ಮಂಗಳವಾರ, ಜೂನ್ 2, 2020
27 °C

ಸೋಮವಾರ, 6 ಏಪ್ರಿಲ್‌, 1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ ವಿಶೇಷ ಉಕ್ಕು ಘಟಕ ಆರಂಭದಲ್ಲೇ ಲಾಭ ಗಳಿಸುವ ನಿರೀಕ್ಷೆ

ಬೆಂಗಳೂರು, ಏ. 5– ನಿರ್ಮಾಣ ಕೆಲಸ ಮುಗಿಯುತ್ತಾ ಬಂದಿರುವ 30 ಕೋಟಿ ರೂಪಾಯಿಗಳ ವೆಚ್ಚದ ಭದ್ರಾವತಿಯ ವಿಶೇಷ ಉಕ್ಕು ತಯಾರಿಕಾ ವಿಸ್ತರಣಾ ವಿಭಾಗವು ಉತ್ಪಾದನೆಯ ಪ್ರಥಮ ವರ್ಷದಲ್ಲೇ ಲಾಭ ಸಂಪಾದಿಸಿ ‘ವಿಶ್ವ ವಿಕ್ರಮ’ ಸ್ಥಾಪಿಸಲಿದೆ ಎಂಬ ಭರವಸೆಯನ್ನು ಕೈಗಾರಿಕಾ ಸಚಿವ ಶ್ರೀ ಎಂ.ರಾಜಶೇಖರಮೂರ್ತಿ ಇಲ್ಲಿ ವ್ಯಕ್ತಪಡಿಸಿದರು.

‘20 ಕೋಟಿ ರೂಪಾಯಿಗಳ ಯಂತ್ರೋಪಕರಣಗಳು ಸ್ಥಾಪನೆಯಾಗಿವೆ’ ಎಂದು ಸರ್ಕಾರ ನಡೆಸುತ್ತಿರುವ ಈ ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಶ್ರೀ ರಾಜಶೇಖರಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇನ್ನು ಮುಂದೆ ತಿಂಗಳ ಮೊದಲ ಭಾನುವಾರ ಲಾಟರಿ ಟಿಕೆಟ್‌ ಡ್ರಾ

ಬೆಂಗಳೂರು, ಏ. 5– ಇನ್ನು ಮುಂದೆ ಪ್ರತೀ ತಿಂಗಳ ಮೊದಲ ಭಾನುವಾರ ರಾಜ್ಯದ ಲಾಟರಿ ಟಿಕೆಟ್‌ ಎತ್ತಲಾಗುವುದು. ಈ ಮಧ್ಯೆ ಎರಡು ವಾರಗಳಿಗೊಮ್ಮೆ
ಲಾಟರಿ ಎತ್ತುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆಯೆಂದು ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆಯವರು ಈಚೆಗೆ ತಿಳಿಸಿದರು.

ಪ್ರಥಮ ಬಹುಮಾನಗಳ ಜೊತೆಗೆ ಐದು ಲಕ್ಷ ರೂಪಾಯಿಯ ಒಂದು ವಿಶೇಷ ಬಹುಮಾನ ಇರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.