ನಿತ್ಯ ಜೀವನದಲ್ಲಿ ನಾವು ಆಡುವ ಬಹುಪಾಲು ಮಾತುಗಳು ಅಂಕಿಸಂಖ್ಯೆಗಳನ್ನು ಒಳಗೊಂಡಿರುತ್ತವೆ. ದೇಶದ ನಾಗರಿಕರು, ಕಾಡಿನಲ್ಲಿರುವ ಪ್ರಾಣಿಗಳು, ವಿದ್ಯಾರ್ಥಿಗಳು, ದೇಶದ ಒಟ್ಟು ಮತದಾರರು, ನಿರುದ್ಯೋಗ ಪ್ರಮಾಣ, ಜನರ ತಲಾ ಆದಾಯ... ಹೀಗೆ ಎಲ್ಲದಕ್ಕೂ ನಿರ್ದಿಷ್ಟ ಅಂಕಿಸಂಖ್ಯೆಗಳಿರುತ್ತವೆ. ಮನೆ ನಿರ್ಮಿಸಲು ಸಾಲ ಬೇಕು ಎಂದರೆ ಬ್ಯಾಂಕಿನವರು ‘ಎಸ್ಟಿಮೇಟ್ ತನ್ನಿ’ ಎನ್ನುತ್ತಾರೆ. ಜನರಿಗಾಗಿ ಯೋಜನೆ ರೂಪಿಸುವ ಸರ್ಕಾರಗಳು ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಮೊದಲು ಕಲೆಹಾಕುತ್ತವೆ. ಕ್ರೀಡೆ, ಉದ್ಯಮ, ವ್ಯಾಪಾರ, ಉದ್ಯೋಗ, ಆರೋಗ್ಯ, ಮೂಲ ಸೌಕರ್ಯ, ಸಾಕ್ಷರತೆ, ಆಮದು–ರಪ್ತು, ಆರ್ಥಿಕ ಏರಿಳಿತದಂತಹ ಮಾಹಿತಿಗಳೆಲ್ಲ ಅಂಕಿಸಂಖ್ಯೆಗಳ ರೂಪದಲ್ಲಿಯೇ ಇರುತ್ತವೆ. ಇದೆಲ್ಲವನ್ನು ಗಮನಿಸಿಯೇ, ‘ಅಂಕಿಸಂಖ್ಯೆಗಳ ತಿಳಿಯದೆ ನುಡಿದರೆ ಅದು ನುಡಿಯಲ್ಲ’ ಎಂದು ಬಸವಣ್ಣನವರು ಹೇಳಿರಬೇಕು.

ಅಂಕಿ–ಅಂಶಗಳು ಕೇವಲ ಅಂಕಗಣಿತದ ಸಂಖ್ಯೆಗಳಲ್ಲ. ಅವು ಸಮಾಜದ ವಾಸ್ತವ ಚಿತ್ರಣವನ್ನು ನೀಡುವ ಸಾಧನಗಳು. ವಸ್ತುಸ್ಥಿತಿಯ ಕೈಗನ್ನಡಿಗಳು. ನಮ್ಮದು ಅಭಿವೃದ್ಧಿ ಮತ್ತು ವಾಯುಗುಣ ವೈಪರೀತ್ಯದ ಯುಗ. ಈಗ ಎಲ್ಲೇ ಅಭಿವೃದ್ಧಿ ಕೆಲಸಗಳು ನಡೆದರೂ, ಲಭ್ಯವಿರುವ ಅಧಿಕೃತ ಅಂಕಿಸಂಖ್ಯೆಗಳನ್ನು ಆಧರಿಸಿಯೇ ನಡೆಯಬೇಕು. ಒಂದು ಸಣ್ಣ ತಪ್ಪು ಮಾಹಿತಿ ಆಧಾರಿತ ಕೆಲಸವು ಭಾರೀ ಬೆಲೆ ತೆರುವಂತೆ ಮಾಡಬಲ್ಲದು. ಈ ಅಂಕಿಅಂಶಗಳ ಮಹತ್ವ ಮನಗಂಡಿರುವ ಉನ್ನತ ಶಿಕ್ಷಣ ಸಂಸ್ಥೆಗಳು, ಬೃಹತ್ ದತ್ತಾಂಶದ (ಬಿಗ್ ಡೇಟಾ) ಜೊತೆಗೆ, ಅಂಕಿಅಂಶ ಸಂಗ್ರಹ ಮತ್ತು ವಿಶ್ಲೇಷಣೆಯ ಪದವಿ ಹಾಗೂ ಉನ್ನತ ಶಿಕ್ಷಣದ ಕೋರ್ಸ್ಗಳನ್ನು ಕಲಿಸುತ್ತಿವೆ.

ಭಾರತ ಸರ್ಕಾರದ ನೀತಿ ಆಯೋಗ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಷನ್, ನ್ಯಾಷನಲ್ ಇನ್ಫಾರ್ಮ್ಯಾಟಿಕ್ ಸೆಂಟರ್, ಇಂಡಿಯನ್ ಮಾರ್ಕೆಟ್ ರಿಸರ್ಚ್ ಬ್ಯೂರೊಗಳು ದೇಶದ ಆಡಳಿತದ ಚುಕ್ಕಾಣಿ ಹಿಡಿದ ನಾಯಕರಿಗೆ ಕಾಲಕಾಲಕ್ಕೆ ದತ್ತಾಂಶ ಒದಗಿಸಿ, ಜನಪರ ಕೆಲಸ ಮಾಡಲು ಸಹಾಯ ಮಾಡುತ್ತವೆ. ಅಂಕಿಅಂಶಗಳ ಪ್ರಾಮುಖ್ಯ ತಿಳಿಸಲು ವಿಶ್ವಸಂಸ್ಥೆಯು ಪ್ರತಿ ಐದು ವರ್ಷಗಳಿಗೊಮ್ಮೆ, ಅಕ್ಟೋಬರ್ 20ರ ದಿನವನ್ನು ‘ವಿಶ್ವ ಸಂಖ್ಯಾ ವಿಜ್ಞಾನ ದಿನ’ವನ್ನಾಗಿ ಆಚರಿಸುತ್ತದೆ. ಈ ವರ್ಷದ ಸಂಖ್ಯಾ ವಿಜ್ಞಾನ ದಿನದ ಧ್ಯೇಯ, ‘ಬದಲಾವಣೆ ಮತ್ತು ಎಲ್ಲರಿಗಾಗಿ ಗುಣಮಟ್ಟದ ಅಂಕಿಅಂಶಗಳು’ ಎಂಬುದಾಗಿದೆ.

ಸಂಖ್ಯಾ ವಿಜ್ಞಾನ ದಿನಾಚರಣೆಯು ಜಾಗತಿಕ ಸಹಕಾರ ಮತ್ತು ಜಾಗೃತಿಯನ್ನು ಉತ್ತೇಜಿಸುತ್ತದೆ. ಸಮುದಾಯಗಳು, ಸರ್ಕಾರಗಳು ಮತ್ತು ಸಂಸ್ಥೆಗಳು ವಿಶ್ವಾಸಾರ್ಹ ಅಂಕಿಅಂಶಗಳ ಮಹತ್ವ ಗುರುತಿಸಲು ಮುಂದಾಗುತ್ತವೆ. ಆಧುನಿಕ ಪ್ರಪಂಚದ ಪ್ರತಿ ನಿರ್ಧಾರ, ಪ್ರಗತಿ ಮತ್ತು ಯೋಜನೆಗಳಿಗೆ ಅಂಕಿಅಂಶಗಳೇ ಅಡಿಪಾಯ ಆಗಿರುವುದರಿಂದ, ನಿಖರ ಮಾಹಿತಿ ಸಂಗ್ರಹಿಸಿ ದಾಖಲಿಸುವುದು ತುಂಬಾ ಮುಖ್ಯ. ಮಾಹಿತಿ ಸೋರಿಕೆಯಾಗಿ ಯಾರದೋ ಕೈ ಸೇರದಂತೆ ತಡೆಯುವುದು ಇನ್ನೂ ಮುಖ್ಯ. ದತ್ತಾಂಶ ಕಳ್ಳತನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದನ್ನು ಗಮನಿಸಿದರೆ, ಆಧುನಿಕ ಜಗತ್ತಿನಲ್ಲಿ ದತ್ತಾಂಶ ಮತ್ತು ಅಂಕಿಅಂಶಕ್ಕಿರುವ ಪ್ರಾಮುಖ್ಯದ ಅರಿವಾಗುತ್ತದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2010ರಲ್ಲಿ, ‘ವಿಶ್ವ ಸಂಖ್ಯಾ ವಿಜ್ಞಾನ ದಿನ’ವನ್ನು ಆಚರಿಸಲು ನಿರ್ಣಯ ಕೈಗೊಂಡಿತು. ‘ಸೇವೆ, ಸಮಗ್ರತೆ ಮತ್ತು ವೃತ್ತಿಪರತೆ’ಯ ಮೌಲ್ಯಗಳ ಆಧಾರದ ಮೇಲೆ ವಿಶ್ವದಾದ್ಯಂತ ಅಧಿಕೃತ ಅಂಕಿಅಂಶಗಳ ಸಾಧನೆಗಳನ್ನು ಗುರ್ತಿಸುವ ಉದ್ದೇಶದಿಂದ ಇಲ್ಲಿಯವರೆಗೆ ಮೂರು ಬಾರಿ (2010, 2015, ಮತ್ತು 2020ರಲ್ಲಿ) ಸಂಖ್ಯಾ ವಿಜ್ಞಾನ ದಿನವನ್ನು ಆಚರಿಸಲಾಗಿದೆ.

ದತ್ತಾಂಶದ ಪ್ರಾಮುಖ್ಯ ಕುರಿತು ಜಾಗೃತಿ ಮೂಡಿಸಲು, ಸಾಮಾಜಿಕ, ಆರ್ಥಿಕ ಮತ್ತು ಪರಿಸರ ನೀತಿಗಳನ್ನು ರೂಪಿಸಲು, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಲು ನಿಖರವಾದ ಮತ್ತು ಸಕಾಲಿಕ ಅಂಕಿಅಂಶಗಳು ಎಷ್ಟು ನಿರ್ಣಾಯಕ ಎಂಬುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವುದು ಈ ದಿನದ ಆಚರಣೆಯ ಉದ್ದೇಶವಾಗಿದ್ದರೂ, ಸಾಂಖ್ಯಿಕ ವ್ಯವಸ್ಥೆಗಳ ಬಲವರ್ಧನೆಯೂ ಇದರ ಉಪ ಗುರಿಗಳಲ್ಲೊಂದು.

ಒಂದು ದೇಶದ ಆರೋಗ್ಯ, ಶಿಕ್ಷಣ, ಬಡತನ, ಉದ್ಯೋಗ, ಆರ್ಥಿಕತೆ ಮುಂತಾದ ಕ್ಷೇತ್ರಗಳಲ್ಲಿನ ಪ್ರಗತಿ ಅಳೆಯಲು ನಿಖರವಾದ ಅಂಕಿಅಂಶಗಳು ಅನಿವಾರ್ಯ. ಸರ್ಕಾರವು ಪರಿಣಾಮಕಾರಿ ನೀತಿಗಳನ್ನು ರೂಪಿಸಲು, ಸಂಪನ್ಮೂಲಗಳನ್ನು ಹಂಚಲು ಮತ್ತು ಯೋಜನೆಯ ಪ್ರಗತಿ ಪರಿಶೀಲಿಸಲು ಸಂಖ್ಯಾಶಾಸ್ತ್ರೀಯ ದತ್ತಾಂಶಗಳು ನಿಖರ ನೆಲೆ ಒದಗಿಸುತ್ತವೆ. ಸಂಗ್ರಹಿಸಿದ ದತ್ತಾಂಶ ಆಧರಿಸಿ, ಕೊರತೆ ಇರುವ ಕ್ಷೇತ್ರಗಳ ಅಭಿವೃದ್ಧಿಯ ಕಡೆ ಗಮನ ಹರಿಸಲು ಸರ್ಕಾರಗಳು ಮುಂದಾಗುತ್ತವೆ.

ಪ್ರಸ್ತುತ ಕರ್ನಾಟಕ ಸರ್ಕಾರವು ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೂಲಕ, ರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಅಧಿಕೃತ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದು ನಿಖರ ಮತ್ತು ವಾಸ್ತವಾಂಶಗಳಿಂದ ಕೂಡಿದ್ದರೆ ಜನಪರ ಯೋಜನೆ ರೂಪಿಸಲು ಯೋಜನಾಕರ್ತರಿಗೆ ಅನುಕೂಲವಾಗುತ್ತದೆ.

ಅಧಿಕೃತ ಅಂಕಿಅಂಶಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸುವುದು ಮತ್ತು ಅವುಗಳನ್ನು ಹೆಚ್ಚು ಪಾರದರ್ಶಕಗೊಳಿಸುವುದು ಈ ದಿನದ ಆಚರಣೆಯ ಮತ್ತೊಂದು ಉದ್ದೇಶವಾಗಿದೆ.