ಮಂಗಳವಾರ, ಮಾರ್ಚ್ 28, 2023
23 °C

ಕೊಹ್ಲಿ ಬದಲು ನಾಯಕನ ಸ್ಥಾನಕ್ಕೆ ಆಶಿಶ್‌ ನೆಹ್ರಾ ಸೂಚಿಸಿದ ಆಟಗಾರ ಯಾರು ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಟಿ–20 ವಿಶ್ವಕಪ್‌ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರು ಟಿ–20 ನಾಯಕತ್ವ ತ್ಯಜಿಸಲಿದ್ದಾರೆ. ಹಾಗಾಗಿ ಕೊಹ್ಲಿ ಬದಲು ಯಾರಿಗೆ ನಾಯಕತ್ವ ಒಲಿಯಲಿದೆ ಎಂಬ ಚರ್ಚೆಗಳು ಆರಂಭಗೊಂಡಿವೆ.  

ನಾಯಕತ್ವ ಬದಲಾವಣೆ ಕುರಿತು ವಿಶ್ಲೇಷಕರು ಈಗಾಗಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸ ನಾಯಕರಾಗಿ ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್‌.ರಾಹುಲ್‌ ಅವರಲ್ಲಿ ಒಬ್ಬರು ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಇದರ ನಡುವೆ ಭಾರತ ಮಾಜಿ ವೇಗದ ಬೌಲರ್‌ ಆಶಿಶ್‌ ನೆಹ್ರಾ ಅವರು ಭಾರತದ ಪರ ಟಿ–20 ಕ್ರಿಕೆಟ್‌ನಲ್ಲಿ ಅತಿ ವಿಕೆಟ್‌ ಪಡೆದಿರುವ ಜಸ್‌ಪ್ರೀತ್ ಬೂಮ್ರಾ ಅವರಿಗೆ ನಾಯಕತ್ವ ವಹಿಸುವಂತೆ ಸಲಹೆ ನೀಡಿದ್ದಾರೆ.

‘ಟೀಮ್‌ ಇಂಡಿಯಾ ಪರ ಜಸ್‌ಪ್ರೀತ್‌ ಬೂಮ್ರಾ ಅವರು ಎಲ್ಲಾ ಮಾದರಿಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದು, ಭರವಸೆಯ ಆಟಗಾರ ಎನಿಸಿದ್ದಾರೆ. ಜತೆಗೆ, ಅವರು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಹಾಗಾಗಿ ಅವರಿಗೆ ನಾಯಕತ್ವ ವಹಿಸುವುದು ಸೂಕ್ತ’ ಎಂದಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಿನ ವಾರ ಭಾರತ ತಂಡದ ಹೊಸ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಸದ್ಯ ಭಾರತ ತಂಡ ಟಿ–20 ವಿಶ್ವಕಪ್‌ನಲ್ಲಿ ಆಡುತ್ತಿದ್ದು, ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದೆ. ಬಳಿಕ ಪುಟ್ಟಿದೆದ್ದ ಕೊಹ್ಲಿ ಪಡೆ ಅಫ್ಗಾನಿಸ್ತಾನ ಮತ್ತು ಸ್ಕಾಟ್ಲೆಂಡ್‌ ವಿರುದ್ಧ ಜಯ ಸಾಧಿಸುವ ಮೂಲಕ ಗೆಲುವಿನ ಲಯ ಕಂಡುಕೊಂಡಿದೆ.

ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ –ಅಫ್ಗನ್‌ ತಂಡಗಳು ಸೆಣಸಲಿವೆ. ಭಾರತ ನಾಳೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಆಡಲಿದೆ. ಆಫ್ಗನ್‌ ವಿರುದ್ಧ ನ್ಯೂಜಿಲೆಂಡ್‌ ಸೋತರೆ ಭಾರತಕ್ಕೆ ಸೆಮಿಫೈನಲ್‌ ಪ್ರವೇಶಿಸಲು ಅವಕಾಶ ಸಿಗಲಿದೆ.

ಇದನ್ನೂ ಓದಿ... ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ನಿಧನ: ಸೆಹ್ವಾಗ್‌, ಪಂತ್ ಸೇರಿ ಗಣ್ಯರಿಂದ ಸಂತಾಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು