ಯಾಂತ್ರಿಕ ಬುದ್ಧಿಮತ್ತೆಯ (ಯಾಂಬು– ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಳಕೆ ಶುರುವಾಗಿ ವರ್ಷಗಳೇ ಕಳೆದಿವೆ. ಅದನ್ನು ಬಳಸಿಕೊಂಡು ಲಾಭ ಗಳಿಸಿದವರು ಯಾಂಬುಗೆ ಇನ್ನಷ್ಟು ಶಕ್ತಿ ತುಂಬುವ ಇರಾದೆಯಲ್ಲಿದ್ದಾರೆ. ಅದರಿಂದ ಅಪಮಾನಿತರಾಗಿ ತಿರಸ್ಕರಿಸಲ್ಪಟ್ಟವರು ಮಾರುಕಟ್ಟೆಯಲ್ಲಿ
ರುವ ಯಾಂಬುಗಳ ಬುದ್ಧಿ ಸರಿ ಇಲ್ಲ, ನಾವು ಕೇಳುವುದೊಂದು ಅವು ಹೇಳುವುದೊಂದು. ಅದರ ಬಳಕೆಯಿಂದ ಸಮಯವೂ ಹಾಳು, ನೆಮ್ಮದಿಯೂ ಇಲ್ಲ ಎಂದು ನೊಂದು ನುಡಿಯುತ್ತಾರೆ. ಬಳಕೆ ಶುರುವಾದ ದಿನದಿಂದ ಒಂದಲ್ಲ ಒಂದು ವಿವಾದ ಯಾಂಬುವನ್ನು ಸುತ್ತಿಕೊಳ್ಳುತ್ತಲೇ ಇದೆ.

ಯಾಂಬು ಬಹುಜನರ ಕೆಲಸ ಕಸಿಯುತ್ತದೆ, ಅದಕ್ಕೆ ಭಾವನೆಗಳಿಲ್ಲ, ಎಷ್ಟೋ ಪ್ರಶ್ನೆಗಳಿಗೆ ಅದರಲ್ಲಿ ಉತ್ತರವಿಲ್ಲ ಎಂಬ ಆರೋಪಗಳು ಮೊದಲಿನಿಂದಲೂ ಇವೆ. ಇವೆಲ್ಲಕ್ಕಿಂತಲೂ ಗಂಭೀರವಾದುದು ಯಾಂಬು ಪೂರ್ವಗ್ರಹಪೀಡಿತ ಎಂಬ ಆರೋಪ. ಯಾಂಬು ಕೆಲ ಜನಾಂಗದ ಜನರನ್ನು ಗುರುತಿಸುವುದೇ ಇಲ್ಲ,
ಸಬಲರಿಗೆ, ಯುವಕರಿಗೆ ಮಣೆ ಹಾಕುತ್ತದೆ. ಅಂಗವಿಕಲರನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಸಾಮಾಜಿಕವಾಗಿ ಹಿಂದುಳಿದ ಪ್ರದೇಶಗಳ ಜನರ ಸಾಲದ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ. ಮಹಿಳೆಯರನ್ನು, ಆರ್ಥಿಕವಾಗಿ ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು, ಹಿಂದೊಮ್ಮೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು, ಕಪ್ಪುವರ್ಣೀಯರನ್ನು ಅಶಕ್ತರು, ಅಪರಾಧಿಗಳು ಎಂಬಂತೆ ಬಿಂಬಿಸುತ್ತಿದೆ. ನೌಕರಿಯ ನೇಮಕಾತಿಗಳಲ್ಲಿ ಲಿಂಗತಾರತಮ್ಯ ತೋರಿದ ನಿದರ್ಶನಗಳಿವೆ. ತನ್ನ ಉತ್ತರಗಳಲ್ಲಿ, ನಿರ್ಣಯಗಳಲ್ಲಿ ಪೂರ್ವಗ್ರಹ ತೋರುತ್ತದೆ ಎಂಬ ಆರೋಪವು ಯಾಂಬುವಿನ ಅಸ್ತಿತ್ವವನ್ನೇ ಪ್ರಶ್ನಿಸುತ್ತಿದೆ.

ಉದಾಹರಣೆಗೆ, ಲ್ಯಾಬ್ ಕೋಟ್ ಧರಿಸಿರುವ ಮಹಿಳೆಯರನ್ನು ರಸ್ತೆ ಗುಡಿಸುವವರು ಅಥವಾ ಕ್ಲೀನರ್
ಗಳು ಎಂದು ಕರೆದು ಅವಮಾನಿಸುತ್ತದೆ. ಪ್ಯಾಂಟು, ಷರ್ಟು ಧರಿಸಿದ ಮಹಿಳೆಯೊಬ್ಬರನ್ನು ಗಡ್ಡ–ಮೀಸೆ ಬೆಳೆಯದ ಎಳಸು ಯುವಕ ಎಂದು ಮೂದಲಿಸುತ್ತದೆ. ಮುಖಚಹರೆ ಪತ್ತೆ ಮಾಡುವ ಯಾಂಬು, ವ್ಯಕ್ತಿಯು ಗೌರವವರ್ಣದವರಾಗಿದ್ದರೆ ಅವರನ್ನು ಸರಿಯಾಗಿ ಗುರುತು ಹಿಡಿಯುತ್ತದೆ. ಅವರೇನಾದರೂ ಕಪ್ಪುವರ್ಣದವರಾಗಿದ್ದರೆ ತಪ್ಪು ಹೆಸರುಗಳನ್ನು ಹೇಳುತ್ತದೆ. ಸೆರೇನಾ ವಿಲಿಯಮ್ಸ್, ಮಿಶಲ್ ಒಬಾಮ, ಓಪ್ರಾ ವಿನ್ಫ್ರೇ ಇವರನ್ನೆಲ್ಲ ಬೇರೆ ಹೆಸರಿನಿಂದ ಕರೆದಿತ್ತು. ಅಷ್ಟೇ ಅಲ್ಲ, ವಿನ್ಫ್ರೇ ಅವರಲ್ಲಿ ಶೇಕಡ 76ರಷ್ಟು ಪುರುಷ ಲಕ್ಷಣಗಳಿವೆ ಎಂದು ಹೇಳಿ ದೊಡ್ಡ ಮುಜುಗರ ಸೃಷ್ಟಿಸಿತ್ತು.

ಯಾಂಬು ಸೃಷ್ಟಿಸುವ ಬಹುಪಾಲು ಚಿತ್ರಗಳು ಯುವಕ– ಯುವತಿಯರದೇ ಆಗಿರುತ್ತವೆ. ವಯಸ್ಸಾದವರಿಗೆ ಅಲ್ಲಿ ಜಾಗವೇ ಇಲ್ಲ. ಪಕ್ಷಪಾತವಷ್ಟೇ ಅಲ್ಲ ಪೋಲಿತನಕ್ಕೂ ಯಾಂಬು ಕುಪ್ರಸಿದ್ಧವಾಗಿದೆ. ಮಸಾಚುಸೆಟ್ಸ್ನ ಟೆಕ್ನಾಲಜಿ ರಿವ್ಯೂ ಪತ್ರಿಕೆಯ ಪತ್ರಕರ್ತೆ ಮೆಲಿಸ್ಸಾ ಹೈಕ್ಕಿಲ ಅವರು ಮಾದಕ ಮಹಿಳೆಯರ ಚಿತ್ರಗಳನ್ನು ನೀಡು ಎಂದು ಯಾಂಬು ಆ್ಯಪ್ ‘ಲೆನ್ಸಾ’ವನ್ನು ಕೇಳಿದಾಗ ಕಂಪ್ಯೂಟರ್ ತೆರೆಯ ಮೇಲೆ ಅರೆಬರೆ ಬಟ್ಟೆ ತೊಟ್ಟ ಮಹಿಳೆಯರ ಚಿತ್ರಗಳು ಮೂಡಿಬಂದವು. ಚಿತ್ರಗಳಲ್ಲಿದ್ದ ಮಹಿಳೆಯರೆಲ್ಲರೂ
ಏಷ್ಯಾದವರೇ ಆಗಿದ್ದರು. ತುಂಡು ಉಡುಗೆ ತೊಟ್ಟ ಮೆಲಿಸ್ಸಾ ಅವರ ಐದಾರು ಚಿತ್ರಗಳು ಅಲ್ಲಿದ್ದವು! ಇಷ್ಟೇ ಅಲ್ಲ, ಬಳಕೆಯಲ್ಲಿರುವ ಚಾಟ್ಬಾಟ್ಗಳಿಗೆ ಸ್ತ್ರೀಯರ ಹೆಸರಿಟ್ಟು ಮಹಿಳೆಯರನ್ನು ಸೇವಕಿಯರೆಂದು ಅವಮಾನಿಸಲಾಗಿದೆ ಎಂದು ಲಂಡನ್ ಯೂನಿವರ್ಸಿಟಿಯ ಕಾನೂನು ವಿಭಾಗದ ಪ್ರೊಫೆಸರ್ ನೋರಾ ಲಾಯ್ಡೇನ್ ಅವರು ಕೆಂಡಾಮಂಡಲವಾಗಿದ್ದರು. ಸಮಸ್ಯೆಗಳಿಗೆ ಉತ್ತರ, ಸಮಾಧಾನ ಅಥವಾ ಪರಿಹಾರ ನೀಡುವಾಗ ಯಾಂಬು ಪೂರ್ವಗ್ರಹ ತೋರಿಸುತ್ತಿರುವುದು ಎದ್ದುಕಾಣಿಸುತ್ತಿದೆ. ಇದು ಅನೇಕ ಸಾಮಾಜಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ.

ಯಾಂತ್ರಿಕ ಬುದ್ಧಿಮತ್ತೆಯನ್ನು ವಾಣಿಜ್ಯ ಉಪಯೋಗಗಳಿಗೆ ಬಳಸಲು ಆರಂಭಿಸಿದ ದಿನಗಳಲ್ಲಿ
ಎಂಟೋ ಹತ್ತೋ ವರ್ಚುವಲ್ ಅಸಿಸ್ಟೆಂಟ್ಸ್ (ನಿರಾಕಾರ ಸಹಾಯಕರು) ನಮಗೆ ಸಹಾಯ ಮಾಡುತ್ತಿದ್ದವು. ಈಗ ಅವುಗಳ ಸಂಖ್ಯೆಯು ಹಲವು ಲಕ್ಷ ದಾಟಿದೆ. ಮೊದಲು ಅವುಗಳಿಗೆ ಇಂಗ್ಲಿಷ್ ಭಾಷೆ ಮಾತ್ರ ಅರ್ಥವಾಗುತ್ತಿತ್ತು. ಈಗ ಜಗತ್ತಿನ ನೂರಾರು ಭಾಷೆಗಳಲ್ಲಿ ವ್ಯವಹರಿಸುವ ಕ್ಷಮತೆ ಪಡೆದಿವೆ. ಕನ್ನಡ, ತಮಿಳು, ತೆಲುಗು, ಮರಾಠಿ ಭಾಷೆಗಳಲ್ಲಿ ವ್ಯವಹರಿಸುವ ಯಾಂಬು ಮಾದರಿಗಳು ಮಾರುಕಟ್ಟೆಯಲ್ಲಿವೆ. ಅಲೆಕ್ಸಾ ಸಿರಿ, ಇವಾ, ಕಿಯಾ, ಕ್ಸಿಯಾಯ್ಸ, ಕೋರ್ಟ್ ನಾ, ಬಿಕ್ಸ್ ಬೈ, ಟೇ, ಎಲಿಜಾ, ವಾಟ್ಸನ್, ವಾಚಸ್ಪತಿಗಳು (ಚಾಟ್ಬಾಟ್) ಈಗಾಗಲೇ ನಮ್ಮ ನಿತ್ಯದ ಕೆಲಸಗಳಿಗೆ ನೆರವಾಗುತ್ತಿವೆ. ಸಾಧ್ಯವಾದಷ್ಟು ಸರಿ ಉತ್ತರ ನೀಡಿ ಸೈ ಎನಿಸಿಕೊಂಡು ಅಪಾರ ಜನಪ್ರಿಯತೆ ಪಡೆದಿವೆ. ತೀರಾ ಇತ್ತೀಚೆಗೆ ಮಾರುಕಟ್ಟೆಗೆ ಬಂದ ಯಾಂಬು ಗ್ರೋಕ್, ಭಾರತದಲ್ಲಿ ಬಹಳ ಬೇಗ ಜನಪ್ರಿಯವಾಗುತ್ತಿದೆ, ಅಷ್ಟೇ ವೇಗವಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ.

ಯಾಂಬುವಿನಲ್ಲಿ ಪೂರ್ವಗ್ರಹ ಧೋರಣೆ ಪ್ರಕಟಗೊಳ್ಳಲು ಮೂರು ಮುಖ್ಯ ಕಾರಣಗಳಿವೆ. ದತ್ತಾಂಶ ತರಬೇತಿ (ಡೇಟಾ ಟ್ರೈನಿಂಗ್), ಕ್ರಮಾವಳಿ ರಚನೆ (ಅಲ್ಗೊರಿದಂ) ಮತ್ತು ಬಳಕೆದಾರನ ಪ್ರಶ್ನೆಯ ಕ್ರಮಗಳಲ್ಲಿ
ರುವ ಧೋರಣೆಗಳನ್ನು ಆಧರಿಸಿ ಯಾಂಬು ಪೂರ್ವಗ್ರಹ ತೋರಿಸುತ್ತದೆ. ದತ್ತಾಂಶ ನೀಡುವವರು, ಕ್ರಮಾವಳಿ ರಚಿಸುವವರು, ಪ್ರಶ್ನೆ ಕೇಳುವವರು ಪೂರ್ವಗ್ರಹಪೀಡಿತರಾಗಿದ್ದರೆ ಅವರ ಧೋರಣೆಗಳು ಯಾಂಬು ನೀಡುವ ಉತ್ತರಗಳಲ್ಲಿ ಇದ್ದೇ ಇರುತ್ತವೆ. ಉದಾಹರಣೆಗೆ ಪ್ರತಿಮೆಯೊಂದನ್ನು ನಿರ್ಮಿಸುವ ಶಿಲ್ಪಿಯೇ ಪ್ರತಿಮೆಯ ಕೈ, ಕಾಲು, ಕಣ್ಣಿನ ದೃಷ್ಟಿ ರಚನೆಗಳನ್ನು ಸೂಕ್ಷ್ಮವಾಗಿ ಊನಗೊಳಿಸಿದ್ದರೆ
ಕಲಾಕೃತಿಯು ಸುಂದರವಾಗಿ ಕಾಣಿಸುವುದಾದರೂ ಹೇಗೆ? ಯಾಂಬುವಿನ ವಿಷಯದಲ್ಲೂ ಹಾಗೆಯೇ ಆಗುತ್ತಿದೆ. ನಾವು ಈ ಮೊದಲೇ ಪೂರ್ವಗ್ರಹದಿಂದ ಕೂಡಿದ ಮಾಹಿತಿಯನ್ನು ಇಂಟರ್ನೆಟ್ನಲ್ಲಿ ಹಾಕಿದ್ದರೆ ಯಾಂಬು ನೀಡುವ ಉತ್ತರವು ಹಾಗೆಯೇ ಇರುತ್ತದಲ್ಲವೆ?

ಕೇಳುಗನ ನಿರ್ದೇಶನದಂತೆ ಕೆಲಸ ಮಾಡುವ ಯಾಂಬು, ಇಂಟರ್ನೆಟ್ನಲ್ಲಿ ಲಭ್ಯವಿರುವ ದತ್ತಾಂಶ
ವನ್ನು ಬಳಸುತ್ತದೆ. ಜಗತ್ತಿಗೆ ಇಂಟರ್ನೆಟ್ ಕಾಲಿಟ್ಟು ಇನ್ನೂ 40 ವರ್ಷಗಳೂ ಆಗಿಲ್ಲ ಮತ್ತು ಅದರಲ್ಲಿ ಎಲ್ಲ ಮಾಹಿತಿಯು ದಾಖಲಾಗಿಲ್ಲ. ಇರುವ ಎಲ್ಲವೂ ನೂರಕ್ಕೆ ನೂರರಷ್ಟು ಸರಿ ಎನ್ನಲಾಗದು. ಅಲ್ಲಿರುವ ಪರಿಮಿತ
ದತ್ತಾಂಶವನ್ನೇ ಆಧಾರವಾಗಿಟ್ಟುಕೊಂಡು ಕೆಲಸ ಮಾಡುವ ಯಾಂಬುವಿನ ಉತ್ತರಗಳು ಇಂಟರ್ನೆಟ್ನಲ್ಲಿರುವ ಮಾಹಿತಿಯನ್ನು ಪ್ರತಿಬಿಂಬಿಸುತ್ತವೆ. ಇಂಟರ್ನೆಟ್ನಲ್ಲಿ ಒಳ್ಳೆಯದು, ಕೆಟ್ಟದ್ದು, ತಪ್ಪು, ಸರಿ, ನೇರ, ವಕ್ರ,ನಿಷ್ಠುರ, ತಾರತಮ್ಯ, ಪಕ್ಷಪಾತಿತನ, ಸಭ್ಯ, ಅಸಭ್ಯ ಎಲ್ಲವೂ ಇವೆ. ಮಹಿಳೆಯರ, ದಮನಿತರ, ಕಪ್ಪುವರ್ಣದವರ, ಅಸಹಾಯಕರ ಕುರಿತು ನಾವು ನೀಡಿರುವ ದತ್ತಾಂಶವೇ ಪೂರ್ವಗ್ರಹಗಳಿಂದ ಕೂಡಿದ್ದರೆ ಯಾಂಬು ನೀಡುವ ನಿರ್ಣಯಗಳು ಸಹ ಅದೇ ತೆರನಾಗಿರುತ್ತವೆ.
ಇಂಟರ್ನೆಟ್ಗೆ ಆ ಮಾಹಿತಿಯನ್ನು ನೀಡಿರುವವರು ನಾವೇ ಅಲ್ಲವೆ? ಆಗ ನಮ್ಮ ಪ್ರಶ್ನೆಗಳಿಗೆ ನಾವೇ ಶೇಖರಿಸಿಟ್ಟ ಉತ್ತರಗಳು ಸಿಗುತ್ತವೆ.

ಮುಖಚಹರೆ ಪತ್ತೆ ಮಾಡುವ ಯಾಂಬುಗೆ ನಾವು ಶ್ವೇತವರ್ಣದವರ ಚಿತ್ರಗಳನ್ನೇ ಹೆಚ್ಚಾಗಿ ತೋರಿಸಿ ತರಬೇತಿ ನೀಡಿದ್ದರೆ ಬೇರೆ ವರ್ಣದವರ ಚಿತ್ರಗಳನ್ನು ಅದು ಪ್ರಕಟಿಸುವುದೂ ಇಲ್ಲ, ರಚಿಸಿ ನೀಡುವುದೂ ಇಲ್ಲ. ಎಷ್ಟೋ ಸಲ ದತ್ತಾಂಶ ಸರಿ ಇದ್ದರೂ ಕೆಲವೊಮ್ಮೆ ಕ್ರಮಾವಳಿಯೇ ದೋಷಪೂರಿತವಾಗಿದ್ದು ಯಾಂಬು ಪ್ರಕಟಿಸುವ ಉತ್ತರಗಳು ಸರಿ ಇರುವುದಿಲ್ಲ. ಇನ್ನು ಯಾಂಬು ಬಳಸುವವರು ತಮ್ಮ ಚಿಂತನೆ, ಪಂಥಗಳಿಗೆ ಹೊಂದುವ ಪ್ರಶ್ನೆಗಳನ್ನು ಪದೇ ಪದೇ ಕೇಳಿ ಯಾಂಬುವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಪ್ರಶ್ನೆಗಳನ್ನು ಸ್ವೀಕರಿಸುವ ಯಾಂಬು ಸ್ವತಃ ಕಲಿತು ಉತ್ತರ ನೀಡುತ್ತದೆ. ಹೆಚ್ಚು ಹೆಚ್ಚು ದತ್ತಾಂಶ ದೊರಕಿದಂತೆಲ್ಲ ಯಾಂಬುವಿನ ಕಲಿಕೆಯೂ ಹೆಚ್ಚಾಗುತ್ತದೆ, ಉತ್ತರಗಳು ಸ್ಪಷ್ಟವಾಗಿರುತ್ತವೆ ಮತ್ತು ಸರಿಯಾಗಿಯೂ ಇರುತ್ತವೆ. ಉತ್ತರ ನೀಡುವ ಸಾಮರ್ಥ್ಯವು ಹೆಚ್ಚುತ್ತದೆ. ಉತ್ತರಗಳು ಸಾರ್ವತ್ರಿಕವೆನಿಸಿ ಪೂರ್ವಗ್ರಹ ಕಡಿಮೆಯಾಗುತ್ತದೆ. ಅಸ್ತಿತ್ವದಲ್ಲಿರುವ ಸಾಮಾಜಿಕ ವ್ಯವಸ್ಥೆಯೇ ತಾರತಮ್ಯಗಳಿಂದ ಕೂಡಿದೆ.
ಅದೇ ದತ್ತಾಂಶ ಉಪಯೋಗಿಸಿ ಉತ್ತರಿಸುವ ಯಾಂಬು ಸಹಜವಾಗಿಯೇ ಪೂರ್ವಗ್ರಹ ತೋರುತ್ತದೆ. ತಪ್ಪು
ಯಾಂಬುವಿನದ್ದಲ್ಲ, ದತ್ತಾಂಶವನ್ನು ನೀಡುವ ನಮ್ಮದು.

ಒಟ್ಟಿನಲ್ಲಿ ಯಾಂಬುವನ್ನು ದಾರಿ ತಪ್ಪಿಸುತ್ತಿರುವವರು ಇದರ ನಿರ್ಮಾತೃಗಳೇ. ಯಾಂಬು ಮಾದರಿ ನಿರ್ಮಿಸುವ ಎಂಜಿನಿಯರ್ ಗುರುವಿದ್ದಂತೆ, ಯಾಂಬು ಶಿಷ್ಯನಿದ್ದಂತೆ. ಗುರು ಶಿಷ್ಯನಿಗೆ ಯಾವುದು ಸರಿ, ಯಾವುದು ತಪ್ಪು, ಯಾವುದು ಮಾನ್ಯ, ಯಾವುದು ವರ್ಜ್ಯ ಎಂಬುದನ್ನು ನಿಖರವಾಗಿ ಹೇಳಿಕೊಡಬೇಕಲ್ಲವೇ?
ಅದು ಗುರುವಿನ ಜವಾಬ್ದಾರಿಯೂ ಹೌದು. ಎಷ್ಟೇ ಸರಿಯಾಗಿ ಕಲಿಸಿದ್ದರೂ ಕೆಲವು ಶಿಷ್ಯರು ಅತಿಬುದ್ಧಿ
ವಂತಿಕೆ ತೋರಿಸಿ ತಪ್ಪು ಮಾಡುತ್ತಾರೆ. ಅವರನ್ನು ತಿದ್ದಬೇಕು ಮತ್ತು ನಿಯಂತ್ರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.