ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಟ ಶಿವರಾಜ್ ಕುಮಾರ್, ಶುಭ ಹಾರೈಸಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಆರ್ಸಿಬಿಯ ಪೋಷಾಕು ಧರಿಸಿ ವಿಡಿಯೊ ಸಂದೇಶವನ್ನು ಹಂಚಿದ್ದಾರೆ.

'ಈ ಸಲ ಕಪ್...ಹೇಳಲ್ಲ, ಮಾಡಿ ತೋರಿಸ್ತೀವಿ. ಪ್ಲೇ ಬೋಲ್ಡ್' ಎಂದು ಶಿವರಾಜ್ ಉಲ್ಲೇಖಿಸಿದ್ದಾರೆ.

'ಆರ್ಸಿಬಿ ಕೊನೆಗೂ ಫೈನಲ್ಗೆ ಬಂದಿದೆ. ಆರ್ಸಿಬಿಗೆ ನನ್ನ ಶುಭ ಹಾರೈಕೆಗಳು. ನಾಳೆ ನಾನು ಇರಲ್ಲ. ಅಮೆರಿಕಕ್ಕೆ ಹೋಗ್ತಿದ್ದೀನಿ. ಆದರೂ ನನ್ನ ಹೃದಯ ಸದಾ ಆರ್ಸಿಬಿ ಜೊತೆಗಿರುತ್ತದೆ. ಆರ್ಸಿಬಿ ಅದ್ಭುತವಾಗಿ ಆಡಿ ಈ ಸಲ ಕಪ್ ನಮ್ದೇ ಎಂಬುದನ್ನು ಸಾಬೀತುಪಡಿಸಬೇಕು. ಆರ್ಸಿಬಿಗೆ ಹೆಚ್ಚಿನ ಶಕ್ತಿ ತುಂಬಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಗುಡ್ ಲಕ್' ಎಂದು ಫ್ಲೈಯಿಂಗ್ ಕಿಸ್ ಮೂಲಕ ಸಂದೇಶ ರವಾನಿಸಿದ್ದಾರೆ.

ಅಹಮದಾಬಾದ್ನಲ್ಲಿ ಇಂದು (ಮಂಗಳವಾರ) ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಪ್ರಶಸ್ತಿಗಾಗಿ ಸೆಣಸಲಿವೆ. ಎರಡೂ ತಂಡಗಳು ಇದುವರೆಗೆ ಟ್ರೋಫಿ ಗೆದ್ದಿಲ್ಲ. ಹಾಗಾಗಿ ಯಾವ ತಂಡ ಗೆದ್ದರೂ ದಾಖಲೆ ಸೃಷ್ಟಿಯಾಗಲಿದೆ.
.IPL | ವಿರಾಟ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿರುವ ಆರ್ಸಿಬಿಯ ಇಬ್ಬರು ದಿಗ್ಗಜರು.IPL 2025 | ಫೈನಲ್ಗೂ ಮುನ್ನ ವಿರಾಟ್ಗೆ ವಿಶೇಷ ಸಂದೇಶ ರವಾನಿಸಿದ ವಿಲಿಯರ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.