ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್‌, ಸಿರಿಯಾದ ಮೇಲೆ ಅಮೆರಿಕ ಪಡೆಗಳ ಡ್ರೋನ್‌, ರಾಕೆಟ್ ದಾಳಿ

Published 24 ನವೆಂಬರ್ 2023, 2:47 IST
Last Updated 24 ನವೆಂಬರ್ 2023, 2:47 IST
ಅಕ್ಷರ ಗಾತ್ರ

ಬಾಗ್ದಾದ್: ಅಮೆರಿಕ ಸೇನಾ ‍‍ಪಡೆಗಳು ಗುರುವಾರ ಕೆಲವೇ ಗಂಟೆಗಳ ಅಂತರದಲ್ಲಿ ರಾಕೆಟ್‌ ಹಾಗೂ ಶಸ್ತ್ರ ಸಜ್ಜಿತ ಡ್ರೋನ್ ಬಳಸಿ ಇರಾಕ್‌ ಹಾಗೂ ಸಿರಿಯಾ ಮೇಲೆ 4 ಬಾರಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಯಾವುದೇ ಸಾವು–ನೋವು ಅಥವಾ ಮೂಲಭೂತ ಸೌಕರ್ಯಗಳಿಗೆ ಹಾನಿ ಉಂಟಾಗಿಲ್ಲ ಎಂದು ಅಮೆರಿಕ ಮಿಲಿಟರಿ ಅಧಿಕಾರಿ ತಿಳಿಸಿದ್ದಾರೆ.

ಅಮೆರಿಕ ಸೇನಾ ಪಡೆಗಳು ಹಾಗೂ ಅಂತರರಾಷ್ಟ್ರೀಯ ಪಡೆಗಳು ರಾಕೆಟ್ ಹಾಗೂ ಡ್ರೋನ್ ಬಳಸಿ ಸಿರಿಯಾದ 2 ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಹೆಸರು ಗೌಪ್ಯವಾಗಿಡಲು ಷರತ್ತು ವಿಧಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇರಾಕ್‌ನ ಪಶ್ಚಿಮ ಬಾಗ್ದಾದ್‌ನಲ್ಲಿರುವ ಅಲ್‌– ಅಸಾದ್‌ ವಾಯುನೆಲೆಯಿಂದ ಒಂದು ಡ್ರೋನ್ ಹಾಗೂ ಉತ್ತರ ಇರಾಕ್‌ನ ಇರ್‌ಬಿಲ್ ಏರ್‌ಪೋರ್ಟ್‌ ಸಮೀಪದ ಅಮೆರಿಕದ ವಾಯುನೆಲೆಯಿಂದ ಮತ್ತೊಂದು ಡ್ರೋನ್‌ ಉಡಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇರಾನ್ ಬೆಂಬಲಿತ ಶಸ್ತ್ರ ಸಜ್ಜಿತ ಕತೇಬ್‌ ಹೆಜ್ಬುಲ್ಲಾ ಗುಂಪಿನ ಮೇಲೆ ದಾಳಿ ನಡೆಸಿದ ಮರುದಿನವೇ ಅಮೆರಿಕ ಈ ದಾಳಿ ನಡೆಸಿದೆ. ಆ ದಾಳಿಯಲ್ಲಿ 8 ಮಂದಿ ಸಾವಿಗೀಡಾಗಿದ್ದರು. ಹೆಜ್ಬುಲ್ಲಾ ಮೇಲಿನ ದಾಳಿಯನ್ನು ಇರಾಕ್‌ ಸರ್ಕಾರ ಖಂಡಿಸಿತ್ತು. ಇದು ದೇಶದ ಸಾರ್ವಭೌಮತೆಯ ಉಲ್ಲಂಘನೆ ಎಂದಿತ್ತು.

ಅಕ್ಟೋಬರ್‌ ತಿಂಗಳ ಬಳಿಕ ಇರಾನ್ ಬೆಂಬಲಿತ ಸಂಘಟನೆಯು ಅಮೆರಿಕ ಹಾಗೂ ಅಂತರರಾಷ್ಟ್ರೀಯ ಸೇನೆ ಮೇಲೆ 12ಕ್ಕೂ ಅಧಿಕ ಬಾರಿ ದಾಳಿ ನಡೆಸಿದೆ. ಇದಕ್ಕೆ ಪ್ರತೀಕಾರವಾಗಿ ಅಮೆರಿಕ ದಾಳಿ ಸಂಘಟಿಸಿದೆ.

ಗುರುವಾರದವರೆಗೆ ಇರಾನ್‌ನಲ್ಲಿ 36 ಹಾಗೂ ಸಿರಿಯಾದಲ್ಲಿ 37 ದಾಳಿಗಳನ್ನು ನಡೆಸಲಾಗಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT