ವಾಷಿಂಗ್ಟನ್: ‘ಭಾರತ ಮತ್ತು ಶ್ವೇತಭವನದ ಸಂಬಂಧದಲ್ಲಿ ತೊಡಕು ಮೂಡುವಂತೆ ಮಾಡಲು ನಾನು ಇಲ್ಲಿ ಇಲ್ಲ. ಈ ಬಗ್ಗೆ ಪ್ರತಿಕ್ರಿಯಿಸಲೇಬೇಕು ಎಂದೂ ಇಲ್ಲ. ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಮತ್ತು ಅಧ್ಯಕ್ಷರ ಬಗೆಗೆ ನಮಗೆ ಅಪಾರ ಗೌರವವಿದೆ. ಪಾಕಿಸ್ತಾನಕ್ಕೆ ಟ್ರಂಪ್ ಅವರ ಅಧಿಕಾರಿಗಳು ಏನು ಹೇಳಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ’ ಎಂದು ಸರ್ವ ಪಕ್ಷದ ನಿಯೋಗವೊಂದರ ನೇತೃತ್ವವಹಿಸಿರುವ ಶಶಿ ತರೂರ್ ಹೇಳಿದರು.

‘ತಾನು ಮಧ್ಯಸ್ಥಿಕೆ ವಹಿಸಿ ಭಾರತ ಮತ್ತು ಪಾಕಿಸ್ತಾನದ ಮಧ್ಯದ ಸಂಘರ್ಷವನ್ನು ಅಂತ್ಯಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರಲ್ಲ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು’ ಎಂದು ಪಿಟಿಐ ಸುದ್ದಿ ಸಂಸ್ಥೆ ಬುಧವಾರ ನಡೆಸಿದ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ತರೂರ್ ಉತ್ತರಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದಲ್ಲಿ ಭಾರತ– ಪಾಕಿಸ್ತಾನ ದೇಶಗಳ ಮಧ್ಯೆ ನಡೆದ ಸೇನಾ ಸಂಘರ್ಷದ ಕುರಿತ ವಾಸ್ತವಿಕ ಸಂಗತಿಗಳನ್ನು ಮನವರಿಕೆ ಮಾಡುವುದಕ್ಕಾಗಿ ತರೂರ್ ಅವರ ನೇತೃತ್ವದ ನಿಯೋಗವು ಸದ್ಯ ಅಮೆರಿಕದಲ್ಲಿದೆ.

‘ಯಾರನ್ನೂ ಮನವೊಲಿಸಬೇಕಾಗಿಲ್ಲ. ಯಾಕೆಂದರೆ, ಮೊದಲ ದಿನದಿಂದಲೇ ನಮ್ಮ ನಿಲುವು ಒಂದೇ ಇತ್ತು. ಪಾಕಿಸ್ತಾನವು ದಾಳಿ ನಡೆಸಿದರೆ, ನಾವು ತೀವ್ರ ರೀತಿಯಲ್ಲಿ ಪ್ರತಿದಾಳಿ ನಡೆಸುತ್ತೇವೆ. ಅವರು ದಾಳಿಯನ್ನು ನಿಲ್ಲಿಸಿದರೆ, ನಾವೂ ನಿಲ್ಲಿಸುತ್ತೇವೆ. ಮೊದಲ ದಿನವೂ ಇದನ್ನೇ ಹೇಳಿದ್ದೇವೆ. ಕೊನೆಯ ದಿನವೂ ಇದನ್ನೇ ಹೇಳಿದ್ದೇವೆ’ ಎಂದರು.

‘ಈ ಕಾರಣದಿಂದ ಸಂಘರ್ಷ ನಿಲ್ಲಿಸುವಂತೆ ನಮಗೆ ಯಾರೂ ಹೇಳಬೇಕಾಗಿ ಬರುವುದಿಲ್ಲ. ಪಾಕಿಸ್ತಾನದೊಂದಿಗೆ ಅಮೆರಿಕದವರು ಹಲವು ವಿಚಾರಗಳ ಬಗ್ಗೆ ಮಾತನಾಡಿರಬಹುದು. ಅವರ ಮಧ್ಯೆ ಏನು ಮಾತುಕತೆ ನಡೆದಿದೆ ಎಂದು ನಮಗೆ ತಿಳಿಯುವುದಿಲ್ಲ. ಯಾಕೆಂದರೆ ನಾನು ಪಾಕಿಸ್ತಾನದವನೂ ಅಲ್ಲ, ಅಮೆರಿಕದವನೂ ಅಲ್ಲ’ ಎಂದು ಅಭಿಪ್ರಾಯಪಟ್ಟರು.

ತಮ್ಮ ಹೇಳಿಕೆಗಳ ಕುರಿತು ಕಾಂಗ್ರೆಸ್ ನಾಯಕರ ಆಕ್ಷೇಪಗಳ ಬಗ್ಗೆ ಕೇಳಿದಾಗ, ‘ರಾಷ್ಟ್ರದ ಹಿತದೃಷ್ಟಿಯಿಂದ ಕೆಲಸ ಮಾಡುವುದು ಪಕ್ಷ ವಿರೋಧಿ ಚಟುವಟಿಕೆ ಎಂದು ಯಾರಾದರು ಅಂದುಕೊಂಡರೆ, ನಿಜವಾಗಿಯೂ ಅವರು ತಮ್ಮೊಳಗೆ ಒಮ್ಮೆ ಇಳಿದು ನೋಡಿಕೊಳ್ಳಬೇಕು. ನಮ್ಮನ್ನು ಪ್ರಶ್ನಿಸುವುದಲ್ಲ. ದೇಶದ ಕೆಲಸ ಮಾಡುವವನು ತನ್ನ ವಿರುದ್ಧದ ಮಾತುಗಳಿಗೆ ತಲೆಕೆಡಿಸಿಕೊಳ್ಳಬಾರದು’ ಎಂದರು.

‘ನಾನು ಸಂಸದನಾಗಿ ಆಯ್ಕೆ ಆಗಿದ್ದೇನೆ. ನನ್ನ ಅವಧಿ ಮುಗಿಯುವುದಕ್ಕೆ ಇನ್ನೂ ನಾಲ್ಕು ವರ್ಷಗಳಿವೆ. ಇಂಥ ಪ್ರಶ್ನೆಗಳನ್ನು ಯಾಕಾಗಿ ಕೇಳುತ್ತೀರಿ?’ ಎಂದು ಬಿಜೆಪಿ ಸೇರ್ಪಡೆ ಕುರಿತ ಸುದ್ದಿಗಳಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.