ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

Photos: ನೊಣ ಹಿಡುಕದೊಂದಿಗೆ ಕಳೆದ ಬೆಳಗಿನ ಕ್ಷಣಗಳು

ಕಳೆದ ವಾರ ಮೈಸೂರಿಗೆ ಹೋಗಿದ್ದೆ. ಅರಮನೆ ಫೋಟೊಗಳನ್ನು ಬೇಕಾದಷ್ಟು ತೆಗೆದಿದ್ದಾಯಿತು, ಮೈಸೂರಿನಲ್ಲಿ ಇನ್ಯಾವ ಚಿತ್ರ ಸೆರೆ ಹಿಡಿಯುವುದು ಅಂದುಕೊಂಡು ಚಾಮುಂಡಿ ಬೆಟ್ಟದ ತಪ್ಪಲಿನತ್ತ ಹೊರಟೆ. ಕ್ಯಾಮೆರಾ ಹಿಡಿದು ಹಾಗೇ ಹೆಜ್ಜೆ ಹಾಕುವಾಗ ಇದ್ದಕ್ಕಿದ್ದಂತೆ ದರ್ಶನ ನೀಡಿದ ನೀಲಿಬಣ್ಣದ ನೊಣ ಹಿಡುಕ ಎಂತಹ ಖುಷಿಕೊಟ್ಟಿತು ಅಂತೀರಿ. ನೆಲದ ಮೇಲಿನ ಸಣ್ಣ ಗುಂಡಿಯಲ್ಲಿ ನಿಂತಿದ್ದ ನೀರಿನಲ್ಲಿ ಮಜ್ಜನ ಪೂರೈಸಿದ ನೊಣ ಹಿಡುಕ ರೆಕ್ಕೆಗಳನ್ನು ಆಡಿಸುತ್ತಾ ಮೈ ಒಣಗಿಸಿಕೊಂಡಿತು. ಮರದ ಕೊಂಬೆಯಲ್ಲಿ ಜಪ್ಪಿಸಿ ಕುಳಿತು ನೊಣಗಳನ್ನು ಹಿಡಿದು, ಗುಳುಂ ಮಾಡುವ ಮೂಲಕ ಬೆಳಗಿನ ಉಪಾಹಾರವನ್ನೂ ಪೂರೈಸಿತು. ಬಳಿಕ ವಿಹಾರ ಹೊರಟಿತು. ಶ್ರೀಮಂತ ಚಿತ್ರಗಳು ಸಿಕ್ಕ ಖುಷಿಯಲ್ಲಿ ನನ್ನ ಕ್ಯಾಮೆರಾ ಕಣ್ಣು ಮಿಟುಕಿಸಿತು. ಚಿತ್ರಗಳು–ಟಿಪ್ಪಣಿ: ವಿಶ್ವನಾಥ್‌ ಸುವರ್ಣ
Published : 28 ನವೆಂಬರ್ 2020, 14:55 IST
ಫಾಲೋ ಮಾಡಿ
Comments
ನೀಲಿಬಣ್ಣದ ನೊಣ ಹಿಡುಕ
ನೀಲಿಬಣ್ಣದ ನೊಣ ಹಿಡುಕ
ADVERTISEMENT
ನೀಲಿಬಣ್ಣದ ನೊಣ ಹಿಡುಕ
ನೀಲಿಬಣ್ಣದ ನೊಣ ಹಿಡುಕ
ನೀಲಿಬಣ್ಣದ ನೊಣ ಹಿಡುಕ
ನೀಲಿಬಣ್ಣದ ನೊಣ ಹಿಡುಕ
ನೀಲಿಬಣ್ಣದ ನೊಣ ಹಿಡುಕ
ನೀಲಿಬಣ್ಣದ ನೊಣ ಹಿಡುಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT