ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್ ಪೋಸ್ಟ್‌ಗಳ ಮೇಲೆ ಸಿರಿಯಾದಲ್ಲಿ ಅಮೆರಿಕ ದಾಳಿ

Published 10 ನವೆಂಬರ್ 2023, 2:30 IST
Last Updated 10 ನವೆಂಬರ್ 2023, 2:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪೂರ್ವ ಸಿರಿಯಾದಲ್ಲಿ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾಗೂ ಸಹವರ್ತಿ ಸಂಘಟನೆಗಳು ಬಳಸಿದ್ದ ಪೋಸ್ಟ್‌ಗಳ ಮೇಲೆ ಅಮೆರಿಕವು ಸ್ವಯಂ ರಕ್ಷಣೆಗಾಗಿ ದಾಳಿ ನಡೆಸಿದೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ.

ಐಆರ್‌ಜಿಸಿ ಹಾಗೂ ಸಹವರ್ತಿ ಸಂಘಟನೆಗಳು ಇತ್ತೀಚೆಗೆ ಇರಾಕ್ ಹಾಗೂ ಸಿರಿಯಾದಲ್ಲಿರುವ ಅಮೆರಿಕದ ಮೈತ್ರಿ ನೆಲೆಗಳ ಮೇಲೆ ದಾಳಿ ಮಾಡಿದ್ದಕ್ಕೆ ಉತ್ತರವಾಗಿ ಈ ದಾಳಿ ನಡೆಸಲಾಗಿದೆ ಎಂದು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಒಲಿವಿಯ ಡಾಲ್ಟನ್‌ ಅವರು ತಿಳಿಸಿದ್ದಾರೆ.

‘ಅಧ್ಯಕ್ಷ ಜೋ ಬೈಡೆನ್ ಅವರ ನಿರ್ದೇಶನದ ಮೇರೆಗೆ ಐಆರ್‌ಜಿಸಿ ಹಾಗೂ ಸಹವರ್ತಿ ಸಂಘಟನೆಗಳು ಪೂರ್ವ ಸಿರಿಯಾದಲ್ಲಿ ಬಳಸಿದ್ದ ಪೋಸ್ಟ್‌ಗಳ ಮೇಲೆ ಸ್ವಯಂ ರಕ್ಷಣಾ ವಾಯು ದಾಳಿ ನಡೆಸಲಾಗಿದೆ’ ಎಂದು ಡಾಲ್ಟನ್‌ ತಿಳಿಸಿದ್ದಾರೆ.

ಐಸಿಸ್‌ ವಿರುದ್ಧ ಕಾರ್ಯಾಚರಣೆಗೆ ಈ ಸೇನಾಪಡೆಗಳನ್ನು ಇರಾಕ್ ಹಾಗೂ ಸಿರಿಯಾದಲ್ಲಿ ನಿಯೋಜಿಸಲಾಗಿದೆ.

‘ಈ ದಾಳಿಗಳು ಒಪ್ಪಿಕೊಳ್ಳುವಂಥದ್ದು ಅಲ್ಲ. ಇದು ಮುಂದುವರಿಯಲೂಬಾರದು. ನಮ್ಮ ಜನರು ಹಾಗೂ ನಮ್ಮವರ ಕುಟುಂಬಗಳನ್ನು ರಕ್ಷಿಸಲು ಹಾಗೂ ಮುಂದಿನ ಕ್ರಮ ತೆಗೆದುಕೊಳ್ಳಲು ಅಧ್ಯಕ್ಷ ಜೋ ಬೈಡೆನ್‌ ಹಾಗೂ ಅಮೆರಿಕ ಸರ್ಕಾರ ಸಂಪೂರ್ಣವಾಗಿ ತಯಾರಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಐಆರ್‌ಜಿಸಿ ಹಾಗೂ ಸಹವರ್ತಿ ಸಂಘಟನೆಗಳು ಬಳಕೆ ಮಾಡಿದ್ದ ಶಸ್ತ್ರಗಾರದ ಮೇಲೆ ದಾಳಿ ನಡೆಸಲಾಗಿದೆ. ಅಮೆರಿಕ ಕೇಂದ್ರ ಕಮಾಂಡ್‌ ಪಡೆಯು ಎಫ್–15 ಎಸ್ ಯುದ್ಧವಿಮಾನದ ಮೂಲಕ ದಾಳಿ ನಡೆಸಲಾಗಿದೆ. ದಾಳಿಯ ಮೌಲ್ಯಮಾಪನ ಮಾಡುತ್ತಿದ್ದೇವೆ ಎಂದು ಡಾಲ್ಟನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT