ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಡಿ.ವಿ.ಜಿ.ಗೆ ಪದ್ಮಭೂಷಣ

Published 25 ಜನವರಿ 2024, 18:38 IST
Last Updated 25 ಜನವರಿ 2024, 18:38 IST
ಅಕ್ಷರ ಗಾತ್ರ

ಲೆವಿ ಪ‍ಡೆವವರೆಗೆ ಅಕ್ರಮ ಸಂಗ್ರಹ ಬೇಡ: ವರ್ತಕರಿಗೆ ಸಚಿವರ ಮನವಿ

ಬೆಂಗಳೂರು, ಜ. 25– ಸರ್ಕಾರ ಉದ್ದೇಶಿಸಿರು ವಷ್ಟು ಲೆವಿ ಭತ್ತವನ್ನು ಪಡೆಯುವವರೆಗೆ ಭತ್ತವನ್ನು ಅಕ್ರಮವಾಗಿ ಶೇಖರಿಸಿಡಬಾರದೆಂದು ಆಹಾರ ಸಚಿವ ಕೆ.ಎಚ್.ಪಾಟೀಲರು ಇಂದು ರಾಜ್ಯದ ವರ್ತಕ ವೃಂದಕ್ಕೆ ಮನವಿ ಮಾಡಿದರು.

ತೆರೆದ ಮನಸ್ಸಿನಿಂದ ಹಾಗೂ ಅಷ್ಟೇ ಖಂಡತುಂಡವಾಗಿ ಮಾತನಾಡಿದ ಆಹಾರ ಸಚಿವರು, ಅಕ್ರಮವಾಗಿ ಸಂಗ್ರಹಿಸಿದರೆ ಸರ್ಕಾರದ ತೀವ್ರ ಕ್ರಮ ತಪ್ಪದೆಂದೂ ಎಚ್ಚರಿಕೆ ನೀಡಿದರು.

‘ನಿರಪರಾಧಿಗಳನ್ನು ಶಿಕ್ಷಿಸುವ ಇಚ್ಛೆ ನನಗಿಲ್ಲ. ಅಪರಾಧಿಗಳ ಸಂಖ್ಯೆಯನ್ನು ಹೆಚ್ಚಿಸುವ ಬಯಕೆಯೂ ಇಲ್ಲ’ ಎಂದು ಸೂಚ್ಯವಾಗಿ ಹೇಳಿ, ಸರ್ಕಾರದೊಡನೆ ಸಹಕರಿಸಬೇಕು ಎಂದು ಕೋರಿದರು.

‘ಹಿಂದಿನದ್ದನ್ನು ಬಿಟ್ಟುಬಿಡಿ. ಹಿಂದಿನ ಬಾಬು ನಡೆಯೋದಿಲ್ಲ. ಮಗ ಸಿಕ್ಕಿದರೂ ಕೆ.ಎಚ್‌.ಪಾಟೀಲ್ ಬಿಡೋದಿಲ್ಲ’ ಎಂದು ಸ್ಪಷ್ಟಪಡಿಸಿದರು.

***

ವಿ.ಕೆ.ಆರ್‌.ವಿ. ರಾವ್‌, ಡಿ.ವಿ.ಜಿ.ಗೆ ಪದ್ಮಭೂಷಣ

ನವದೆಹಲಿ, ಜ. 25– ಕನ್ನಡದ ಖ್ಯಾತ ಸಾಹಿತಿ ಡಾ. ಡಿ.ವಿ.ಗುಂಡಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.

ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ವಿ.ಕೆ.ಆರ್‌.ವಿ. ರಾವ್‌ ಅವರಿಗೂ ಪದ್ಮಭೂಷಣ ಪ್ರಶಸ್ತಿ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT