ಗುರುವಾರ , ಅಕ್ಟೋಬರ್ 29, 2020
26 °C

ವಾಚಕರ ವಾಣಿ: ಶ್ರಮಿಕರಿಗೆ ಆಗಲಿ ರೈಲಿನ ಪ್ರಯೋಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ ಸಮಯದಲ್ಲಿ ಊರಿನತ್ತ ಮುಖ ಮಾಡಿದ್ದ ಶ್ರಮಿಕ ವರ್ಗ, ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಪುನಃ ಬದುಕು ಕಟ್ಟಿಕೊಳ್ಳಲು ಬೆಂಗಳೂರಿನತ್ತ ಮರುವಲಸೆ ಆರಂಭಿಸಿತು. ಅಂತೆಯೇ ದೇಶದಾದ್ಯಂತ ಸುಮಾರು 200 ರೈಲುಗಳು ವಿಶೇಷ ರೈಲಿನ ಹೆಸರಿನಲ್ಲಿ ಆರಂಭಗೊಂಡವು. ಆದರೆ, ಅದೇಕೊ ಕಲ್ಯಾಣ ಕರ್ನಾಟಕದ ಮುಖೇನ ಹಾದು ಹೋಗುವ ಸೊಲ್ಲಾಪುರ- ಹಾಸನ ಮತ್ತು ಬಾಗಲಕೋಟೆ- ಮೈಸೂರು ನಡುವಿನ ರೈಲು ಸೇವೆ ಆರಂಭಗೊಳ್ಳಲಿಲ್ಲ. ಈ ಎರಡು ರೈಲುಗಳ ಮುಖಾಂತರವೇ ಹೆಚ್ಚಿನ ಶ್ರಮಿಕರು ಬೆಂಗಳೂರು ತಲುಪುತ್ತಾರೆ. ರಾಜ್ಯದವರೇ ಆದ ಕೇಂದ್ರದ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿಯವರಿಗೆ ಹಲವಾರು ಟ್ವೀಟ್‌ಗಳ ಮೂಲಕ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.

ಇತ್ತೀಚೆಗಷ್ಟೇ ಕಲ್ಯಾಣ ಕರ್ನಾಟಕ ದಿನ ಆಚರಿಸಲಾಗಿದೆ. ಶ್ರಮಿಕ ವರ್ಗಕ್ಕೆ ರೈಲು ಆರಂಭಿಸಲಾಗದ ವ್ಯವಸ್ಥೆಯಲ್ಲಿ ನಿಜವಾದ ಕಲ್ಯಾಣ ಆಗುವುದೆಂದು ಎಂಬ ಹಲವರ ಗೊಣಗಾಟದಲ್ಲಿ ಅರ್ಥವಿದೆ ಎನಿಸುತ್ತದೆ.

-ವೆಂಕಟೇಶ ಮುದ್ಗಲ್, ಕಲಬುರ್ಗಿ
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು