ನವದೆಹಲಿ: ಪ್ರಾಣಿ, ರಾಕ್ಷಸ ಅಥವಾ ವಿಕಾರವಾದ ಮುಖ ಭಾವದ ಮಾಸ್ಕ್ ಧರಿಸಿ ಜನರನ್ನು ಹೆದರಿಸುವ ಕುಚೇಷ್ಟೆಗಳು ಹೊಸತೇನೂ ಅಲ್ಲ. ಆದರೆ, ಇಂಥದ್ದೇ ಚೇಷ್ಟೆಯ ಪ್ರಯೋಗಕ್ಕೆ ಇಳಿದಿರುವ ವ್ಯಕ್ತಿಗೆ ಪಾಕಿಸ್ತಾನದ ಪೇಶಾವರದಲ್ಲಿ ಅಲ್ಲಿನ ಪೊಲೀಸರು ಕೈಕೋಳ ಹಾಕಿದ್ದಾರೆ. ಮುಸುಕುಧಾರಿ ವ್ಯಕ್ತಿಯ ಬಂಧನ ಕುರಿತ ಪೋಸ್ಟ್ ವೈರಲ್ ಆಗಿದೆ.

2021ರ ಜನವರಿ 1ರಂದು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪೇಶಾವರದಲ್ಲಿ ವ್ಯಕ್ತಿಯೊಬ್ಬ ಕ್ರೂರ ಪ್ರಾಣಿ ಮುಖದಂತಹ ಮಾಸ್ಕ್ ಧರಿಸಿ ಜನರನ್ನು ಭಯ ಪಡಿಸಲು ಪ್ರಯತ್ನಿಸಿದ್ದ. ಆತನನ್ನೂ ಸಹ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು.

ಮಂಗಳವಾರ ಪತ್ರಕರ್ತೆ ನೈಲಾ ಇನಾಯತ್ ಅವರು ಟ್ವಿಟರ್ನಲ್ಲಿ ಮುಸುಕುಧಾರಿಯ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ. ಮುಸುಕುಧಾರಿಯನ್ನು ಪೊಲೀಸರು ಬಂಧಿಸಿರುವುದು, ಲಾಕ್ಅಪ್ನಲ್ಲಿ ಆ ವ್ಯಕ್ತಿ ಮಾಸ್ಕ್ ತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. 'ಜನರನ್ನು ಹೆದರಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಈ ವ್ಯಕ್ತಿ ಬಯಸಿದ್ದ....' ಎಂದು ವಿಡಿಯೊ ಜೊತೆಗೆ ಪ್ರಕಟಿಸಿದ್ದಾರೆ.

2021ರ ಜನವರಿ 1ರಂದು ಬಂಧನಕ್ಕೆ ಒಳಗಾಗಿದ್ದ ಮುಸುಕುಧಾರಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.