ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗಕ್ಕೆ ಅತ್ಯಂತ ಮಹತ್ವದ ಸ್ಥಾನ. ಅದು ಭ್ರಷ್ಟ ಆಗಬಾರದೆನ್ನುವುದು ಹಾಗೂ ರಾಜಕೀಯದಿಂದ ಮುಕ್ತ ಆಗಿರಬೇಕೆಂಬುದು ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರ ನಿರೀಕ್ಷೆ.

ಶಾಸಕಾಂಗ ಹಾಗೂ ಕಾರ್ಯಾಂಗದ ನೈತಿಕತೆಯನ್ನು ನ್ಯಾಯಾಂಗ ಆಗಾಗ ನಿಕಷಕ್ಕೆ ಒಡ್ಡುತ್ತಲೇ ಇರುತ್ತದೆ. ಉಳಿದೆರಡು ಅಂಗಗಳು ವಾಮಮಾರ್ಗದಲ್ಲಿ ನಡೆದಾಗ, ಸಾರ್ವಜನಿಕರಿಗೆ ಉಳಿಯುವ ಏಕೈಕ ಆಶಾಕಿರಣ ನ್ಯಾಯಾಂಗ. ಆ ಕಾರಣದಿಂದಲೇ ನ್ಯಾಯಾಂಗದ ಬಗ್ಗೆ ಜನಸಾಮಾನ್ಯರಿಗೆ ಇನ್ನಿಲ್ಲದ ವಿಶ್ವಾಸ.

ನಮ್ಮದು ಪ್ರಜಾಪ್ರಭುತ್ವ ದೇಶವಾದ್ದರಿಂದ ನ್ಯಾಯಾಧೀಶರನ್ನೂ ಒಳಗೊಂಡಂತೆ ಪ್ರತಿಯೊಬ್ಬರೂ ತಮ್ಮದೇ ಆದ ರಾಜಕೀಯ ಒಲವು ನಿಲುವುಗಳನ್ನು ಹೊಂದಿರಲು ಸ್ವತಂತ್ರರಾಗಿದ್ದಾರೆ ಮತ್ತು ಸ್ವತಂತ್ರ ಅಭಿಪ್ರಾಯಗಳನ್ನು ಹೊಂದಿರುತ್ತಾರೆ ಕೂಡ. ಆದರೆ, ಅವರ ಸ್ವಂತವಾದ ರಾಜಕೀಯ ಒಲವು ನಿಲುವುಗಳು ಅವರು ನೀಡುವ ತೀರ್ಪುಗಳ ಮೇಲೆ ಪ್ರಭಾವ ಬೀರಬಾರದು. ಯಾವುದೇ ಪ್ರಕರಣ, ಅದರಲ್ಲೂ ಸಂವಿಧಾನದ ಕಲಂಗಳನ್ನು ಅರ್ಥೈಸುವಾಗ, ವಿಶ್ಲೇಷಿಸುವಾಗ ಪೂರ್ವಗ್ರಹರಹಿತವಾದ ಮನಸ್ಸಿಗೆ ವಿಶೇಷ ಮಹತ್ವವಿದೆ. ಅಧಿಕಾರದಲ್ಲಿ ಇರುವ ಯಾವುದೋ ಒಂದು ರಾಜಕೀಯ ಪಕ್ಷ, ದೇಶದ ಹಿತದೃಷ್ಟಿಯಿಂದ ಎಂದು ಹೇಳಿ ಸಂಸತ್ತಿನಲ್ಲಿ ಮಂಡಿಸಿದ ಮಸೂದೆ ಅಂಗೀಕಾರ ಆದಾಗ, ಅದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಅವಕಾಶವಿದೆ. ಇಂಥ ಸಂದರ್ಭದಲ್ಲಿ ವಿವಾದಾಸ್ಪದ ಕಾಯ್ದೆಯ ವಿಚಾರಣೆ ನಡೆಸಿ ತೀರ್ಪು ನೀಡಬೇಕಾದ ಗುರುತರ ಹೊಣೆಯನ್ನು ನಿರ್ವಹಿಸುವ ನ್ಯಾಯಾಧೀಶರ ತೀರ್ಪನ್ನು ಅವರ ವೈಯಕ್ತಿಕ ರಾಜಕೀಯ ಒಲವು ಪ್ರಭಾವಿಸಬಾರದು ಎನ್ನುವುದು ಸಂವಿಧಾನ ಕರ್ತೃಗಳ ಆಶಯ ಮತ್ತು ದೇಶದ ಜನತೆಯ ನಿರೀಕ್ಷೆ. ಬಹುತೇಕ ಈ ನಿರೀಕ್ಷೆಗೆ ತಕ್ಕಹಾಗೆಯೇ ದೇಶದ ನ್ಯಾಯಾಂಗ ಇಲ್ಲಿಯವರೆಗೆ ನಡೆದುಕೊಂಡಿದೆ.

ಸಾಮಾನ್ಯವಾಗಿ ನ್ಯಾಯಾಧೀಶರ ಹುದ್ದೆ ನಿರ್ವಹಿಸಿದವರು ನಿವೃತ್ತಿಯ ನಂತರದಲ್ಲಿ ತಮ್ಮ ವೈಯಕ್ತಿಕ ಒಲವಿನ ಪಕ್ಷದ ನಿಲುವನ್ನು ಸಮರ್ಥಿಸುವಂತಹ ಹೇಳಿಕೆಗಳನ್ನು ನೀಡುವುದಾಗಲೀ, ರಾಜಕೀಯಪ್ರೇರಿತ ವಿಚಾರಗಳನ್ನು ಒಳಗೊಂಡ ಭಾಷಣಗಳನ್ನು ಮಾಡುವುದಾಗಲೀ ಮಾಡುತ್ತಿರಲಿಲ್ಲ. ಅವರ ರಾಜಕೀಯ ಒಲವೇನಿದ್ದರೂ ಚುನಾವಣೆಯಲ್ಲಿ ಅವರು ನೀಡುವ ರಹಸ್ಯ ಮತದಾನಕ್ಕಷ್ಟೇ ಸೀಮಿತವಾಗಿರುತ್ತಿತ್ತು. ಆದರೆ, ಈಚಿನ ವರ್ಷಗಳಲ್ಲಿ ಹಾಗಾಗುತ್ತಿಲ್ಲ. ಒಂದು ಪಕ್ಷದ ವಕ್ತಾರರಂತೆ ಕೆಲವು ನಿವೃತ್ತ ನ್ಯಾಯಾಧೀಶರು ನಡೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಇದು ಆತಂಕ ಹುಟ್ಟಿಸುವ ಸಂಗತಿ.

ನ್ಯಾಯಾಧೀಶರ ನಿಷ್ಪಕ್ಷಪಾತತನದಲ್ಲಿ ಜನತೆಗೆ ಸಂದೇಹ ಉಂಟಾಗಬಾರದು ಎನ್ನುವ ಕಾರಣಕ್ಕೆ, ನ್ಯಾಯಾಧೀಶರು ತಮ್ಮ ನಿವೃತ್ತಿಯ ನಂತರದಲ್ಲಿ ಆಡಳಿತದಲ್ಲಿರುವ ಪಕ್ಷದ ಸರ್ಕಾರ ಕೊಡಮಾಡುವ ಹುದ್ದೆಯನ್ನು, (ನ್ಯಾಯಾಂಗ ವಿಚಾರಣಾ ಆಯೋಗ ಹೊರತುಪಡಿಸಿ), ರಾಜ್ಯಸಭಾ ಸದಸ್ಯತ್ವವನ್ನೂ ಒಳಗೊಂಡಂತೆ, ಒಪ್ಪಿಕೊಳ್ಳಬಾರದು ಎನ್ನುವುದು ಒಂದು ಸದಾಶಯವಾಗಿದೆ ಮತ್ತು ಬಹುಮಟ್ಟಿಗೆ ಅದೊಂದು ಅಲಿಖಿತ ನಿಯಮದಂತೆ ಪಾಲನೆ ಆಗುತ್ತಿದೆ. ‘ಬಹುಮಟ್ಟಿಗೆ’ ಎಂಬುದರ ಅರ್ಥ, ಈ ಆಶಯವನ್ನು ಸರ್ಕಾರಗಳು ಮತ್ತು ನ್ಯಾಯಾಧೀಶರು ಪಾಲಿಸುತ್ತಿಲ್ಲ ಎನ್ನುವುದೇ ಆಗಿದೆ.

ನ್ಯಾಯಾಂಗದ ಪಾವಿತ್ರ್ಯದ ದೃಷ್ಟಿಯಿಂದ ಯಾವುದೋ ಒಂದು ಪಕ್ಷದ ಸದಸ್ಯರಾಗಿ ಇದ್ದವರನ್ನು ನ್ಯಾಯಾಧೀಶರನ್ನಾಗಿ ನೇಮಿಸಬಾರದು. ಹಾಗೆ ಸದಸ್ಯರಾಗಿ ಇದ್ದವರನ್ನು ಸರ್ಕಾರಿ ವಕೀಲರಾಗಿ ಅಥವಾ ಅಟಾರ್ನಿ ಜನರಲ್ ಆಗಿ ನೇಮಿಸುವುದು ಬೇರೆ, ನ್ಯಾಯಾಧೀಶರಾಗಿ ನೇಮಿಸುವುದು ಬೇರೆ. ಅಪವಾದಗಳು ಇಲ್ಲವೆಂದಲ್ಲ.

ನಿವೃತ್ತಿ ನಂತರದಲ್ಲಿ ನ್ಯಾಯಾಧೀಶರು ಚುನಾವಣಾ ರಾಜಕೀಯದಿಂದ ದೂರವೇ ಉಳಿಯಬೇಕು ಎನ್ನುವುದನ್ನು ಬಿಡಿಸಿ ಹೇಳಲೇಬೇಕಿಲ್ಲ. ರಾಷ್ಟ್ರಪತಿಯ ಚುನಾವಣೆಯೇ ಆದರೂ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡೂ ಸರ್ವಾನುಮತದಿಂದ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿ ಆಗಬೇಕೆಂದು ಕೋರಿದ ಸಂದರ್ಭದಲ್ಲಿ ಒಪ್ಪಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಹಾಗಲ್ಲದೆ ಇದ್ದಾಗ, ಅವರು ಒಂದು ಪಕ್ಷದ ಅಭ್ಯರ್ಥಿಯಾದಾಗ, ಎದುರು ಪಕ್ಷಗಳ ರಾಜಕೀಯ ಮುಖಂಡರು ಅವರಿಗೆ ತೋಚಿದ ಅಂಶವನ್ನೆತ್ತಿ ಆಕ್ಷೇಪ, ಟೀಕೆಗಳನ್ನು ಮಾಡುತ್ತಾರೆ ಮತ್ತು ಆ ಟೀಕೆಗಳನ್ನು ಅವರು ಸಹಿಸಿಕೊಳ್ಳಬೇಕಾಗಿ ಬರುತ್ತದೆ. ಆ ಟೀಕೆ–ಟಿಪ್ಪಣಿಗಳು, ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದವರಿಗೆ ಮತ್ತು ಅವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿರುವ ಪಕ್ಷಕ್ಕೆ ಮುಜುಗರ ಉಂಟು ಮಾಡುವುದು ಸಹಜ. ಟೀಕೆಯ ಮಾತುಗಳು, ಸಾರ್ವಜನಿಕರಲ್ಲೂ ನ್ಯಾಯಾಂಗದಲ್ಲಿ ಕಾರ್ಯ ನಿರ್ವಹಿಸಿದ್ದವರ ಚಾರಿತ್ರ್ಯದ ಬಗ್ಗೆ ಅನುಮಾನ ಉಂಟು ಮಾಡಬಹುದು. ಪ್ರಸ್ತುತ ಅಂಥದೊಂದು ಸಂದರ್ಭ ಈಗ ಎದುರಾಗಿದೆ.

ಈಗಿನ ‘ಇಂಡಿಯಾ’ ಮೈತ್ರಿಕೂಟದ ಪ್ರತಿನಿಧಿಯಾಗಿ ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಯನ್ನು ಕೇಂದ್ರ ಗೃಹ ಸಚಿವರು ಟೀಕಿಸಿದ್ದಾರೆ. ಅವರು, ಹಿಂದೆ ನೀಡಿದ ತೀರ್ಪಿನಿಂದ ನಕ್ಸಲರನ್ನು ಹತ್ತಿಕ್ಕುವುದಕ್ಕೆ ಅಡ್ಡಿಯಾಯಿತೆನ್ನುವ ಅರ್ಥದಲ್ಲಿ ಗೃಹ ಸಚಿವರು ಆಕ್ಷೇಪಿಸಿದ್ದಾರೆ. ಈ ಆಕ್ಷೇಪದ ಮಾತುಗಳಿಗೆ ವಿರೋಧ ಮತ್ತು ಸಮರ್ಥನೆ ಎರಡೂ ನಿವೃತ್ತ ನ್ಯಾಯಮೂರ್ತಿಗಳಿಂದಲೇ ವ್ಯಕ್ತವಾಗಿದೆ. ‘ನ್ಯಾಯಾಂಗದ ಸ್ವಾತಂತ್ರ್ಯದ ಹೆಸರಲ್ಲಿ ನೀಡಿದ ರಾಜಕೀಯ ಪಕ್ಷಪಾತದ ಹೇಳಿಕೆ’ ಎಂದು ಕೆಲವರು ಆಕ್ಷೇಪಿಸಿದ್ದಾರೆ. ಇಂಥದೊಂದು ಸಂದರ್ಭ ಖಂಡಿತವಾಗಲೂ ವಿಷಾದಕರ. ಈ ಘಟನೆ, ನ್ಯಾಯಾಂಗದ ಬಗ್ಗೆ ಜನರ ಮನಸ್ಸಿನಲ್ಲಿನ ಗೌರವಕ್ಕೆ ಕುಂದುಂಟು ಮಾಡುವಂತಹದ್ದು ಎಂದು ಹೇಳದೆ ವಿಧಿಯಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.