ಭಾನುವಾರ, ಸೆಪ್ಟೆಂಬರ್ 26, 2021
21 °C

ಮಡಿಕೇರಿ: ಇಂದು ಸಂಜೆ ‘ಇಬ್ಬನಿ’ ರೆಸಾರ್ಟ್‌ಗೆ ಸಿಎಂ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಡಿಕೇರಿ ಸಮೀಪದ ‘ಇಬ್ಬನಿ’ ರೆಸಾರ್ಟ್‌ಗೆ ಶುಕ್ರವಾರ ಸಂಜೆಯೇ ಆಗಮಿಸುವ ಸಾಧ್ಯತೆಯಿದೆ.

ರೆಸಾರ್ಟ್‌ನಲ್ಲಿ ಐದು ಐಷಾರಾಮಿ ಕೊಠಡಿಗಳನ್ನು ಬುಕ್‌ ಮಾಡಲಾಗಿದ್ದು, ಮುಖ್ಯಮಂತ್ರಿ ಜತೆಗೆ ಜೆಡಿಎಸ್‌ನ ಕೆಲವು ಸಚಿವರೂ ಬರುವ ಸಾಧ್ಯತೆಯಿದೆ. ಭಾನುವಾರ ಮಧ್ಯಾಹ್ನದ ನಂತರ ಮುಖ್ಯಮಂತ್ರಿ ಇಲ್ಲಿಂದ ವಾಪಸ್‌ ತೆರಳಲಿದ್ದಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ಇದೇ ರೆಸಾರ್ಟ್‌ನಲ್ಲಿ ‘ಮೈತ್ರಿ’ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಅವರ ಪುತ್ರ, ಶಾಸಕ ಯತೀಂದ್ರ ಎರಡು ದಿನ ವಾಸ್ತವ್ಯ ಹೂಡಿದ್ದರು. ಬಳಿಕ ರಾಜ್ಯದಲ್ಲಿ ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೇ’ ಎಂಬ ಕೂಗು ಕಾಂಗ್ರೆಸ್‌ ಶಾಸಕರ ವಲಯದಿಂದ ಕೇಳಿಬಂದಿತ್ತು. ಈಗ ಅದೇ ರೆಸಾರ್ಟ್‌ನಲ್ಲಿ ಮುಖ್ಯಮಂತ್ರಿಯ ವಿಶ್ರಾಂತಿ ಕುತೂಹಲ ಮೂಡಿಸಿದೆ.

‘ಇಬ್ಬನಿ’, ಕೊಡಗಿನ ಪ್ರತಿಷ್ಠಿತ ರೆಸಾರ್ಟ್‌ಗಳಲ್ಲಿ ಒಂದಾಗಿದೆ. ಮಡಿಕೇರಿ– ಮೈಸೂರು ಹೆದ್ದಾರಿ ಬದಿಯ ಕಾಫಿ ತೋಟದ ಮಧ್ಯದಲ್ಲಿರುವ ರೆಸಾರ್ಟ್‌ನಲ್ಲಿ ಐಷಾರಾಮಿ ಸೌಲಭ್ಯಗಳಿವೆ.

ಇದನ್ನೂ ಓದಿ... ಉಡುಪಿ: ರೆಸಾರ್ಟ್‌ನಲ್ಲಿ ದೇವೇಗೌಡರಿಗೆ ಪ್ರಕೃತಿ ಚಿಕಿತ್ಸೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು