ನವದೆಹಲಿ, ಜುಲೈ 14 (ಪಿಟಿಐ)– ಇನ್ನೊಬ್ಬ ಹಿರಿಯ ಜನತಾ ದಳ (ಯು) ಮುಖಂಡ ರಾಮಕೃಷ್ಣ ಹೆಗಡೆ ಅವರೂ ಪಕ್ಷ ಬಿಟ್ಟು ಹೊರ ನಡೆಯುವ ಬಗ್ಗೆ ಇಂದು ಇಂಗಿತ ವ್ಯಕ್ತಪಡಿಸಿದ್ದಾರೆ.

ಪಕ್ಷದಲ್ಲಿನ ಬೆಳವಣಿಗೆಗಳನ್ನು ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರು ಟೀಕಿಸಿದ ಒಂದು ದಿನದ ನಂತರ ಹೆಗಡೆ ಅವರು, ಪಕ್ಷ ತ್ಯಜಿಸುವ ಬಗ್ಗೆ ಇಂದು ಇಲ್ಲಿ ಸುದ್ದಿಗಾರರಿಗೆ ಸುಳಿವು ನೀಡಿದರು.

‘ನಿರೀಕ್ಷಿಸಿದಂತೆ ಪಕ್ಷ ಸಕ್ರಿಯವಾಗಿಲ್ಲ. ಪಕ್ಷದ ಕಾರ್ಯವೈಖರಿಯಲ್ಲಿ ಸುಧಾರಣೆ ಕಾಣದಿದ್ದರೆ ಪ್ರತಿಯೊಬ್ಬರೂ ತಮ್ಮದೇ ಆದ ಮಾರ್ಗದಲ್ಲಿ ಹೋಗುತ್ತಾರೆ’ ಎಂದು ಹೆಗಡೆ ಅರ್ಥಗರ್ಭಿತವಾಗಿ ನುಡಿದರು.

ಗೇರುಸೊಪ್ಪ ಮೊದಲ ಘಟಕ ಕಾರ್ಯಾರಂಭ

ಹೊನ್ನಾವರ, ಜುಲೈ 14– ಪರಿಸರ ಸಮಸ್ಯೆಯಿಂದ ವಿಶ್ವಬ್ಯಾಂಕ್ ನೆರವು ಕೈತಪ್ಪಿಹೋಗಿದ್ದ ಗೇರುಸೊಪ್ಪ ಜಲವಿದ್ಯುತ್ ಯೋಜನೆಯ 60 ಮೆಗಾವಾಟ್ ಸಾಮರ್ಥ್ಯದ ಮೊದಲ ಘಟಕ ಇಂದು ಕಾರ್ಯಾರಂಭಿಸಿತು.

ಶರಾವತಿ ಕಣಿವೆಯ ಕೊನೆಯ ಹಂತದ ಈ ಗೇರುಸೊಪ್ಪ ಯೋಜನೆಯನ್ನು 531 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 240 ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದ ವಿದ್ಯುತ್ ಕೇಂದ್ರದ ಮೊದಲ ಘಟಕ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.