ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಧರ್ಮಭೇದ, ರಾಜಕೀಯ ಮೇಲಾಟ ಬೇಡ

Last Updated 23 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಎಲ್ಲೆಡೆ ಜಾತ್ರೆಯ ಸಂಭ್ರಮ ಆರಂಭವಾಗಿದೆ. ಜಾತ್ರೆಯಲ್ಲಿನ ವ್ಯಾಪಾರವು ಎಷ್ಟೋ ಕುಟುಂಬಗಳ ಜೀವನಕ್ಕೆ ಆಧಾರವಾಗಿರುತ್ತದೆ. ಆದರೆ ಕರಾವಳಿಯಲ್ಲಿ ಧರ್ಮದ ದಳ್ಳುರಿ ತಲೆ ಎತ್ತಿದೆ. ಧರ್ಮದ ಹೆಸರಿನಲ್ಲಿ ಮೂಡಿಸಿರುವ ವಿರಸ ಇತರ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ. ವ್ಯಾಪಾರಕ್ಕೆ ಜಾತಿ, ಮತವು ಸಮಸ್ಯೆ ಆಗಬಾರದು. ಆದರೆ ಹಿಂದೂ ದೇವಾಲಯಗಳ ಮುಂದೆ ಮುಸ್ಲಿಮರ ವ್ಯಾಪಾರಕ್ಕೆ ತಡೆ ಒಡ್ಡಲಾಗುತ್ತಿದೆ. ಈ ಬಗೆಯ ಭೇದಭಾವದ ನಡೆ ಜನರಲ್ಲಿ ಬಿರುಕು ಮೂಡಿಸುತ್ತದೆ. ಸಮಾಜದಲ್ಲಿ ಶಾಂತಿ ಕದಡಲು ಕಾರಣವಾಗುತ್ತದೆ. ದೇಗುಲದ ಆಡಳಿತ ಮಂಡಳಿಯವರು ಧರ್ಮಭೇದ ಮಾಡಬಾರದು. ಶಾಂತಿ– ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಇದರಲ್ಲಿ ಎಲ್ಲರ ಹಿತ ಅಡಗಿದೆ.

–ಎಂ.ಎಸ್.ಉಷಾ ಪ್ರಕಾಶ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT