ಶನಿವಾರ, 13 ಡಿಸೆಂಬರ್ 2025
×
ADVERTISEMENT

ಮಿರ್ಚಿ-ಮಂಡಕ್ಕಿ

ADVERTISEMENT

ಮೋಅನ ಮತ್ತು ದೆವ್ವದ ರೂಮು

ರೂಮಿನಲ್ಲಿ ಕೂತಿದ್ದ ವಿಜಿಯನ್ನು ಕರೆಯಲು ರಶ್ಮಿ ಧಡಭಡ ಓಡಿ ಬಂದಳು. ಮಧ್ಯಾಹ್ನ ಕ್ಲಾಸು ಮುಗಿಸಿ ಬಂದು, ಊಟ ಮಾಡಿ, ಬಟ್ಟೆ ತೊಳೆದು ಒಣಗಲು ಹಾಕಿ ಅಸಾಧ್ಯ ಶೆಖೆಯಲ್ಲೂ ಇಬ್ಬರೂ ಸುಖವಾಗಿ ಮಲಗಿದ್ದರು. ರಶ್ಮಿ ಟೀ ಕುಡಿಯಲಿಕ್ಕೆಂದು ಲೋಟ ಹಿಡಿದುಕೊಂಡು ಮೆಸ್ಸಿಗೆ ಹೋದವಳು ಹೊರಗೆ ಇಣುಕಿ ನೋಡಿದಳು. ಕಪ್ಪನೆ ಮೋಡ ತೂಗುತ್ತಿದೆ. ಯಾವ ಕ್ಷಣದಲ್ಲಾದರೂ ಕಪ್ಪನೆ ಮೋಡ ಸ್ಫಟಿಕ ಶುಭ್ರ ಹನಿಗಳನ್ನು ಭೂಮಿಗೆ ಕಳಿಸುವ ತಯಾರಿ ಮಾಡುತ್ತಿತ್ತು.
Last Updated 16 ಜೂನ್ 2018, 9:04 IST
fallback

ಮೊಟ್ಟೆಯೊಡೆದು ಹೊರಬರುವಾಗ...

ವಾಸಕ್ಕೆಂದು ಮೊದಲ ಬಾರಿ ಮೈಸೂರಿಗೆ ಬಂದವರಿಗೆ ಕಾಣುವುದು ಅರಮನೆಯಲ್ಲ, ಅಥವಾ ಕೆಆರ್‌ಎಸ್ ಕೂಡ ಅಲ್ಲ. ಅವೆರಡರ ಜೊತೆ ಮೈಸೂರಿನ ಇನ್ನೂ ಹತ್ತು ಹಲವಾರು ಅದ್ಭುತಗಳು ಮನಸ್ಸನ್ನು ಸೂರೆಗೊಳ್ಳುವುದು ಸ್ವಲ್ಪ ಸಮಯದ ನಂತರವೇ.
Last Updated 16 ಜೂನ್ 2018, 9:04 IST
fallback

ಬೈಗುಳವೆಂಬ ಮಿಂಚಿನ ಶಲಾಕೆ

ಅಯ್ಯೋ, ಮಾತ್ ಮಾತಿಗೂ ಜಗಳಕ್ಕೇ ಬಂದವರ ಹಾಗೆ ಮಾತಾಡ್ತಾರಪ್ಪಾ! ಅಲ್ದೆ ಎಷ್ಟ್ ಬೈಗುಳ ಉಪ್ಯೋಗಿಸ್ತಾರೆ ಅಂತಾ? ನಮ್ಮ ಚಿಕ್ಕಮ್ಮನ ಮಗಳನ್ನು ನಿಮ್ಮೂರಿನ ಕಡೆನೇ ಮದುವೆ ಮಾಡಿದ್ರು. ಆ ಮನೇಲಿ ಬೈಗುಳ ಕೇಳಕ್ಕಾಗಲ್ಲ, ಅಲ್ದೆ ಜನ ಬೇರೆ ಒರಟು ಅಂತ ವಾಪಾಸ್ ಬಂದ್ ಬಿಟ್ಲು.
Last Updated 16 ಜೂನ್ 2018, 9:04 IST
fallback

ಪಚ್ಚೆ-ಹಸುರಿನ ಅನನ್ಯತೆಯ ಪರಿ

ಸುಮಾ, ಸುನೀತಾ, ಸುಜಾತ ಮತ್ತು ನಿಕಿತಾ ಅಲಿಯಾಸ್ ಬುಡ್ಡಿ ಪ್ರಾಣದ ಗೆಳತಿಯರು. ನಿಕಿತಾಳ ಅಪ್ಪನಿಗೆ ಅದ್ಯಾವ ಮಾಯೆಯಲ್ಲೋ ಏನೋ ರಷ್ಯನ್ ಪ್ರಭಾವವಾಗಿ ಮಗಳಿಗೆ ಚಂದದ ಹೆಸರಿಟ್ಟಿದ್ದರು. ಶರಣ ಸಂಸ್ಕೃತಿಯ ಬಹು ದೊಡ್ಡ ಕೇಂದ್ರವಾದ ಬೈಗುಳಗಳೇ ಜೀವಾಳವಾದ ದಾವಣಗೆರೆಯ ಪರಿಸರಕ್ಕೆ ಆ ಹೆಸರು ಎಷ್ಟೆಷ್ಟೂ ಹೊಂದುತ್ತಿರಲಿಲ್ಲ ಅಂತ ಅವಳ ಅಮ್ಮನಿಗೆ ಅನಿಸಿತ್ತು.
Last Updated 16 ಜೂನ್ 2018, 9:04 IST
fallback

ಲಕ್ಷಕ್ಕೆ ವರ ಬಿಕರಿಯಾದ ಕಥೆ

ದಾವಣಗೆರೆಯ ಮೂಸೆಯಲ್ಲಿ ಅದ್ದಿ ತೆಗೆದಂತಿದ್ದ ವಿಜಯಾ ಅರ್ಥಾತ್ ವಿಜಿ ಓದು ಮುಂದುವರೆಸಲು ಮೈಸೂರಿಗೆ ಬ್ಯಾಗು ಕಟ್ಟಿ ನಿಂತಳು. ಆಗೆಲ್ಲ ಡೆಂಟಲ್ಲು, ಮೆಡಿಕಲ್ಲು, ಎಂಜಿನಿಯರಿಂಗುಗಳದ್ದೇ ಕಾರುಬಾರು ಇದ್ದರೂ ಇವಳು ಯಾವುದನ್ನೂ ಆಯ್ಕೆ ಮಾಡಿಕೊಳ್ಳದೆ ಸಾಮಾನ್ಯದಲ್ಲಿ ಅತೀ ಸಾಮಾನ್ಯವೆನಿಸಿದ್ದ ಬಿ.ಎ ಮಾಡಿದ್ದಳು.
Last Updated 16 ಜೂನ್ 2018, 9:04 IST
fallback

ಚಿಂತೆಯ ಭ್ರಾಂತಿಗೆ ಸಿಕ್ಕ ಬಲಿ

ಒಂದು ಮಧ್ಯಾಹ್ನ ಕ್ಲಾಸ್ ಮುಗಿಸಿ ಹಾಸ್ಟೆಲ್ ರೂಮಿಗೆ ಬಂದ ತಕ್ಷಣ ಅಟೆಂಡರ್ ಮೋನ ವಿಜಿಯನ್ನು ಹುಡುಕಿಕೊಂಡು ಬಂದ. ರೂಮಿನ ಹೊರಗೇ ನಿಂತು ಉಸಿರು ತಿರುಗುವುದರೊಳಗೆ ಹತ್ತು ಸಾರಿ ಕರೆದ. ಮುಖ ತೊಳೆದುಕೊಳ್ಳುತ್ತಿದ್ದವಳಿಗೆ ರೇಗಿ ಹೋಯಿತು. ಮುಖದ ತುಂಬೆಲ್ಲ ಸೋಪು ಮೆತ್ತಿದೆ, ಓ ಎನ್ನಲೂ ಕಷ್ಟ.
Last Updated 16 ಜೂನ್ 2018, 9:04 IST
fallback

ಎತ್ತಣ ಸಿಗ್ರೇಟು; ಎತ್ತಣ ಬೆಂಕಿ?

ದಿನಗಳು ಉರುಳಿದಂತೆಲ್ಲ ಸ್ನೇಹಿತೆಯರಾದ ರಿಂಕಿ, ಈಶ್ವರಿ, ಇಂದುಮತಿ, ರಶ್ಮಿ ಮತ್ತು ವಿಜಿ ಗಾಢವಾದ ಸ್ನೇಹಿತೆಯರಾಗುತ್ತಲೇ ಒಬ್ಬರನ್ನೊಬ್ಬರು ಇರಿಯುವ ಭರ್ಜಿಗಳೂ ಆಗುತ್ತಿದ್ದರು. ಅದೊಂದು ಅತೀವ ನೈಸರ್ಗಿಕ ಪ್ರಕ್ರಿಯೆ. ಬಹಳ ಸಹಜವಾಗಿ ದಟ್ಟವಾಗುತ್ತಲೇ ಅಳ್ಳಕವೂ ಆಗಿಬಿಡುವ ಸಂಬಂಧಗಳೆಂದರೆ ಒಂದು ಮದುವೆ, ಅದನ್ನು ಬಿಟ್ಟರೆ ಸ್ನೇಹ.
Last Updated 16 ಜೂನ್ 2018, 9:04 IST
fallback
ADVERTISEMENT

ಸರ್ವ ರೋಗಾನಿಕಿ ಕುದುರೆ ಸಾರೇ ಮದ್ದು

ಶಿವರಾಜನಿಗೆ ‘ದಿನಕ್ಕೊಂದು ಇಂಗ್ಲಿಶ್ ಪದ’ ಅಂತ ಪ್ರಾಮಿಸ್ ಮಾಡಿದ ರಶ್ಮಿ ಮತ್ತೆ ಮಾತಾಡಿಸುವ ಗೋಜಿಗೆ ಹೋಗಿರಲಿಲ್ಲ. ಅದ್ಯಾಕೋ ಏನೋ ಅವಳ ಮೌನ ಬಹಳ ಅಸಹನೀಯವಾಗಿತ್ತು. ಅವಳ ಮಾತು ಬರಬರುತ್ತಾ ಕಡಿಮೆಯಾಗಿ ಸಂಪೂರ್ಣವಾಗಿ ನಿಂತು ಹೋಗುವ ಹಂತಕ್ಕೆ ಬಂದಿತ್ತು.
Last Updated 16 ಜೂನ್ 2018, 9:04 IST
fallback

ಜಯರಥನಿಂದ ಶುರುವಾದ ಅತಿ ಆಚಾರ

ರಶ್ಮಿಯ ಅಪ್ಪ ಆರ್ಮಿಮ್ಯಾನ್. ಅದರ ಫಲವಾಗಿ ಈ ಹುಡುಗಿ ಮೈಸೂರಲ್ಲಿ ಹುಟ್ಟಿ, ಅಖಿಲ ಭಾರತದಲ್ಲಿ ಬೆಳೆದು ಟಿಸಿಲುಗಳನ್ನು ಬೆಳೆಸಿಕೊಂಡಿದ್ದಳು. ತೀರಾ ಸಿಟ್ಟು ಬಂದರೆ ಬಾಯಲ್ಲಿ ಹಿಂದಿ ಬೈಗುಳಗಳು, ಇಂಗ್ಲಿಷಿನ ‘ಬ್ಲಡಿ’ ’**** ಯೂ’ ಗಳೂ ಹೂವು ಅರಳುವಷ್ಟೇ ಸಹಜವಾಗಿ ಅರಳುತ್ತಿದ್ದವು.
Last Updated 16 ಜೂನ್ 2018, 9:04 IST
fallback

ಮೊಸರಿನಿಂದ ಮೆಹಂದಿ ಖರ್ಚಿನವರೆಗೆ...

ಯರ್ಲಗಡ್ಡ ಈಶ್ವರಿ ಯಾಕೋ ಬಹಳ ಸುಸ್ತಾದಂತಿದ್ದಳು. ಒಂಥರಾ ಆಲಸ್ಯ. ಯಾರ ಹತ್ತಿರವೂ ಮಾತಿಲ್ಲ. ನಿಜವಾದ ಹಿಂಸೆ ನೋಡಬೇಕು ಅಂದ್ರೆ ಭರ್ಜರಿ ದಾಂದಲೆ ಹಾಕುವವರ ಜೊತೆ ಒಂದು ಸೈಲೆಂಟ್ ಪಾರ್ಟಿ ಸೇರಿಸಿಬಿಡಬೇಕು. ಆ ಪಾರ್ಟಿ ಮಾತಾಡಲ್ಲ, ಉಳಿದವರು ಅದನ್ನು ಅಲಕ್ಷ್ಯ ಮಾಡಿ ಮಜಾ ಮಾಡೋ ಹಂಗೂ ಇಲ್ಲ.
Last Updated 16 ಜೂನ್ 2018, 9:04 IST
fallback
ADVERTISEMENT
ADVERTISEMENT
ADVERTISEMENT