ಜಗತ್ತಿನಲ್ಲಿ ವಿವಿಧ ಸೌಂದರ್ಯ ಸ್ಪರ್ಧೆಗಳು ನಡೆಯುತ್ತಿರುತ್ತವೆ. ಆದರೆ ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ಟಾಯ್ಲೆಟ್ ಪೇಪರ್ ಸೌಂದರ್ಯ ಸ್ಪರ್ಧೆ ಪ್ರತಿ ವರ್ಷವೂ ನಡೆಯುತ್ತದೆ. ಇದರಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಿಗಳು ಟಾಯ್ಲೆಟ್ ಪೇಪರ್‌ಗಳಿಂದ ವಿನ್ಯಾಸಗೊಳಿಸಿದ ಮದುವೆ ಗೌನ್‌ಗಳನ್ನು ಧರಿಸಬೇಕು.

ಪ್ರತಿವರ್ಷವೂ ಸುಮಾರು 50ಕ್ಕೂ ಹೆಚ್ಚು ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಒಂದಕ್ಕಿಂತ ಒಂದು ವಿಭಿನ್ನ ವಿನ್ಯಾಸದ ಗೌನ್‌ಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಇದರಲ್ಲಿ ಪ್ರಥಮ ಬಹುಮಾನವಾಗಿ ₹6 ಲಕ್ಷ ನಗದು, ಎರಡನೇ ಹಾಗೂ ಮೂರನೇ ಸ್ಥಾನ ಪಡೆದವರಿಗೆ ತಲಾ ₹5 ಲಕ್ಷ ಹಾಗೂ ₹2 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ!

ಮಡಕೆ ಮೇಲೆ ಅತಿ ಹಳೆಯ ಇಮೋಜಿ
ಮಡಕೆಯ ಮೇಲೆ ಎರಡು ಕಣ್ಣು ಹಾಗೂ ಬಾಯಿ ಹೊಂದಿರುವ ಇಮೋಜಿಯ ಚಿತ್ರ ಇರುವ 3,700 ವರ್ಷಗಳ ಹಿಂದಿನ ಪ್ರಾಚೀನ ಮಡಿಕೆಯೊಂದು ಪತ್ತೆಯಾಗಿದೆ.

ವಿಧಿ ವಿಜ್ಞಾನ ಅಧಿಕಾರಿಗಳು ಇದನ್ನು ಪತ್ತೆ ಮಾಡಿದ್ದು, ಇದು ಜಗತ್ತಿನ ಅತಿ ಹಳೆಯ ಇಮೋಜಿ ಆಗಿರಬಹುದೆಂದು ಊಹಿಸಿದ್ದಾರೆ. ಸಿರಿಯಾ ಗಡಿ ಸಮೀಪದ ಟರ್ಕಿಯಲ್ಲಿ ಪುರಾತನ ನಗರದ ಉತ್ಖನನ ಸಮಯದಲ್ಲಿ ಇದು ಪತ್ತೆಯಾಗಿದೆ. ಆ ಮಡಕೆಯಲ್ಲಿ ಎರಡು ಕಣ್ಣುಗಳಿರಬೇಕಾದ ಜಾಗದಲ್ಲಿ ಎರಡು ಚುಕ್ಕೆಗಳು ಹಾಗೂ ಬಾಯಿ ಜಾಗದಲ್ಲಿ ನಗುತ್ತಿರುವಂತೆ ರೇಖೆ ಎಳೆಯಲಾಗಿದೆ.

ಈ ಸ್ಥಳದ ಸಮೀಪದಲ್ಲಿಯೇ ಕೆಲವು ಹಳೆ ಕಾಲದ ಪಾತ್ರೆಗಳು ಹಾಗೂ ಮಡಕೆಗಳು ಪತ್ತೆಯಾಗಿದ್ದು, ಪುರಾತನ ಕಾಲದ ಕೆಲವು ಲೋಹದ ವಸ್ತುಗಳೂ ದೊರಕಿವೆ. ಅತಿ ಪ್ರಾಚೀನ ಇಮೋಜಿ ಹೊಂದಿರುವ ಮಡಕೆಯನ್ನು ಟರ್ಕಿಯ ಪುರಾತತ್ವ ಇಲಾಖೆಯಲ್ಲಿ ಜೋಪಾನವಾಗಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.