದೆ ಎಂದು ಯುನೆಸ್ಕೊ ಸಮಿತಿ ಹೇಳಿತ್ತು. ದಾಳಿಯಲ್ಲಿ ಪಾರಂಪರಿಕ ಶೈಲಿಯ ಒಳಾಂಗಣ, ಮೊಸಾಯ್ಕ್ ಮತ್ತು ಗೋಡೆ ಮೇಲಿರುವ ಪುರಾತನ ಚಿತ್ರಗಳು ನಾಶವಾಗುವ ಭೀತಿಯನ್ನು ವ್ಯಕ್ತಪಡಿಸಿತ್ತು.

‘ಈ ಕೆಥಡ್ರೆಲ್ ವಿಶ್ವದ ಪಾರಂಪರಿಕ ತಾಣವಾಗಿದ್ದು, ಉಕ್ರೇನ್ ಮಾತ್ರವಲ್ಲ, ಇಡೀ ಜಗತ್ತೇ ಸಂರಕ್ಷಿಸುತ್ತಿದೆ’ ಎಂದು ಕಿರಿಲೆಂಕೊ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.