ವೈದ್ಯಕೀಯ ಕ್ಷೇತ್ರಗಳಲ್ಲಿ ದುಡಿಯುವ ವೈದ್ಯರು, ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞರು ಹಾಗೂ ಸಫಾಯಿ ಕರ್ಮಚಾರಿಗಳು ಒಂದು ರೀತಿಯಲ್ಲಿ ಸಮಾಜ ಸೇವಕರೇ. ಇವರೆಲ್ಲ ನಿತ್ಯ ಹಲವಾರು ಅಪಾಯಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಅದೇ ರೀತಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎಚ್ಐವಿ/ಏಡ್ಸ್ ತಡೆಗೆ ದುಡಿಯುತ್ತಿರುವ ಆಪ್ತ ಸಮಾಲೋಚಕರು ಕೂಡ ನಿತ್ಯ ಹಲವಾರು ಸವಾಲುಗಳಿಗೆ ಮುಖಾಮುಖಿಯಾಗುತ್ತಾರೆ. ಕಳೆದ ಮೂರು ದಶಕಗಳಲ್ಲಿ ಎಚ್ಐವಿ ಸೋಂಕು ಗಣನೀಯವಾಗಿ ಇಳಿಕೆಯಾಗುವಲ್ಲಿ ಆಪ್ತ ಸಮಾಲೋಚಕರ ಪಾತ್ರ ಹಿರಿದು.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ (ಕೆಎಸ್ಎಪಿಎಸ್) ಅಡಿಯಲ್ಲಿ ನೂರಾರು ಆಪ್ತ ಸಮಾಲೋಚ
ಕರು, ಪ್ರಯೋಗಾಲಯ ತಂತ್ರಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆ, ತಾಲ್ಲೂಕುಗಳ ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಕೇಂದ್ರಗಳಲ್ಲಿ ನಿಯೋಜನೆಗೊಂಡಿರುವ ಈ ನೌಕರರು, ಸುಮಾರು ಮೂವತ್ತು ವರ್ಷಗಳಿಂದ ತಾತ್ಕಾಲಿಕ ಸೇವೆಯ ಆಧಾರದ ಮೇಲೆ ದುಡಿಯುತ್ತಿದ್ದಾರೆ. ಈ ಮೊದಲು ಎಚ್ಐವಿ ಸೋಂಕಿನ ಕುರಿತು ಜನರಿಗೆ ತಿಳಿವಳಿಕೆಯ ಕೊರತೆಯಿತ್ತು. ಎಚ್ಐವಿ ಹಾಗೂ ಏಡ್ಸ್ ನಡುವೆ ಇರುವ ವ್ಯತ್ಯಾಸ ತಿಳಿಯದೆ, ಈ ಸೋಂಕು ನಿಶ್ಚಿತವಾಗಿ ಸಾವನ್ನು ಹೊತ್ತು ತರುವ ಕಾಯಿಲೆ ಎಂದು ಭಾವಿಸಿದ್ದರು. ಸೋಂಕಿತರನ್ನು ಭಯಮಿಶ್ರಿತ ಕೀಳರಿಮೆಯಿಂದ ಕಾಣುತ್ತಿದ್ದರು. ಈ ಪೂರ್ವಗ್ರಹಗಳನ್ನು ನೀಗಿಸುವಲ್ಲಿ ಆಪ್ತ ಸಮಾಲೋಚಕರು ಅವಿರತವಾಗಿ ದುಡಿಯುತ್ತ ಬಂದಿದ್ದಾರೆ.

ದಿನ ನಿತ್ಯ ಸಾರ್ವಜನಿಕ ಆಸ್ಪತ್ರೆಗಳಿಗೆ ಬರುವ ಎಲ್ಲ ಬಗೆಯ ರೋಗಿಗಳಿಗೆ ಎಚ್ಐವಿ ರಕ್ತಪರೀಕ್ಷೆ ಹಾಗೂ ಆಪ್ತ ಸಮಾಲೋಚನೆಯನ್ನು ಈಗ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬ ರೋಗಿಗೂ ಎಚ್ಐವಿ ಕುರಿತಾದ ಮಾಹಿತಿ ಹಾಗೂ ರಕ್ತಪರೀಕ್ಷೆ ಲಭ್ಯವಾಗುತ್ತಿದೆ. ಕಾಲೇಜುಗಳ ಯುವಕ/ಯುವತಿಯರಿಗೆ, ಆಟೊ, ಲಾರಿ ಚಾಲಕರಿಗೆ, ಲೈಂಗಿಕ ಕಾರ್ಯಕರ್ತೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೂ ಅರಿವನ್ನುಂಟು ಮಾಡುವ ಕಾರ್ಯಕ್ರಮಗಳನ್ನು ಆಪ್ತ ಸಮಾಲೋಚಕರು ನೀಡುತ್ತಾ ಬರುತ್ತಿದ್ದಾರೆ. ಅದರ ಪರಿಣಾಮವಾಗಿ ಎಚ್ಐವಿ ಸೋಂಕು ಗಣನೀಯವಾಗಿ ಇಳಿಕೆಯಾಗುತ್ತಿದೆ. ಇಪ್ಪತ್ತೈದು ವರ್ಷಗಳ ಹಿಂದೆ ಕರ್ನಾಟಕದಲ್ಲಿ 0.55ರಷ್ಟಿದ್ದ ಸೋಂಕಿನ ಪ್ರಮಾಣ 2024–25ರಲ್ಲಿ 0.33ಕ್ಕೆ ಇಳಿಕೆಯಾಗಿರುವುದು ಸಮಾಲೋಚಕರ ಪರಿಶ್ರಮವನ್ನು ಸೂಚಿಸುತ್ತದೆ.

ಆಪ್ತ ಸಮಾಲೋಚಕರು ದಿನ ನಿತ್ಯ ನೇರವಾಗಿ ರೋಗಿಗಳ ಸಂಪರ್ಕಕ್ಕೆ ಬರುವುದರಿಂದ ಹಲವಾರು ಸೋಂಕುಗಳನ್ನು ಹೊಂದುವ ಸಾಧ್ಯತೆ ಇದೆ. ಅದರಲ್ಲೂ ಕ್ಷಯರೋಗದಂತಹ ಸೋಂಕು ಸುಲಭವಾಗಿ ಹರಡುವ ಸಾಧ್ಯತೆ ಇದೆ. ಕಾರಣ, ಎಚ್ಐವಿ ಸೋಂಕಿತ ವ್ಯಕ್ತಿ ಸರಿಯಾದ ರೀತಿಯಲ್ಲಿ ಚಿಕಿತ್ಸೆಗೆ ಒಳಪಡದೇ ಹೋದಲ್ಲಿ ಕ್ಷಯರೋಗದ ಸೋಂಕನ್ನು ಹೊಂದುವ ಸಾಧ್ಯತೆ ಹೆಚ್ಚು. ಇಂತಹ ವ್ಯಕ್ತಿಯ ಜೊತೆ ಸಮಾಲೋಚಕರು ಸಮಾಲೋಚನೆ ನಡೆಸುವ ಸಂದರ್ಭಗಳು ಬರುವುದುಂಟು. ಕ್ಷಯರೋಗಿಯು ಕೆಮ್ಮುವಾಗ, ಸೀನುವಾಗ ಯಾವುದೇ ರೀತಿಯ ಮುನ್ನೆಚ್ಚರಿಕೆಗಳನ್ನು ವಹಿಸದೇ ಇದ್ದಾಗ, ಆಪ್ತ ಸಮಾಲೋಚಕ ಕ್ಷಯರೋಗದ ಸೋಂಕನ್ನು ಹೊಂದಬಹುದು.

ಆಪ್ತ ಸಮಾಲೋಚಕರ ವೃತ್ತಿ ಬದುಕು ಕತ್ತಿಯಂಚಿನ ಮೇಲಿನ ನಡಿಗೆಯಂತಿದೆ. ನಿತ್ಯ ಹತ್ತಾರು ಸವಾಲುಗಳೊಂದಿಗೆ ಇವರು ವ್ಯವಹರಿಸಬೇಕಾಗುತ್ತದೆ. ಕೆಲವು ಆಸ್ಪತ್ರೆಗಳಲ್ಲಿ ಭಾನುವಾರ ಹಾಗೂ ಇತರ ರಜಾ ದಿನಗಳಲ್ಲೂ ಕರ್ತವ್ಯವನ್ನು ನಿರ್ವಹಿಸುವ ಅನಿವಾರ್ಯತೆಯಿದೆ. ಪೋಲಿಯೊ ಲಸಿಕಾ ಕಾರ್ಯಕ್ರಮ, ಕೋವಿಡ್ನಂತಹ ತುರ್ತು ಪರಿಸ್ಥಿತಿಗಳಲ್ಲಿಯೂ ಆಪ್ತ ಸಮಾಲೋಚಕರ ಸೇವೆಯನ್ನು ಆರೋಗ್ಯ ಇಲಾಖೆ ಬಳಸಿಕೊಳ್ಳುತ್ತಿದೆ.

ಮೂರು ದಶಕಗಳಿಂದ ಎಚ್ಐವಿ ಆಪ್ತ ಸಮಾಲೋಚಕರು ಹಾಗೂ ಪ್ರಯೋಗಾಲಯ ತಂತ್ರಜ್ಞರು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪಡೆಯುತ್ತಿರುವ ವೇತನವು ಅತೀ ಕಡಿಮೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಹಲವಾರು ಬಾರಿ ಧ್ವನಿ ಎತ್ತಿದರೂ, ಸರ್ಕಾರದ ಗಮನಕ್ಕೆ ತಂದರೂ ಆಪ್ತ ಸಮಾಲೋಚಕರ ಸೇವೆಯನ್ನು ಕಾಯಂಗೊಳಿಸದೇ ಇರುವುದು ವಿಷಾದನೀಯ. ಹಲವಾರು ಆಪ್ತ ಸಮಾಲೋಚಕ ಸಿಬ್ಬಂದಿ ಇದೀಗ ನಿವೃತ್ತಿಯ ಹಂತವನ್ನು ತಲಪಿದ್ದಾರೆ.

ಆಪ್ತ ಸಮಾಲೋಚಕರಿಲ್ಲದ ಆಸ್ಪತ್ರೆಗಳನ್ನು ಊಹೆ ಮಾಡಿಕೊಳ್ಳುವುದೂ ಅಸಾಧ್ಯ. ಒಬ್ಬ ವ್ಯಕ್ತಿ ಎಚ್ಐವಿ ಸೋಂಕಿತನೆಂದು ದೃಢಪಟ್ಟಾಗ ಆತನಲ್ಲಾಗುವ ತಲ್ಲಣ, ತಾಕಲಾಟಗಳು ಹಲವಾರು. ಈ ಸಂದರ್ಭದಲ್ಲಿ ಸೋಂಕಿತರಿಗೆ ಆಪ್ತ ಸಮಾಲೋಚನೆ ಇಲ್ಲದೇ ಹೋದಲ್ಲಿ ಆ ವ್ಯಕ್ತಿ ದುಡುಕಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇನ್ನು ಕೆಲವರು ತಮ್ಮಲ್ಲಿರುವ ಸೋಂಕನ್ನು ಅರಿವಿನ ಕೊರತೆಯಿಂದ ಹಲವಾರು ಜನರಿಗೆ ದಾಟಿಸಲೂಬಹುದು. ಆಗ ಎಚ್ಐವಿ ನಿಯಂತ್ರಣವಿಲ್ಲದೇ ಹರಡಬಹುದಾಗಿದೆ.

ಆಪ್ತ ಸಮಾಲೋಚಕರ ಕೆಲಸವು ಹೆಚ್ಚಿನ ದೈಹಿಕ ಹಾಗೂ ಮಾನಸಿಕ ಶ್ರಮವನ್ನು ಬೇಡುವಂತಹದ್ದು. ಹಲವಾರು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಿ ಸೋಂಕಿತರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಅವರ ಸಂಕಷ್ಟಗಳತ್ತ ಸರ್ಕಾರ ಗಮನಹರಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.