‘ಭಾರತದ ತಂತ್ರಜ್ಞಾನ ರಾಜಧಾನಿ’ ಎಂಬ ಹಿರಿಮೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯು ಮಂಗಳವಾರದಿಂದ ಹೊಸದೊಂದು ಮಜಲನ್ನು ತಲುಪಿದೆ. ಹದಿನೆಂಟು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಇತಿಹಾಸದ ಪುಟ ಸೇರಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಯುಗಾರಂಭವಾಗಿದೆ. ಜಿಬಿಎ ಅಡಿಯಲ್ಲಿ ಐದು ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದು, ಇನ್ನು ಮುಂದೆ ಬೆಂಗಳೂರಿನ ಆಡಳಿತ ಯಂತ್ರವನ್ನು ಅವುಗಳು ನಿಭಾಯಿಸಲಿವೆ. ಹೊಸ ಆಡಳಿತ ವ್ಯವಸ್ಥೆಯು ರಾಜಧಾನಿಯ ನಾಗರಿಕರಿಗೆ ಸಮರ್ಥ ಮತ್ತು ಉತ್ತಮ ಸೇವೆ ಒದಗಿಸಲಿದೆ ಎಂಬ ಕನಸನ್ನು ತೇಲಿ ಬಿಡಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ (ಬಿಎಂಪಿ) ಏಳು ನಗರಸಭೆ, ಒಂದು ಪುರಸಭೆ ಹಾಗೂ 110 ಹಳ್ಳಿಗಳನ್ನು ತಂದು, 2007ರಲ್ಲಿ ಬಿಬಿಎಂಪಿಯನ್ನು ರಚಿಸಲಾಗಿತ್ತು. ಕೇಂದ್ರೀಕೃತ ವ್ಯವಸ್ಥೆಯಿಂದ ಬೃಹತ್ ನಗರದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ಕನಸನ್ನು ಆಗ ಬಿತ್ತಲಾಗಿತ್ತು. ಆದರೆ, ವಾಸ್ತವದಲ್ಲಿ ಏನಾಗಿದೆ ಎನ್ನುವುದು ಜನರ ಕಣ್ಣಮುಂದಿದೆ. ಬಿಬಿಎಂಪಿಯು ಅಸ್ತಿತ್ವದಲ್ಲಿದ್ದ ಹದಿನೆಂಟು ವರ್ಷಗಳಲ್ಲಿ ಚುನಾವಣೆ ನಡೆದಿದ್ದು 2010 ಮತ್ತು 2015ರಲ್ಲಿ ಮಾತ್ರ. ಚುನಾಯಿತ ಕೌನ್ಸಿಲ್ನ ಅವಧಿ 2020ರ ಸೆಪ್ಟೆಂಬರ್ನಲ್ಲೇ ಕೊನೆಗೊಂಡರೂ ಮತ್ತೆ ಚುನಾವಣೆ ನಡೆಯಲಿಲ್ಲ. ಅಧಿಕಾರಿಗಳೇ ಆಡಳಿತ ಯಂತ್ರವನ್ನು ಮುನ್ನಡೆಸಿದರು. ಆಡಳಿತದ ಪುನರ್ರಚನೆ, ವಾರ್ಡ್ ವಿಂಗಡಣೆಯ ನೆಪವೊಡ್ಡಿ ಇದುವರೆಗೆ ಅಧಿಕಾರದಲ್ಲಿದ್ದ ಸರ್ಕಾರಗಳು ಚುನಾವಣೆಯನ್ನು ಮುಂದೂಡುತ್ತಲೇ ಬಂದವು. ಈಗ ಜಿಬಿಎ ಅಸ್ತಿತ್ವಕ್ಕೆ ಬಂದಿದೆ. ಸಕಾಲದಲ್ಲಿ ಚುನಾವಣೆ ನಡೆಸದಿರುವ ಕಾರಣ ಸುಪ್ರೀಂ ಕೋರ್ಟ್ನಿಂದ ತಿವಿಸಿಕೊಂಡಿರುವ ರಾಜ್ಯ ಸರ್ಕಾರ, ಕಾಲಮಿತಿಯಲ್ಲಿ ಚುನಾವಣೆ ನಡೆಸುವುದಾಗಿ ಕೋರ್ಟ್ಗೆ ಪ್ರಮಾಣಪತ್ರ ವನ್ನು ಸಲ್ಲಿಸಿದೆ. ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸುವುದರ ಅಗತ್ಯವನ್ನು ತನ್ನ ತೀರ್ಪುಗಳಲ್ಲಿ ಢಾಳಾಗಿ ಎತ್ತಿತೋರಿರುವ ಕೋರ್ಟ್, ಚುನಾವಣೆ ನಡೆಸಲು ಯಾವ ನೆಪಗಳೂ ಅಡ್ಡಿಯಾಗುವಂತಿಲ್ಲ ಎಂದು ತಾಕೀತು ಮಾಡಿದೆ. ಬೆಂಗಳೂರಿನ ನಾಗರಿಕರಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಮುಂದಕ್ಕೆ ತಳ್ಳುತ್ತಾ ಬಂದಿರುವ ರಾಜ್ಯ ಸರ್ಕಾರವು ಅವರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡಿದೆ.
.ಸಂಪಾದಕೀಯ Podcast: ಬೆಂಗಳೂರಿನಲ್ಲಿ GBA ಯುಗಾರಂಭ; ವಿಳಂಬ ಮಾಡದೆ ಚುನಾವಣೆ ನಡೆಸಿ.
ಜಿಬಿಎಯ ಸ್ವರೂಪವು ಕಾಗದದಲ್ಲೇನೋ ಒಳ್ಳೆಯ ಲಕ್ಷಣಗಳನ್ನೇ ಹೊಂದಿದೆ. ಐದು ನಗರ ಪಾಲಿಕೆಗಳ ನ್ನಾಗಿ ವಿಭಜನೆ ಮಾಡಿದ್ದರಿಂದ ಆಡಳಿತದ ವಿಕೇಂದ್ರೀಕರಣಕ್ಕೆ ಅವಕಾಶವನ್ನು ಮಾಡಿಕೊಟ್ಟಂತಾಗಿದೆ. ರಾಜಧಾನಿಗೆ ಸೇವೆ ಒದಗಿಸುವ ಜಲಮಂಡಳಿ ಮತ್ತು ಬೆಸ್ಕಾಂ ಸಂಸ್ಥೆಗಳನ್ನು ಜಿಬಿಎ ಅಡಿಯಲ್ಲಿ ತಂದಿರುವುದು ಸಮನ್ವಯದಿಂದ ಕೆಲಸ ಮಾಡಲು ನೆರವಾಗುವಂತಹ ನಿರ್ಧಾರವಾಗಿದೆ. ಈ ವ್ಯವಸ್ಥೆಯಲ್ಲಿ ಕೆಲವು ಲೋಪಗಳೂ ಇವೆ. ಮುಖ್ಯಮಂತ್ರಿಯೇ ಛಾಯಾ ಮೇಯರ್ ಆಗಿರುವಂತಹ ವ್ಯವಸ್ಥೆಯನ್ನು ಜಿಬಿಎ ಹೊಂದಿದೆ. ಮುಖ್ಯಮಂತ್ರಿ ನೇತೃತ್ವದ ಕೇಂದ್ರೀಕೃತ ಪ್ರಾಧಿಕಾರದಿಂದಾಗಿ ಮೇಯರ್ಗಳು ಮತ್ತು ಪಾಲಿಕೆ ಸದಸ್ಯರು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲಾಗದೆ ಆಲಂಕಾರಿಕ ವ್ಯಕ್ತಿಗಳಾಗಿ ಉಳಿಯುವ ಅಪಾಯ ಹೆಚ್ಚಾಗಿದೆ. ಸಂಸದರು ಮತ್ತು ಶಾಸಕರಿಗೆ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಅವರದೇ ಆದ ಜವಾಬ್ದಾರಿಗಳಿವೆ. ಅವರನ್ನು ಜಿಬಿಎಗೂ ಸದಸ್ಯರನ್ನಾಗಿ ಮಾಡಲಾಗಿದೆ. ಸ್ಥಳೀಯ ಆಡಳಿತದಲ್ಲಿ ಪಾಲಿಕೆ ಸದಸ್ಯರ ನಿರ್ಣಯಗಳು ಪ್ರಧಾನವಾಗಬೇಕೇ ಹೊರತು ಜಿಬಿಎಯಲ್ಲಿ ಸ್ಥಾನ ಪಡೆದಿರುವ ಸಂಸದರು ಮತ್ತು ಶಾಸಕರ ಒಲವು–ನಿಲುವುಗಳಲ್ಲ.

ಬಹುತೇಕ ಶಾಸಕರಿಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದೆಂದರೆ ಅಪಥ್ಯ ಎನ್ನುವುದು ಗುಟ್ಟಿನ ಸಂಗತಿ ಏನಲ್ಲ. ಚುನಾಯಿತ ಕೌನ್ಸಿಲ್ ಅಸ್ತಿತ್ವದಲ್ಲಿದ್ದರೆ ಅಭಿವೃದ್ಧಿ ಯೋಜನೆಗಳು ಹಾಗೂ ಕಾಮಗಾರಿಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಅವರಿಗೆ ಗೊತ್ತು. ಆದರೆ, ಪ್ರಜಾಪ್ರಭುತ್ವ ಎಂದರೆ ಅಧಿಕಾರ ಹಂಚಿಕೆಯೇ ಹೊರತು ಅದನ್ನು ಹಿಡಿದಿಟ್ಟುಕೊಳ್ಳುವುದಲ್ಲ. ಸ್ಥಳೀಯ ಆಡಳಿತವು ರಾಜಕೀಯ ಅನುಕೂಲತೆಯೊಂದಿಗೆ ವಿತರಿಸಬಹುದಾದ ಸವಲತ್ತು ಕೂಡ ಅಲ್ಲ. ಅದೊಂದು ಸಾಂವಿಧಾನಿಕ ಹಕ್ಕು ಮತ್ತು ಪ್ರಜಾಪ್ರಭುತ್ವದ ತಳಪಾಯವಾಗಿದೆ. ಬೆಂಗಳೂರಿನ ನಾಗರಿಕರಿಗೆ ಬೇಕಿರುವುದು ತಮ್ಮನ್ನು ಸಮರ್ಥವಾಗಿ ಪ್ರತಿನಿಧಿಸುವ ಪಾರದರ್ಶಕ, ಜವಾಬ್ದಾರಿಯಿಂದ ಕೂಡಿದ ಮತ್ತು ಉತ್ತರದಾಯಿತ್ವವನ್ನು ಹೊಂದಿದ ಚುನಾಯಿತ ಕೌನ್ಸಿಲ್ ಹೊರತು ಅಧಿಕಾರಿಗಳಿಂದ ನಡೆಸಲಾಗುತ್ತಿರುವ ಆಡಳಿತವಲ್ಲ. ರಾಜ್ಯ ಸರ್ಕಾರ ಸಾಧ್ಯವಾದಷ್ಟು ಬೇಗ ಬೆಂಗಳೂರಿನ ನಗರ ಪಾಲಿಕೆಗಳಿಗೆ ಚುನಾವಣೆಯನ್ನು ಘೋಷಿಸಬೇಕು ಮತ್ತು ಸಂವಿಧಾನದ ಆಶಯವನ್ನು ಗೌರವಿಸಬೇಕು. ಕೋರ್ಟ್ಗೆ ಸಲ್ಲಿಸಿರುವ ಪ್ರಮಾಣಪತ್ರವನ್ನೂ ಗಮನದಲ್ಲಿರಿಸಿಕೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿ ಬೆಳೆಯುವ ಹಂಬಲದ ಬೆಂಗಳೂರಿನಲ್ಲಿ ಬಹುಕಾಲದವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಪಸ್ಥಿತಿ ಒಳ್ಳೆಯದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.