ರಾಯಪುರ, ಸೆ.29– ಶನಿವಾರ ಗಾಯಿಗಢ ಜಿಲ್ಲೆಯ ಕಾರ್ಸಿಯಾ ಪಟ್ಟಣದಲ್ಲಿ ಉದ್ರಿಕ್ತ ವಿದ್ಯಾರ್ಥಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸಂಸತ್ ಸದಸ್ಯ ಉಮದ್‌ಸಿಂಗ್ ರಾಥಿಯಾ ಎಂಬುವರ ಮುಖಕ್ಕೆ ಕಪ್ಪು ಬೂಟ್‌ಪಾಲಿಷ್ ಬಳಿದು, ಕುತ್ತಿಗೆಗೆ ಪಾದರಕ್ಷೆಗಳ ಹಾರ ಹಾಕಿ ಅವರನ್ನು ಕತ್ತೆಯ ಮೇಲೆ ಕೂಡಿಸಿ ಮೆರವಣಿಗೆ ನಡೆಸಿದರೆಂದು ಇಂದು ಬೆಳಿಗ್ಗೆ ಇಲ್ಲಿಗೆ ಬಂದಿರುವ ವರದಿ ತಿಳಿಸಿದೆ.