ವಾಷಿಂಗ್ಟನ್ : ಕೆನಡಾ ಮತ್ತು ಮೆಕ್ಸಿಕೊದ ವಸ್ತುಗಳ ಮೇಲೆ ಮಂಗಳವಾರದಿಂದ ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. ಇದರೊಂದಿಗೆ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಶೇಕಡಾ 10ರಷ್ಟು ಸುಂಕವನ್ನು ದ್ವಿಗುಣಗೊಳಿಸಲಿರುವುದಾಗಿ ಅವರು ಹೇಳಿದ್ದಾರೆ.

ಫೆಂಟಾನಿಲ್ನಂತಹ ಡ್ರಗ್ಸ್ಗಳನ್ನು ಅಮೆರಿಕಕ್ಕೆ ಅತಿಯಾಗಿ ಕಳ್ಳಸಾಗಣೆ ಮಾಡಲಾಗುತ್ತಿದೆ. ಆಮದು ಸುಂಕಗಳಿಂದಾಗಿ ಇತರ ದೇಶಗಳು ಕಳ್ಳಸಾಗಣೆಯನ್ನು ತಡೆಯುವ ಒತ್ತಡಕ್ಕೆ ಸಿಲುಕುತ್ತವೆ ಎಂದು ಟ್ರಂಪ್, ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ ಮೂಲಕ ತಿಳಿಸಿದ್ದಾರೆ.

‘ಅಮೆರಿಕಕ್ಕೆ ನಷ್ಟವುಂಟಾಗುವುದನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ. ಪ್ರಸ್ತಾವಿತ ಸುಂಕಗಳು ಮಾರ್ಚ್ 4ರಿಂದ ಜಾರಿಗೆ ಬರಲಿವೆ. ಅದೇ ದಿನದಿಂದ ಚೀನಾಕ್ಕೂ ಹೆಚ್ಚುವರಿ ಶೇ 10ರಷ್ಟು ಸುಂಕ ವಿಧಿಸಲಾಗುವುದು’ ಎಂದು ಟ್ರಂಪ್ ತಿಳಿಸಿದ್ದಾರೆ.

‘ಅಮೆರಿಕವು ಸುಂಕವನ್ನು ರದ್ದುಗೊಳಿಸದಿದ್ದರೆ ನಾವೂ ಅದರ ಉತ್ಪನ್ನಗಳಿಗೆ ಸುಂಕ ವಿಧಿಸಬಹುದು. ಆದರೆ. ನಾವು ಆ ಮಟ್ಟಕ್ಕೆ ಇಳಿಯುವುದಿಲ್ಲ’ ಎಂದು ಕೆನಡಾ ಹೇಳಿದೆ.

‘ವಾಷಿಂಗ್ಟನ್ನಲ್ಲಿ ನಡೆದ ಕ್ಯಾಬಿನೆಟ್ ಮಟ್ಟದ ಸಭೆಗಳು ಮುಗಿದ ಬಳಿಕ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಮಾರ್ಚ್ 4ರಂದು ನಾವು ಹೊಸ ನಿರ್ಧಾರವನ್ನು ಘೋಷಿಸಬಹುದು’ ಎಂದು ಮೆಕ್ಸಿಕೊ ಅಧ್ಯಕ್ಷ ಕ್ಲೌಡಿಯಾ ಶೀನ್ಬಾಮ್ ಅವರು ಹೇಳಿದ್ದಾರೆ.

ಮಾತುಕತೆಗಳ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಚೀನಾದ ವಾಣಿಜ್ಯ ಸಚಿವ ವಾಂಗ್ ಗೋವೊ ಅವರು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮೀಸನ್ ಗ್ರೀರ್ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.