ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ ಈ ದಿನ: ಆರ್‌ಎಸ್ಎಸ್, ವಿಎಚ್‌ಪಿ ನಿಷೇಧಕ್ಕೆ ಗೌಡರ ಆಗ್ರಹ

25 ವರ್ಷಗಳ ಹಿಂದೆ ಈ ದಿನ: ಆರ್‌ಎಸ್ಎಸ್, ವಿಎಚ್‌ಪಿ ನಿಷೇಧಕ್ಕೆ ಗೌಡರ ಆಗ್ರಹ
Published 7 ಜನವರಿ 2024, 19:16 IST
Last Updated 7 ಜನವರಿ 2024, 19:16 IST
ಅಕ್ಷರ ಗಾತ್ರ

ಆರ್‌ಎಸ್ಎಸ್, ವಿಎಚ್‌ಪಿ ನಿಷೇಧಕ್ಕೆ ಗೌಡರ ಆಗ್ರಹ

ಬರೋಡಾ, ಜ. 7– (ಪಿಟಿಐ, ಯುಎನ್ಐ) ಆರ್‌ಎಸ್ಎಸ್, ವಿಎಚ್‌ಪಿ, ಬಜರಂಗದಳ ಮತ್ತು ಶಿವಸೇನೆಯಂಥ ಕೋಮು ಸಂಘಟನೆ ಗಳನ್ನು ನಿಷೇಧಿಸಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಆಗ್ರಹಿಸಿದ್ದಾರೆ. 

ದಕ್ಷಿಣ ಗುಜರಾತ್‌ನಲ್ಲಿ ಕ್ರೈಸ್ತರ ಮೇಲೆ ನಡೆದ ದಾಳಿಗೆ ಈ ಸಂಘಟನೆಗಳು ಕಾರಣ ಎಂದು ಅವರು ಆರೋಪಿಸಿದ್ದಾರೆ. 

‘ಈ ಸಂಘಟನೆಗಳು ರಾಷ್ಟ್ರದ ಹಲವು ಭಾಗಗಳಲ್ಲಿ ಧರ್ಮಾಂಧತೆಯನ್ನು ಹಬ್ಬಿಸುತ್ತಿವೆ. ಅವುಗಳ ಚಟುವಟಿಕೆಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಮೋದ್ ಮಹಾಜನ್ ಬೆಂಬಲ ನೀಡುತ್ತಿದ್ದಾರೆ’ ಎಂದು ಆಪಾದಿಸಿದ್ದಾರೆ.

ಬಗರ್‌ಹುಕುಂ: ಸಾಗುವಳಿ ಚೀಟಿಗೆ ಆದೇಶ

ಬೆಂಗಳೂರು, ಜ. 7– ಬಗರ್‌ಹುಕುಂ ಸಾಗುವಳಿ ಜಮೀನನ್ನು ಕಾಯಂ ಮಾಡಬೇಕೆಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸದೆ ಇರುವ ಪ್ರಕರಣಗಳನ್ನು ಗುರುತಿಸಿ ಅವುಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳೇ ಅಗತ್ಯ ದಾಖಲೆ ತಯಾರಿಸಿ ಸಾಗುವಳಿ ಚೀಟಿ ಕೊಡಬೇಕೆಂದು ಸರ್ಕಾರವು ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT