ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಡನ್ ವರ್ಷದ ಟಿ20 ತಂಡದಲ್ಲಿ ಪಾಕಿಸ್ತಾನದ ಮೂವರು; ವಿರಾಟ್ ಕೊಹ್ಲಿಗಿಲ್ಲ ಸ್ಥಾನ

Last Updated 24 ಡಿಸೆಂಬರ್ 2022, 12:00 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 2022ರಲ್ಲಿ ಅಮೋಘ ಪ್ರದರ್ಶನ ತೋರಿದ 11 ಆಟಗಾರರನ್ನೊಳಗೊಂಡ ತಂಡವನ್ನು ವಿಸ್ಡನ್‌ ವೆಬ್‌ಸೈಟ್‌ ಬಿಡುಗಡೆ ಮಾಡಿದೆ. ಆದರೆ, ಈ ವರ್ಷ ಉತ್ತಮ ಪ್ರದರ್ಶನ ತೋರಿರುವಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಶ್ರೀಲಂಕಾದ ವನಿಂದು ಹಸರಂಗ ಅವರು ಸ್ಥಾನ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ.

ಈ ವರ್ಷ ಚುಟುಕು ಮಾದರಿಯಲ್ಲಿ 20 ಪಂದ್ಯಗಳನ್ನು ಆಡಿರುವಕೊಹ್ಲಿ, ಒಂದು ಶತಕ ಮತ್ತು 8 ಅರ್ಧಶತಕ ಸಹಿತ 781 ರನ್ ಗಳಿಸಿದ್ದಾರೆ. ಹಸರಂಗ19 ಪಂದ್ಯಗಳಲ್ಲಿ ಬೌಲಿಂಗ್‌ ಮಾಡಿ 34 ವಿಕೆಟ್‌ ಉರುಳಿಸಿದ್ದಾರೆ.

ಈ ಬಾರಿ ಟಿ20 ವಿಶ್ವಕಪ್‌ ಗೆದ್ದ ತಂಡದ ನಾಯಕ ಜಾಸ್‌ ಬಟ್ಲರ್‌, ವಿಸ್ಡನ್‌ ವರ್ಷದ ತಂಡದ ಆರಂಭಿಕ ಬ್ಯಾಟರ್‌, ವಿಕೆಟ್‌–ಕೀಪರ್‌ ಮತ್ತು ನಾಯಕರಾಗಿ ಆಯ್ಕೆಯಾಗಿದ್ದಾರೆ.

ವಿಸ್ಡನ್‌ ಆಯ್ಕೆಯ ವರ್ಷದ ತಂಡ ಹೀಗಿದೆ
1. ಜಾಸ್‌ ಬಟ್ಲರ್‌ (ನಾಯಕ ಮತ್ತು ವಿಕೆಟ್‌–ಕೀಪರ್‌)
ಇಂಗ್ಲೆಂಡ್‌ನ ಜಾಸ್‌ ಬಟ್ಲರ್‌ ಈ ವರ್ಷ 15 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.160.41ರ ಸ್ಟ್ರೈಕ್‌ರೇಟ್‌ ಬ್ಯಾಟ್‌ ಬೀಸಿರುವ ಅವರು 35.53ರ ಸರಾಸರಿಯಲ್ಲಿ 462 ರನ್ ಗಳಿಸಿದ್ದಾರೆ. ಅವರು ಗಳಿಸಿದ ಗರಿಷ್ಠ ಸ್ಕೋರ್‌ ಅಜೇಯ 80 ಆಗಿದೆ.17 ಕ್ಯಾಚ್‌ಗಳನ್ನು ಸಹ ಹಿಡಿದಿದ್ದಾರೆ.

2. ಮೊಹಮ್ಮದ್‌ ರಿಜ್ವಾನ್
ಪಾಕಿಸ್ತಾನದ ಮೊಹಮ್ಮದ್‌ ರಿಜ್ವಾನ್‌ ಅವರು ವಿಸ್ಡನ್‌ ತಂಡದಲ್ಲಿ ಆರಂಭಿಕ ಬ್ಯಾಟರ್‌ ಆಗಿ ಸ್ಥಾನ ಪಡೆದಿದ್ದಾರೆ. ಅವರು ಈ ವರ್ಷ 25 ಪಂದ್ಯಗಳಲ್ಲಿ ಆಡಿದ್ದು,45.27 ಸರಾಸರಿಯಲ್ಲಿ996 ರನ್‌ ಕಲೆಹಾಕಿದ್ದಾರೆ. ರಿಜ್ವಾನ್‌ ಸ್ಟ್ರೇಕ್‌ರೇಟ್‌ 122.96 ಆಗಿದ್ದು, ವೈಯಕ್ತಿಕ ಗರಿಷ್ಠ ಮೊತ್ತ ಅಜೇಯ 88 ರನ್ ಆಗಿದೆ. ಅವರ ಬ್ಯಾಟ್‌ನಿಂದ 10 ಅರ್ಧಶತಕಗಳೂ ಬಂದಿವೆ.

3. ಸೂರ್ಯಕುಮಾರ್‌ ಯಾದವ್‌
ಭಾರತದ ಸ್ಫೋಟಕ ಶೈಲಿಯ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಮೂರನೇ ಕ್ರಮಾಂಕಕ್ಕೆ ಆಯ್ಕೆಯಾಗಿದ್ದಾರೆ. ಅವರು ಈ ವರ್ಷ ಆಡಿರುವ 31 ಇನಿಂಗ್ಸ್‌ಗಳಲ್ಲಿ 2 ಶತಕ ಮತ್ತು 9 ಅರ್ಧಶತಕ ಸಹಿತ46.56ರ ಸರಾಸರಿಯಲ್ಲಿ 1,164 ರನ್‌ ಗಳಿಸಿದ್ದಾರೆ. 187.44 ಅವರ ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ ಆಗಿದೆ.

4. ಗ್ಲೆನ್‌ ಫಿಲಿಪ್ಸ್‌
ನ್ಯೂಜಿಲೆಂಡ್‌ ಬ್ಯಾಟರ್‌ಗ್ಲೆನ್‌ ಫಿಲಿಪ್ಸ್‌ 19 ಇನಿಂಗ್ಸ್‌ಗಳಲ್ಲಿ716 ರನ್ ಗಳಿಸಿದ್ದಾರೆ. 156.33ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡಿರುವ ಅವರು 1 ಶತಕ ಮತ್ತು 6 ಅರ್ಧಶತಕಗಳನ್ನು ಸಿಡಿಸಿದ್ದಾರೆ.

5. ಡೇವಿಡ್‌ ಮಿಲ್ಲರ್‌
ದಕ್ಷಿಣ ಆಫ್ರಿಕಾದ ಡೇವಿಡ್‌ ಮಿಲ್ಲರ್‌, ವಿಸ್ಡನ್‌ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಈ ವರ್ಷ 16 ಪಂದ್ಯಗಳ13 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಮಿಲ್ಲರ್‌,60.17 ಸರಾಸರಿಯಲ್ಲಿ 361 ರನ್ ಕಲೆಹಾಕಿದ್ದಾರೆ. ಒಂದು ಶತಕ ಮತ್ತು ಎರಡು ಅರ್ಧಶತಕಗಳು ಅವರು ಬ್ಯಾಟ್‌ನಿಂದ ಮೂಡಿಬಂದಿವೆ.

6. ಸಿಕಂದರ್‌ ರಾಜಾ
ಜಿಂಬಾಬ್ವೆ ತಂಡದ ಭರವಸೆಯ ಆಲ್‌ರೌಂಡರ್‌ ಸಿಕಂದರ್‌ ರಾಜಾ ಅವರುಈ ವರ್ಷ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಗಮನ ಸೆಳೆದಿದ್ದಾರೆ. ಈ ವರ್ಷ 24 ಅಂತರರಾಷ್ಟ್ರೀಯ ಪಂದ್ಯ ಆಡಿರುವ ರಾಜಾ, 5 ಅರ್ಧಶತಕ ಸಹಿತ 150ರ ಸ್ಟ್ರೈಕ್‌ರೇಟ್‌ನಲ್ಲಿ 735 ರನ್‌ ಸಿಡಿಸಿದ್ದಾರೆ. ಜೊತೆಗೆ, ಕೇವಲ 6.14ರ ಎಕಾನಮಿಯಲ್ಲಿ 72 ಓವರ್‌ ಬೌಲಿಂಗ್ ಮಾಡಿ 25 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ.

7. ಶಾದಬ್‌ ಖಾನ್
ವಿಸ್ಡನ್‌ ತಂಡದಲ್ಲಿ ಎರಡನೇ ಆಲ್‌ರೌಂಡರ್‌ ಆಗಿ ಕಾಣಿಸಿಕೊಂಡಿರುವ ಶಾದಬ್‌ ಖಾನ್‌ ಪಾಕಿಸ್ತಾನದವರು. ಈ ವರ್ಷ 20 ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಿರುವ ಅವರು 12 ಇನಿಂಗ್ಸ್‌ಗಳಿಂದ 1 ಅರ್ಧಶತಕ ಸಹಿತ201 ರನ್ ಕಲೆಹಾಕಿದ್ದಾರೆ. 25 ವಿಕೆಟ್‌ಗಳನ್ನೂ ಪಡೆದು ಮಿಂಚಿದ್ದಾರೆ.

8. ಸ್ಯಾಮ್‌ ಕರನ್‌
ಇಂಗ್ಲೆಂಡ್‌ ತಂಡದ ಯುವ ವೇಗಿ ಹಾಗೂ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ ಶಕ್ತಿಯಾಗಿರುವ ಸ್ಯಾಮ್‌ ರನ್‌ ಸಹ ವಿಸ್ಡನ್‌ ವರ್ಷದ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. 2022ರಲ್ಲಿ 19 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 7.56ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ,25 ವಿಕೆಟ್‌ ಕಬಳಿಸಿದ್ದಾರೆ.11 ಇನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿ 67 ರನ್ ಕಲೆಹಾಕಿದ್ದಾರೆ.

9. ಆದಿಲ್‌ ರಶೀದ್‌
ವಿಸ್ಡನ್‌ ವರ್ಷದ ತಂಡದಲ್ಲಿ ಕಾಣಿಸಿಕೊಂಡ ಮೂರನೇ ಆಟಗಾರ ಆದಿಲ್‌ ರಶೀದ್. ಇಂಗ್ಲೆಂಡ್‌ ವಿಶ್ವಕಪ್‌ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಶೀದ್‌, ಈ ವರ್ಷ ಆಡಿದ 24 ಪಂದ್ಯಗಳಲ್ಲಿ 19 ವಿಕೆಟ್‌ ಉರುಳಿಸಿದ್ದಾರೆ.

10. ಹ್ಯಾರಿಸ್‌ ರವೂಫ್‌
ಪಾಕಿಸ್ತಾನದ ವೇಗದ ಬೌಲರ್‌ ಹ್ಯಾರಿಸ್‌ ರವೂಫ್‌ ಈ ವರ್ಷ 23 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. 85.1 ಓವರ್‌ ಬೌಲಿಂಗ್ ಮಾಡಿರುವ ರವೂಫ್‌, 643 ರನ್‌ ಬಿಟ್ಟು ಕೊಟ್ಟಿದ್ದಾರೆ.20.74ರ ಸರಾಸರಿಯಲ್ಲಿ 31 ವಿಕೆಟ್‌ ಕಬಳಿಸಿದ್ದಾರೆ.

11. ಭುವನೇಶ್ವರ್‌ ಕುಮಾರ್‌
ಸ್ವಿಂಗ್‌ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳಲ್ಲಿ ನಡುಕ ಹುಟ್ಟಿಸಬಲ್ಲ ಭುವನೇಶ್ವರ್‌ ಕುಮಾರ್‌, ಈ ವರ್ಷದ ವಿಸ್ಡನ್‌ ತಂಡದಲ್ಲಿ ಸ್ಥಾನ ಪಡೆದ ಭಾರತದ ಎರಡನೇ ಆಟಗಾರ. 2022ರಲ್ಲಿ 32 ಪಂದ್ಯಗಳಲ್ಲಿ ಆಡಿರುವ ಭುವಿ, ಮೂರು ಬಾರಿ 4 ವಿಕೆಟ್‌ ಸಾಧನೆ ಮಾಡಿದ್ದಾರೆ. ಈ ವರ್ಷ ಒಟ್ಟಾರೆ103.4 ಬೌಲಿಂಗ್‌ ಮಾಡಿರುವ ಅವರು6.98 ಎಕಾನಮಿಯಲ್ಲಿ724 ರನ್‌ ಬಿಟ್ಟುಕೊಟ್ಟು 37 ವಿಕೆಟ್‌ ಕಬಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT