ಗುರುವಾರ , ಮೇ 13, 2021
16 °C

ಸಭೆಗೆ ಶಿಸ್ತುಬದ್ಧ ಹಾಜರಾತಿ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ ಮಹಾನಗರಪಾಲಿಕೆಯ ಸಾಮಾನ್ಯ ಸಭೆಗೆ ಸದಸ್ಯರೊಬ್ಬರು ಬರ್ಮುಡಾ ಹಾಕಿಕೊಂಡು ಪಾಲ್ಗೊಂಡಿದ್ದು (ಪ್ರ.ವಾ., ಏ. 8) ವಿಷಾದನೀಯ ಸಂಗತಿ. ಸಭೆ ಅಂದರೆ ಅದಕ್ಕೆ ತನ್ನದೇ ಆದ ಗೌರವ ಇರುತ್ತದೆ. ಎಂತಹ ಸಭೆಯೇ ಆಗಲಿ ಅದು ಪ್ರಮುಖ ವಿಷಯಗಳ ಚರ್ಚೆ, ಸಮಸ್ಯೆಗಳ ಮಂಡನೆ, ಪರಿಹಾರಗಳು, ವಿಚಾರ ವಿನಿಮಯಗಳಿಂದ ಕೂಡಿರುತ್ತದೆ. ಸಭೆಗೆ ದಾಖಲೆಗಳ ಜೊತೆ ಶಿಸ್ತುಬದ್ಧವಾಗಿ ಹಾಜರಾಗುವುದು ಅಷ್ಟೇ ಮುಖ್ಯವಾಗಿರುತ್ತದೆ. ನಾವು ಹಾಕಿಕೊಳ್ಳುವ ಬಟ್ಟೆ ನಮ್ಮ ಗುಣವನ್ನು ತೋರಿಸುತ್ತದೆ ಎಂಬ ಮಾತಿದೆ. ಕೆಲ ದಿನಗಳ ಹಿಂದೆ ವಿಧಾನಸಭೆಯಲ್ಲಿ ಶಾಸಕರೊಬ್ಬರು ತಮ್ಮ ಶರ್ಟ್ ಬಿಚ್ಚಿ ಸಭೆಗೆ ಅಗೌರವ ತಂದಿದ್ದನ್ನು ನಾವು ನೋಡಿದ್ದೇವೆ. ಇಂತಹ ಪ್ರಸಂಗಗಳನ್ನು ನೋಡಿದರೆ, ಸಭೆ, ಸಮಾರಂಭಗಳಿಗೆ ವಸ್ತ್ರಸಂಹಿತೆ ಜಾರಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ.

–ದಿಲೀಪ್, ದಾವಣಗೆರೆ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು