ವಾಷಿಂಗ್ಟನ್: ಚೀನಾ ಸೇರಿ ಹಲವು ರಾಷ್ಟ್ರಗಳಿಂದ ಆಮದಾಗುವ ಉತ್ಪನ್ನಗಳ ಮೇಲೆ ಭಾರಿ ಪ್ರಮಾಣ ತೆರಿಗೆ ಹೇರಿದ್ದ ಡೊನಾಲ್ಡ್ ಟ್ರಂಪ್ ಆಡಳಿತ, ಶುಕ್ರವಾರ ಅಲ್ಪ ವಿನಾಯಿತಿ ನೀಡಿದೆ. ಸ್ಮಾರ್ಟ್ಫೋನ್, ಕಂಪ್ಯೂಟರ್, ಸೆಮಿಕಂಡಕ್ಟರ್ ಹಾಗೂ ಈ ಮಾದರಿಯ ಉತ್ಪನ್ನಗಳಿಗೆ ಸುಂಕ ವಿನಾಯಿತಿ ನೀಡುವುದಾಗಿ ಘೋಷಿಸಿದೆ.
.ಟ್ರಂಪ್ ಏಟಿಗೆ ಚೀನಾ ಎದಿರೇಟು: ಅಮೆರಿಕದ ಉತ್ಪನ್ನಗಳ ಮೇಲೆ ಶೇ 125ರಷ್ಟು ತೆರಿಗೆ.
ಟ್ರಂಪ್ ಈ ನಿಲುವಿನಿಂದ ಆ್ಯಪಲ್ ಹಾಗೂ ಡೆಲ್ನಂತಹ ತಂತ್ರಜ್ಞಾನ ಕಂಪನಿಗಳಿಗೆ ಲಾಭವಾಗಲಿದೆ. ಐಫೋನ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ದರದ ಮೇಲೆ ಹೆಚ್ಚಿನ ಪರಿಣಾಮ ಬೀರದು.

ಪ್ರತಿ ಸುಂಕದಿಂದ ಹೊರಗಿಡಲಾಗಿರುವ ಉತ್ಪನ್ನಗಳ ಪಟ್ಟಿಯನ್ನು ಅಮೆರಿಕದ ಸುಂಕ ಹಾಗೂ ಗಡಿ ಭದ್ರತಾ ಇಲಾಖೆ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಮೊಡೆಮ್, ರೂಟರ್, ಫ್ಲ್ಯಾಶ್ ಡ್ರೈವ್ ಹಾಗೂ ತಂತ್ರಜ್ಞಾನ ಉತ್ಪನ್ನಗಳೂ ಸೇರಿವೆ. ಇವುಗಳನ್ನು ಅಮೆರಿಕದಲ್ಲಿ ಅಷ್ಟಾಗಿ ಉತ್ಪಾದಿಸಲಾಗುವುದಿಲ್ಲ.
.ಟ್ರಂಪ್ ಸುಂಕ ನೀತಿ; ಒಟ್ಟಾಗಿ ವಿರೋಧಿಸೋಣ: ಯುರೋಪಿಯನ್ ಒಕ್ಕೂಟಕ್ಕೆ ಚೀನಾ ಅಧ್ಯಕ್ಷ.
ಆದರೆ ಈ ಹಿಂದೆ ಚೀನಾದ ಮೇಲೆ ವಿಧಿಸಿದ್ದ ಸುಂಕ ಎಂದಿನಂತೆ ಅನ್ವಯವಾಗಲಿದೆ. ಹೊಸದಾಗಿ ಹೇರಿದ್ದ ಶೇ 145ರಷ್ಟು ಪ್ರತಿಸುಂಕದಿಂದ ಮಾತ್ರ ವಿನಾಯಿತಿ ನೀಡಲಾಗಿದೆ. ಅಮೆರಿಕಕ್ಕೆ ಫೆಂಟನಿಲ್ ಸಾಗಿಸುವುದರಲ್ಲಿ ಚೀನಾದ ಪಾತ್ರ ಇದೆ ಎಂದು ಆರೋಪಿಸಿ ಶೇ 20ರಷ್ಟು ತೆರಿಗೆ ವಿಧಿಸಿತ್ತು.

ಜಗತ್ತಿನ ಎರಡು ದೈತ್ಯ ಆರ್ಥಿಕತೆಗಳ ನಡುವಿನ ಈ ವ್ಯಾಪಾರ ಯುದ್ಧದಿಂದಾಗಿ ಕಂಪನಿಗಳ ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿತ್ತು. ಆ್ಯಪಲ್ ಮತ್ತು ಎನ್ವಿಡಿಯಾದಂತಹ ತಂತ್ರಜ್ಞಾನ ದೈತ್ಯ ಕಂಪನಿಗಳಿಗೆ ಲಾಭ ಕುಸಿತದ ಭೀತಿ ಎದುರಾಗಿತ್ತು. ಟ್ರಂಪ್ ತೆರಿಗೆ ಘೋಷಣೆ ಬೆನ್ನಲ್ಲೇ ಐಫೋನ್ಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದರು. ಸ್ಮಾರ್ಟ್ಫೋನ್, ಕಂಪ್ಯೂಟರ್ ಮತ್ತು ಇತರ ಗ್ಯಾಜೆಟ್ಗಳಿಗೆ ಭಾರಿ ಬೇಡಿಕೆ ಬಂದಿತ್ತು.
.ಸಂಪಾದಕೀಯ | ಟ್ರಂಪ್ ಸಾರಿದ ಸುಂಕ ಸಮರ: ವ್ಯಾಪಾರ ವ್ಯವಸ್ಥೆ ಬುಡಮೇಲು?.
ಸದ್ಯ ಈ ಉತ್ಪನ್ನಗಳಿಗೆ ಸುಂಕ ವಿನಾಯಿತಿ ನೀಡುವ ಟ್ರಂಪ್ ನಿರ್ಧಾರದಿಂದ ಹೆಚ್ಚುವರಿ ಹಣದುಬ್ಬರ ತಗ್ಗಲಿದೆ. ಆರ್ಥಿಕ ಹಿಂಜರಿತದ ಭೀತಿ ದೂರವಾಗಬಹುದು ಎಂದು ಅನೇಕ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
.Trump Tariffs: ಟ್ರಂಪ್ ಸುಂಕದ ಬಿರುಗಾಳಿಗೆ ತತ್ತರಿಸಿದ ಭಾರತೀಯ ಮಾರುಕಟ್ಟೆ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.