ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ರಾಜಧಾನಿ ಕೀವ್‌ನ ಪ್ರಮುಖ ಮೂಲಸೌಕರ್ಯಗಳ ಮೇಲೆ ರಷ್ಯಾ ದಾಳಿ

Last Updated 14 ಜನವರಿ 2023, 9:20 IST
ಅಕ್ಷರ ಗಾತ್ರ

ಕೀವ್‌ (ಉಕ್ರೇನ್): ರಾಜಧಾನಿ ಕೀವ್‌ನಲ್ಲಿನ ಪ್ರಮುಖ ಮೂಲಸೌಕರ್ಯ ವ್ಯವಸ್ಥೆಗಳ ಮೇಲೆ ರಷ್ಯಾ ಸೇನೆ ಶನಿವಾರ ಕ್ಷಿಪಣಿ ದಾಳಿ ನಡೆಸಿದೆ. ರಾಜಧಾನಿ ವಯಲದಲ್ಲಿರುವ ನಿಪ್ರೊವ್‌ಸ್ಕೀ ಜಿಲ್ಲೆಯಲ್ಲಿ ಸ್ಫೋಟದ ಸದ್ದು ಮೊಳಗಿದೆ ಎಂದು ಉಕ್ರೇನ್‌ ಅಧ್ಯಕ್ಷರ ಕಚೇರಿಯಲ್ಲಿರನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಾಯು ದಾಳಿ ಎಚ್ಚರಿಕೆ ಸೈರನ್‌ ಮೊಳಗುವುದಕ್ಕೂ ಮುನ್ನ ಕೀವ್‌ನಲ್ಲಿ ಸರಣಿ ಸ್ಫೋಟಗಳು ಕೇಳಿ ಬಂದಿವೆ. ಆಶ್ರಯ ತಾಣಗಳಲ್ಲಿ ಉಳಿಯುವಂತೆ ನಗರದ ನಿವಾಸಿಗಳಿಗೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ನಿರ್ಣಾಯಕ ಮೂಲಸೌಕರ್ಯಗಳ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ದಾಳಿಯ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಕಿರಿಲೊ ತಿಮೊಶೆಂಕೊ ಮಾಹಿತಿ ನೀಡಿದ್ದಾರೆ.

ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿದೆ ಎಂದು ಉಕ್ರೇನ್‌ ಸೇನಾಡಳಿತ ಖಚಿತಪಡಿಸಿದೆ. ಆದರೆ, ನಿರ್ದಿಷ್ಟವಾಗಿ ಯಾವೆಲ್ಲ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

'ನಿಪ್ರೊವ್‌ಸ್ಕೀ ಜಿಲ್ಲೆಯಲ್ಲಿ ಸ್ಫೋಟ ಸಂಭವಿಸಿದೆ. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಜನರು ಆಶ್ರಯ ಶಿಬಿರಗಳಲ್ಲೇ ಉಳಿಯಿರಿ' ಎಂದು ಕೀವ್‌ ಮೇಯರ್‌ ವಿತಾಲಿ ಕ್ಲಿಸ್‌ಚ್ಕೊ ಟೆಲಿಗ್ರಾಂ ಮೂಲಕ ತಿಳಿಸಿದ್ದಾರೆ.

ಕೀವ್‌ನ ಪಶ್ಚಿಮಕ್ಕಿರುವ ಹೊಲೊಸೀವ್‌ಸ್ಕೀ ಜಿಲ್ಲೆಯ ಜನವಸತಿಯಿಲ್ಲದ ಪ್ರದೇಶದಲ್ಲಿ ಕ್ಷಿಪಣಿಯ ಅವಶೇಷಗಳು ಬಿದ್ದಿವೆ ಎಂದೂ ಅವರು ಹೇಳಿದ್ದಾರೆ.

ರಷ್ಯಾ ಸೇನೆ ಕಳೆದ ಅಕ್ಟೋಬರ್‌ನಿಂದಲೂ ಉಕ್ರೇನ್‌ನ ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ ದಾಳಿಯನ್ನು ನಡೆಸುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT