ಚಿತ್ರಗಳಲ್ಲಿ ನೋಡಿ: ಕೊಡಗಿನಲ್ಲಿ ಸುರಿದ ರಾಶಿ ರಾಶಿ ಆಲಿಕಲ್ಲು
ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆಯಾಗಿದೆ. ಬಿರುಗಾಳಿಗೆ ಬೆಳೆಗಳು ನೆಲಕಚ್ಚಿವೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಮುಳ್ಳೂರು, ನಿಡ್ತ, ಅಂಕನಹಳ್ಳಿ, ಗುಡುಗಳಲೆಯಲ್ಲಿ ರಾಶಿ ರಾಶಿ ಆಲಿಕಲ್ಲು ಸುರಿದಿದೆ. ದೊಡ್ಡವರು, ಮಕ್ಕಳು ಎಲ್ಲರು ಬೊಗಸೆಯಲ್ಲಿ ಆಲಿಕಲ್ಲು ಎತ್ತಿ ಸಂಭ್ರಮಿಸಿದರು. ಕಾಫಿ ತೋಟ, ರಸ್ತೆ, ಮನೆಯ ಚಾವಣಿ, ತೆಂಗಿನ ತೋಟ, ಅಡಿಕೆ ತೋಟ ಹಾಗೂ ಬಾಳೆ ತೋಟಗಳಲ್ಲಿ ಅಪಾರ ಪ್ರಮಾಣ ಆಲಿಕಲ್ಲು ಸುರಿದಿದೆ. ಆಲಿಕಲ್ಲು ಮಳೆಯಾಗುತ್ತಿರುವುದು ರೈತರ ಆತಂಕ ಹೆಚ್ಚಿಸಿದೆ.
hail stone | Coorg |ಕೊಡಗು: ಆಲಿಕಲ್ಲು ಹಿಡಿದಿರುವ ಜನರು
ಎಲ್ಲಿ ನೋಡಿದರೂ ರಾಶಿ ರಾಶಿ ಆಲಿಕಲ್ಲು
ಮಕ್ಕಳು ಬೊಗಸೆಯಲ್ಲಿ ಆಲಿಕಲ್ಲು ಎತ್ತಿ ಸಂಭ್ರಮಿಸಿದರು
ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆ
ಕೊಡಗು ಜಿಲ್ಲೆಯ ವಿವಿಧೆಡೆ ರಸ್ತೆಗಳಲ್ಲಿ ಆಲಿಕಲ್ಲು
ಕೊಡಗು ಜಿಲ್ಲೆಯ ವಿವಿಧೆಡೆ ತೋಟಗಳಲ್ಲಿ ಆಲಿಕಲ್ಲು
ಕಾಫಿ ತೋಟ, ರಸ್ತೆ, ಮನೆಯ ಚಾವಣಿ, ತೆಂಗಿನ ತೋಟ, ಅಡಿಕೆ ತೋಟ ಹಾಗೂ ಬಾಳೆ ತೋಟಗಳಲ್ಲಿ ಅಪಾರ ಪ್ರಮಾಣ ಆಲಿಕಲ್ಲು
ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಮುಳ್ಳೂರು, ನಿಡ್ತ, ಅಂಕನಹಳ್ಳಿ, ಗುಡುಗಳಲೆಯಲ್ಲಿ ರಾಶಿ ರಾಶಿ ಆಲಿಕಲ್ಲು
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ ನೋಡಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಹುಟ್ಟುಹಬ್ಬದ ಸಂಭ್ರಮ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು 78ನೇ ವಸಂತಗಳನ್ನು ಪೂರೈಸಿದ್ದು, 79ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಸೇರಿ ಕೆಲ ರಾಜಕೀಯ ಮುಖಂಡರು ಮನೆಗೆ ತೆರಳಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ಮನೆಯಲ್ಲಿ ಕುಟುಂಬ ಸದಸ್ಯರು ಆರತಿ ಬೆಳಗಿ, ಆಶೀರ್ವಾದ ಪಡೆದಿದ್ದಾರೆ. ಯಡಿಯೂರಪ್ಪನವರ ಬರ್ತ್ ಡೇ ಸಂಭ್ರಮದ ಚಿತ್ರಗಳು ಇಲ್ಲಿವೆ.
ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಸೇರಿ ಪಕ್ಷದ ಮುಖಂಡರು ಮನೆಗೆ ತೆರಳಿ ಜನ್ಮದಿನದ ಶುಭಾಶಯ ಕೋರಿದರು
ಜನ್ಮದಿನದಂದು ಬೆಳಿಗ್ಗೆಯೇ ದೇವರ ಪೂಜೆ ನೆರವೇರಿಸಿದ ಯಡಿಯೂರಪ್ಪ
ತಂದೆಯ ಆಶೀರ್ವಾದ ಪಡೆದ ಪುತ್ರ ಬಿ.ವೈ. ವಿಜಯೇಂದ್ರ
ಆರತಿ ಬೆಳಗಿ ಜನ್ಮದಿನದ ಶುಭಾಶಯ ತಿಳಿಸಿದ ಕುಟುಂಬ ಸದಸ್ಯರು
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | 'ದಾವಣಗೆರೆ ಎಕ್ಸ್ಪ್ರೆಸ್' ಖ್ಯಾತಿಯ ವಿನಯ್ ಕುಮಾರ್ ಮರೆಯಲಾಗದ ಕ್ಷಣಗಳು
'ದಾವಣಗೆರೆ ಎಕ್ಸ್ಪ್ರೆಸ್' ಖ್ಯಾತಿಯ ಕರ್ನಾಟಕದ ಮಾಜಿ ನಾಯಕ ವಿಯನ್ ಕುಮಾರ್ ಅಂತರ ರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ವಿನಯ್ ಕುಮಾರ್ ಭಾರತ ತಂಡವನ್ನು 31 ಏಕದಿನ, 9 ಟ್ವೆಂಟಿ-20 ಹಾಗೂ ಒಂದು ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಹಾಗೆಯೇ ದೇಶೀಯ ಕ್ರಿಕೆಟ್ನಲ್ಲಿ ಕರ್ನಾಟಕ ತಂಡಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.
Vinay Kumar | Karnataka | Team India | Cricket | Davanagere |139 ಫಸ್ಟ್ ಕ್ಲಾಸ್ ಪಂದ್ಯದಲ್ಲಿ 504 ವಿಕೆಟ್ ಸರದಾರ
ಪತ್ನಿ ರಿಚಾ ಜೊತೆ ವಿನಯ್ ಕುಮಾರ್
ಬ್ಯಾಟಿಂಗ್ನಲ್ಲೂ ಉಪಯುಕ್ತ ಕೊಡುಗೆ
ಭಾರತ ತಂಡವನ್ನು ಎಲ್ಲ ಪ್ರಕಾರದ ಕ್ರಿಕೆಟ್ನಲ್ಲೂ ಪ್ರತಿನಿಧಿಸಿದ ಖ್ಯಾತಿ
ಐಪಿಎಲ್, ಕೆಪಿಎಲ್ನಲ್ಲೂ ಮಿಂಚು
ಫಸ್ಟ್ ಕ್ಲಾಸ್ನಲ್ಲಿ 3311 ರನ್ ಕಲೆ ಹಾಕಿದ್ದಾರೆ.
ಲಿಸ್ಟ್ ಎ ಕ್ರಿಕೆಟ್ನಲ್ಲಿ 225 ವಿಕೆಟ್, 1198 ರನ್ ಸಾಧನೆ
ಅಂತರ ರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 49 ವಿಕೆಟ್
2012ರಲ್ಲಿ ಪರ್ತ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕೈಕ ಟೆಸ್ಟ್
2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ, 2013ರಲ್ಲಿ ಕೊನೆಯ ಪಂದ್ಯ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಮೋದಿ ಸ್ಟೇಡಿಯಂನಲ್ಲಿಅಕ್ಷರ್-ಅಶ್ವಿನ್ ಸ್ಪಿನ್ ಮೋಡಿ; ಭಾರತಕ್ಕೆ ಗೆಲುವು
ಅಕ್ಷರ್ ಪಟೇಲ್ (ಪಂದ್ಯದಲ್ಲಿ 11 ವಿಕೆಟ್) ಹಾಗೂ ಆರ್. ಅಶ್ವಿನ್ (ಪಂದ್ಯದಲ್ಲಿ 7 ವಿಕೆಟ್) ಮಾಂತ್ರಿಕ ಸ್ಪಿನ್ ದಾಳಿಯ ನೆರವಿನಿಂದ ಟೀಮ್ ಇಂಡಿಯಾವು ಪ್ರವಾಸಿ ಇಂಗ್ಲೆಂಡ್ ವಿರುದ್ಧ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ಚಿತ್ರ ಕೃಪೆ (ಪಿಟಿಐ)
India vs England | Test cricket | R Ashwin | Virat Kohli | Ahmedabad |ದ್ವಿತೀಯ ಇನ್ನಿಂಗ್ಸ್ನಲ್ಲೂ ಐದು ವಿಕೆಟ್ ಪಡೆದ ಸ್ಥಳೀಯ ಹೀರೊ ಅಕ್ಷರ್ ಪಟೇಲ್
400 ವಿಕೆಟ್ ಕ್ಲಬ್ ಸೇರಿದ ರವಿಚಂದ್ರನ್ ಅಶ್ವಿನ್
ಮೊದಲ ಇನ್ನಿಂಗ್ಸ್ನಲ್ಲಿ ಆರು ವಿಕೆಟ್ ಕಬಳಿಸಿದ್ದ ಅಕ್ಷರ್ ಪಟೇಲ್
8 ರನ್ ತೆತ್ತು 5 ವಿಕೆಟ್ ಪಡೆದ ಇಂಗ್ಲೆಂಡ್ ನಾಯಕ ಜೋ ರೂಟ್
ಭಾರತೀಯ ಅಭಿಮಾನಿಗಳ ಸಂಭ್ರಮ
100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿದ ಇಶಾಂತ್ ಶರ್ಮಾ
ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಪಿಂಕ್ ಬಾಲ್ ಕದನ
ಮೊದಲ ಇನ್ನಿಂಗ್ಸ್ನಲ್ಲಿ ಭಾರತಕ್ಕೆ ಆಸರೆಯಾಗಿದ್ದ ರೋಹಿತ್ ಶರ್ಮಾ
ಧೋನಿ ದಾಖಲೆ ಮುರಿದ ನಾಯಕ ವಿರಾಟ್ ಕೊಹ್ಲಿ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಸೆ ಜೀವಂತವಾಗಿರಿಸಿದ ಭಾರತ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos| ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದು, ಈಜಿ ಸಂಭ್ರಮಿಸಿದ ರಾಹುಲ್ ಗಾಂಧಿ
Photos| ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದು, ಈಜಿ ಸಂಭ್ರಮಿಸಿದ ರಾಹುಲ್ ಗಾಂಧಿ ಕೇರಳದ ಕೊಲ್ಲಂಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರು ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದು, ಈಜಿ ಸಂಭ್ರಮಿಸಿದ್ದಾರೆ. ಕೊಲ್ಲಂನಲ್ಲಿ ಒಟ್ಟಾರೆ ಎರಡುವರೆ ತಾಸು ಮೀನುಗಾರರೊಂದಿಗಿದ್ದ ರಾಹುಲ್, ಆಳ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ವೀಕ್ಷಿಸಿದರು. ನಂತರ ಅವರು ನೀಡಿದ ಆಹಾರ ಸೇವಿಸಿದರು. ಇದರ ಮಧ್ಯೆ ಅವರು ಸಮುದ್ರದಲ್ಲಿ ಈಜಿದ್ದಾರೆ. 'ಮೀನುಗಾರರೊಂದಿಗೆ ಸಮುದ್ರಕ್ಕೆ ದೋಣಿಯಲ್ಲಿ ತೆರಳಿದ್ದ ವೇಳೆ ರಾಹುಲ್ ಸಮುದ್ರಕ್ಕೆ ಜಿಗಿದಿದ್ದಾರೆ. ಸುಮಾರು 10 ನಿಮಿಷಗಳ ಕಾಲ ಮೀನುಗಾರರೊಂದಿಗೆ ಅವರು ಸಮುದ್ರದಲ್ಲಿ ಈಜಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ದೋಣಿಯಲ್ಲಿದ್ದ ಮೀನುಗಾರರು ಸಮುದ್ರದಲ್ಲಿ ಬೀಸಿದ್ದ ಬಲೆ ಸರಿಪಡಿಸಲೆಂದು ಮೊದಲು ಸಮುದ್ರಕ್ಕೆ ಹಾರಿದರು. ರಾಹುಲ್ ಅವರೂ ಮೀನುಗಾರರೊಂದಿಗೆ ಸಮುದ್ರಕ್ಕೆ ಜಿಗಿದರು,' ಎಂದು ಕಾಂಗ್ರೆಸ್ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ. 'ಉತ್ತಮ ಈಜುಗಾರರಾಗಿರುವ ರಾಹುಲ್ ನಮಗ್ಯಾರಿಗೂ ತಿಳಿಸದೇ ನೀರಿಗೆ ಜಿಗಿದಿದ್ದು ದಿಗ್ಭ್ರಮೆ ಮೂಡಿಸಿತು. ಅದರೆ, ಅವರು ಸಾವದಾನವಾಗಿಯೇ ಹತ್ತು ನಿಮಿಷಗಳ ಕಾಲ ಈಜಾಡಿ ನಂತರ ದೋಣಿಗೆ ಮರಳಿದರು,' ಎಂದೂ ಪಕ್ಷದ ಮುಖಂಡರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
Rahul Gandhi | Kollam. | Kerala | Fisherman | Swimming | Sea |ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕೊಲ್ಲಂನಲ್ಲಿ ಮೀನುಗಾರರೊಂದಿಗೆ ರಾಹುಲ್
ಕೊಲ್ಲಂನಲ್ಲಿ ಮೀನುಗಾರರೊಂದಿಗೆ ರಾಹುಲ್
ಕೊಲ್ಲಂನಲ್ಲಿ ಮೀನುಗಾರರೊಂದಿಗೆ ರಾಹುಲ್
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಮುದ್ರದಲ್ಲಿ ಮೀನುಗಾರರೊಂದಿಗೆ ಈಜುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ