ತೆಂಡೂಲ್ಕರ್ ಜೊತೆ ಸಿಬಿಐ ಚರ್ಚೆ

ಮುಂಬೈ, ಸೆ. 7 (ಪಿಟಿಐ): ಕ್ರಿಕೆಟ್ ಮೋಸದಾಟಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಭಾರತ ತಂಡದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪಂದ್ಯಗಳು ನಡೆಯುವಾಗ ಡ್ರೆಸ್ಸಿಂಗ್ ರೂಮಿಗೆ ಯಾರಾದರೂ ಹೊರಗಿನ ವ್ಯಕ್ತಿಗಳು ಬರುತ್ತಿದ್ದರೇ ಎಂದು ಅವರು ಕೇಳಿದರು. ಆಟಗಾರರ ನಡುವಣ ಸಂಬಂಧ, ಡ್ರೆಸ್ಸಿಂಗ್ ರೂಮಿನ ವಾತಾವರಣ ಮತ್ತಿತರ ವಿಷಯಗಳ ಬಗ್ಗೆ ಅವರು ಪ್ರಶ್ನಿಸಿದರು ಎಂದು ಸಚಿನ್ ಹೇಳಿದ್ದಾರೆ.

ಡಾ. ರಾಜ್ ಅಪಹರಣ: 40ನೇ ದಿನ...

ಬೆಂಗಳೂರು, ಸೆ.7: ರಾಜ್ಕುಮಾರ್ ಮತ್ತು ಇತರ ಮೂವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಜೊತೆ ಚರ್ಚಿಸಲು ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.

ಕಾಡುಗಳ್ಳ ವೀರಪ್ಪನ್ನಿಂದ ಡಾ. ರಾಜ್ಕುಮಾರ್ ಮತ್ತು ಇತರ ಮೂವರ ಸುರಕ್ಷಿತ ಬಿಡುಗಡೆಗೆ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರ ಬೇಡಿಕೆ ಸಲ್ಲಿಸಿದರೆ ಅರೆ ಮಿಲಿಟರಿ ಪಡೆಗಳನ್ನು ಕಳಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಐ.ಡಿ. ಸ್ವಾಮಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.