ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ಭಾರತ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಮೀನುಗಾರರ ಸುಸ್ಥಿರ ಅಭಿವೃದ್ಧಿಗಾಗಿ ನೀಲಿ ಕ್ರಾಂತಿಯನ್ನು ಉತ್ತೇಜಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. 2020 ರಲ್ಲಿ ಪ್ರಾರಂಭಿಸಲಾದ ಯೋಜನೆಯು ಮೀನುಗಾರರ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಮೂಲ ಸೌಕರ್ಯವನ್ನು ಕಲ್ಪಿಸುತ್ತದೆ. ಈ ಯೋಜನೆಯನ್ನು ಪಡೆಯುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.

ಯೋಜನೆಯ ಪ್ರಮುಖ ಅಂಶಗಳು:

ಈ ಯೋಜನೆಯು ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಮೀನುಗಾರಿಕೆ ಇಲಾಖೆಯಿಂದ ರೂಪಿಸಲ್ಪಟ್ಟಿದೆ. ಇದು ಭಾರತದಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದೆ. ಮೀನುಗಾರರ ಕಲ್ಯಾಣ ಹಾಗೂ ಮೀನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒಟ್ಟು ₹20,050 ಕೋಟಿ ಹೂಡಿಕೆಯೊಂದಿಗೆ ಮತ್ಸ್ಯ ಸಂಪದ ಯೋಜನೆಯನ್ನು ಜಾರಿಗೆ ತರಲಾಗಿದೆ.
.ಪರಿಶಿಷ್ಟ ಪಂಗಡದೊಳಗೆ ಅಂತರ ಜಾತಿ ವಿವಾಹಕ್ಕೆ ಆರ್ಥಿಕ ಬೆಂಬಲ.
ಮತ್ಸ್ಯ ಸಂಪದ ಯೋಜನೆಗೆ ಸಿಗಲಿರುವ ಸಹಾಯಧನ :

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಫಲಾನುಭವಿಗಳಿಗೆ ಯೋಜನಾ ವೆಚ್ಚದ ಶೇ60 ರಷ್ಟು ಸಹಾಯಧನ ಸಿಗಲಿದೆ.

ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಯೋಜನಾ ವೆಚ್ಚದ ಶೇ40 ರಷ್ಟು ಸಹಾಯಧನ ಸಿಗಲಿದೆ.

ಯೋಜನೆಯ ಉಳಿದ ವೆಚ್ಚವನ್ನು ಬ್ಯಾಂಕ್ಗಳಿಂದ ಸಾಲದ ರೂಪದಲ್ಲಿ ಭರಿಸಲಾಗುತ್ತದೆ.

ಈಶಾನ್ಯ ಹಾಗೂ ಹಿಮಾಲಯ ರಾಜ್ಯಗಳಿಗೆ ಶೇ90 ರಷ್ಟು ಕೇಂದ್ರದಿಂದ ಹಾಗೂ ಶೇ10 ರಷ್ಟು ರಾಜ್ಯದಿಂದ ಸಹಾಯಧನ ಸಿಗಲಿದೆ.

ಇತರ ರಾಜ್ಯಗಳಿಗೆ ಶೇ60 ರಷ್ಟು ಕೇಂದ್ರದಿಂದ ಹಾಗೂ ಶೇ 40ರಷ್ಟು ರಾಜ್ಯದಿಂದ ಸಹಾಯಧನ ದೊರೆಯಲಿದೆ.

ಕೇಂದ್ರಾಡಳಿತ ಪ್ರದೇಶಗಳಿಗೆ ಶೇ100 ಸಹಾಯಧನ ಕೇಂದ್ರದಿಂದ ಸಿಗಲಿದೆ.

ಯಾವೆಲ್ಲಾ ಉದ್ದೇಶಗಳಿಗೆ ಸಹಾಯಧನ ಲಭ್ಯ?

ಮೀನುಗಳಿಗೆ ಆಹಾರ ತಯಾರಿಕಾ ಘಟಕದ ಸ್ಥಾಪನೆ: ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ₹60 ಲಕ್ಷದ ವರೆಗೂ ಸಾಲ ಸಿಗಲಿದೆ. ಸಾಮಾನ್ಯ ವರ್ಗದವರಿಗೆ ₹40 ಲಕ್ಷದವರೆಗೆ ಸಾಲ ಸಿಗಲಿದೆ.

ಅಲಂಕಾರಿಕ ಮೀನು ಸಾಕಾಣಿಕೆ ಘಟಕ ಸ್ಥಾಪನೆ: ಶೆಡ್ಗಳು, ಮೀನಿನ ಬ್ರೀಡಿಂಗ್ ಘಟಕಗಳು ಮತ್ತು ಸಾಕಾಣಿಕೆ ಟ್ಯಾಂಕ್ಗಳನ್ನು ಸ್ಥಾಪಿಸಲು ಸಹಾಯಧನವನ್ನು ನೀಡಲಾಗುತ್ತದೆ.

ಜಲಚರ ಸಾಕಾಣಿಕೆ ವಿಮೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಶೇ10 ರಷ್ಟು ಇರುತ್ತದೆ.

ಯೋಜನಾ ಘಟಕಕ್ಕೆ ಸಂಬಂಧಿಸಿದ ಯೋಜನೆಗಳ ಪ್ರಸ್ತಾವನೆಯನ್ನು ಈ ವಿಳಾಸಕ್ಕೆ ಕಳುಹಿಸಬೇಕು.

ಕಾರ್ಯದರ್ಶಿ

ಮೀನುಗಾರಿಕೆ ಇಲಾಖೆ

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ

ಭಾರತ ಸರ್ಕಾರ

ಕೊಠಡಿ ಸಂಖ್ಯೆ -221, ಕೃಷಿ ಭವನ

ನವದೆಹಲಿ - 110 001

ಇ–ಮೇಲ್ : secy-fisheries@gov.in
.ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ಲಾಭ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.
ಅಗತ್ಯವಿರುವ ದಾಖಲೆಗಳು:

ಪ್ಯಾನ್ ಕಾರ್ಡ್

ಆಧಾರ್ ಕಾರ್ಡ್

ಬ್ಯಾಂಕ್ ಖಾತೆ ವಿವರ

ವ್ಯಾಪಾರ ನೋಂದಣಿ ಪ್ರಮಾಣಪತ್ರ

ಯೋಜನೆಯ ವರದಿ

ಭೂ ದಾಖಲೆಗಳು

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಫಲಾನುಭವಿಗಳು ತಮ್ಮ ವಿವರವಾದ ಯೋಜನಾ ವರದಿಯನ್ನು ಜಿಲ್ಲೆಯ ಮೀನುಗಾರಿಕಾ ಅಧಿಕಾರಿಗೆ ಸಲ್ಲಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.