ಶನಿವಾರ, ಜನವರಿ 16, 2021
27 °C

AUS vs IND 1st ODI: ಆಸ್ಟ್ರೇಲಿಯಾದ ಐದನೇ ವಿಕೆಟ್ ಪತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ: ಕೊರೊನಾದ ನಡುವೆಯೇ ಭಾರತ ಕ್ರಿಕೆಟ್ ತಂಡ ಅಂತರರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದು, ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

12:58- ಐದನೇ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯ

ಸದ್ಯ 45.4 ಓವರ್‌ಗಳ ನಷ್ಟಕ್ಕೆ 335 ರನ್ ಗಳಿಸಿರುವ ಆಸ್ಟ್ರೇಲಿಯಾ ತಂಡ ನಾಲ್ಕು ವಿಕೆಟ್ ಕಳೆದುಕೊಂಡಿದೆ. 19 ಬಾಲ್‌ಗಳಿಗೆ 45 ರನ್ ಕಲೆಹಾಕಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಮೊಹಮ್ಮದ್ ಶಮಿ ಎಸೆತದಲ್ಲಿ ರವೀಂದ್ರ ಜಡೇಜಾಗೆ ಕ್ಯಾಚ್‌ನೀಡಿದ್ದಾರೆ. ಬಳಿಕ ಬ್ಯಾಟಿಂಗ್‌ಗೆ ಇಳಿದಿದ್ದ ಮಾರ್ನಸ್ ಲಾಬುಶೇನ್ ಕೂಡ ಎರಡು ಎಸೆತಗಳಲ್ಲಿ ಎರಡು ರನ್ ಗಳಿಸಿ ನವದೀಪ್ ಸೈನಿ ಬೌಲಿಂಗ್‌ನಲ್ಲಿ ಶಿಖರ್ ಧವನ್‌ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ.

12:37- ಆಸ್ಟ್ರೇಲಿಯಾದ ಮೂರನೇ ವಿಕೆಟ್ ಪತನ

ಶತಕ ಸಿಡಿಸಿರುವ ನಾಯಕ ಆ್ಯರನ್ ಫಿಂಚ್ ಅವರು 114 ರನ್ ಗಳಿಸಿ ಬೂಮ್ರಾ ಎಸೆತದಲ್ಲಿ ಕೆ.ಎಲ್. ರಾಹುಲ್‌ಗೆ ಕ್ಯಾಚ್ ನೀಡಿ ಹೊರನಡೆದಿದ್ದಾರೆ. ಇನ್ನೊಂದೆಡೆ ಬ್ಯಾಟಿಂಗ್‌ಗೆ ಇಳಿದ ಮಾರ್ಕಸ್ ಸ್ಟೊಯಿನಿಸ್‌ ಕೂಡ ಒಂದೇ ಎಸೆತದಲ್ಲಿ ಚಾಹಲ್ ಎಸೆತದಲ್ಲಿ ರಾಹುಲ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಸದ್ಯ 43ನೇ ಓವರ್ ಅಂತ್ಯಕ್ಕೆ 302 ರನ್ ಕಲೆ ಹಾಕಿರುವ ಆಸ್ಟ್ರೇಲಿಯ ಪರ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಸ್ಟೀವನ್ ಸ್ಮಿತ್ ಬ್ಯಾಟಿಂಗ್‌‌ನಲ್ಲಿದ್ದಾರೆ.

12:05- 36ನೇ ಓವರ್ ಅಂತ್ಯಕ್ಕೆ ಆಸ್ಟ್ರೇಲಿಯ 214 ರನ್ ಕಲೆಹಾಕಿದೆ. ಸ್ಟೀವನ್ ಸ್ಮಿತ್ 29 ಎಸೆತಗಳಲ್ಲಿ 30 ರನ್ ಗಳಿಸಿದ್ದರೆ, ನಾಯಕ ಫಿಂಚ್ 114 ಎಸೆತಗಳಲ್ಲಿ 97 ರನ್ ಗಳಿಸಿದ್ದಾರೆ. 

11:45- ಫಿಂಚ್ ಶತಕ ದಾಖಲೆಯತ್ತ

ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ತಂಡದ ನಾಯಕ ಆ್ಯರನ್ ಫಿಂಚ್ 103 ಎಸೆತಗಳಲ್ಲಿ 87 ರನ್ ಗಳಿಸಿದ್ದಾರೆ. ಮೂರನೇ ಬ್ಯಾಟ್ಸ್‌ಮನ್‌ಆಗಿ ಕಣಕ್ಕಿಳಿದ ಸ್ಟೀವನ್ ಸ್ಮಿತ್ 14 ಎಸೆತಗಳಲ್ಲಿ 13 ರನ್ ಗಳಿಸಿದ್ದಾರೆ. ಸದ್ಯ 32 ಓವರ್‌ಗಳಿಗೆ ಆಸ್ಟ್ರೇಲಿಯ 188 ರನ್‌ಗಳನ್ನು ಕಲೆಹಾಕಿದೆ.

11.35- ವಿಕೆಟ್ ಒಪ್ಪಿಸಿದ ಡೇವಿಡ್ ವಾರ್ನರ್

ಓಪನರ್‌ ಆಗಿ ಬ್ಯಾಟಿಂಗ್ ಆರಂಭಿಸಿದ್ದ ಡೇವಿಡ್ ವಾರ್ನರ್ 76 ಎಸೆತಗಳಲ್ಲಿ 69 ರನ್ ಗಳಿಸಿ ಮೊಹಮ್ಮದ್ ಶಮಿ ಎಸೆತದಲ್ಲಿ ಕೆ.ಎಲ್. ರಾಹುಲ್‌ಗೆ ಕ್ಯಾಚ್‌ ನೀಡಿ ಹೊರನಡೆದರು. ಸದ್ಯ ಒಂದು ವಿಕೆಟ್ ನಷ್ಟಕ್ಕೆ, 27.5 ಓವರ್‌ಗಳಲ್ಲಿ ಆಸ್ಟ್ರೇಲಿಯ 156 ರನ್‌ಗಳನ್ನು ಕಲೆಹಾಕಿದೆ. ಸ್ಟೀವನ್ ಸ್ಮಿತ್ ಈಗ ಬ್ಯಾಟಿಂಗ್ ಆರಂಭಿಸಿದ್ದಾರೆ. ಫಿಂಚ್ 92 ಎಸೆತಗಳಲ್ಲಿ 73 ರನ್ ಸಿಡಿಸಿದ್ದಾರೆ. 

11:11- ವಿಕೆಟ್ ನಷ್ಟವಿಲ್ಲದೆ 134 ರನ್

ಫಿಂಚ್ ಮತ್ತು ವಾರ್ನರ್ ಜೋಡಿ 25.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 134 ರನ್ ಸಿಡಿಸಿದೆ. ಡೇವಿಡ್ ವಾರ್ನರ್ 60 ಎಸೆತಗಳಲ್ಲಿ 60 ರನ್ ಗಳಿಸಿದ್ದರೆ, ಫಿಂಚ್ 84 ಎಸೆತಗಳಿಗೆ 61 ರನ್ ಗಳಿಸಿದ್ದಾರೆ.

10: 47- ಶತಕದ ಜೊತೆಯಾಟ

ಆಸ್ಟ್ರೇಲಿಯಾದ ಓಪನರ್‌ಗಳಾದ ಫಿಂಚ್ ಮತ್ತು ವಾರ್ನರ್ ಜೋಡಿ ಶತಕದ ಜೊತೆಯಾಟವಾಡಿದೆ. 19.1 ಓವರ್‌ಗಳ ನಷ್ಟಕ್ಕೆ 101 ರನ್ ಗಳಿಸಿದೆ. ಈ ಪೈಕಿ 72 ಎಸೆತಗಳಲ್ಲಿ ಫಿಂಚ್ ಅರ್ಧಶತಕ ಗಳಿಸಿದ್ದರೆ, ವಾರ್ನರ್ 44 ಎಸೆತ‌ಗಳಿಗೆ 40 ರನ್ ಗಳಿಸಿದ್ದಾರೆ. ವಿಕೆಟ್ ನಷ್ಟವಿಲ್ಲದೆ ಉತ್ತಮ ಪ್ರದರ್ಶನ ನೀಡುತ್ತಿದ್ದು, ಭಾರತದ ಬೌಲರ್‌ಗಳು ಒತ್ತಡಕ್ಕೆ ಸಿಲುಕಿದ್ದಾರೆ.

10:06- ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಫಿಂಚ್ ಮತ್ತು ವಾರ್ನರ್ 10 ಓವರ್‌ಗಳ ನಷ್ಟಕ್ಕೆ 51 ರನ್ ಕಲೆಹಾಕಿದ್ದಾರೆ. ಜೊತೆಯಾಟದಲ್ಲಿ ವಾರ್ನರ್ 21 ಮತ್ತು ಫಿಂಚ್ 29 ರನ್ ಗಳಿಸಿದ್ದಾರೆ.

9:55- ಉತ್ತಮ ಆರಂಭ ಪಡೆದುಕೊಂಡಿರುವ ಓಪನರ್​ಗಳಾದ ನಾಯಕ ಆ್ಯರನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಸದ್ಯಕ್ಕೆ 8 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 40 ರನ್ ಗಳಿಸಿದ್ದಾರೆ.

9:40- ಬ್ಯಾಟಿಂಗ್ ಆರಂಭಿಸಿದ ತಂಡದ ನಾಯಕ ಆ್ಯರನ್ ಫಿಂಚ್ 22 ಎಸೆತಗಳಿಗೆ 17 ರನ್ ಗಳಿಸಿದ್ದರೆ, ಡೇವಿಡ್ ವಾರ್ನರ್ 14 ಬಾಲ್‌ಗಳಿಗೆ 13 ರನ್ ಗಳಿಸಿದ್ದಾರೆ. 6 ಓವರ್‌ಗಳಲ್ಲಿ ಆಸ್ಟ್ರೇಲಿಯಾ ಇದೀಗ 32 ರನ್‌ಗಳನ್ನು ಕಲೆಹಾಕಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಉತ್ತಮ ಲಯದಲ್ಲಿರುವ ಸ್ಟೀವ್ ಸ್ಮಿತ್, ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಡೇವಿಡ್ ವಾರ್ನರ್ ಮತ್ತು ಆ್ಯರನ್ ಫಿಂಚ್‌, ಮಾರ್ನಸ್ ಲಾಬುಶೇನ್ ಕಣಕ್ಕಿಳಿಯಲಿದ್ದಾರೆ.

ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಯಜುವೇಂದ್ರ ಚಾಹಲ್ ಬೌಲಿಂಗ್‌ ಪಡೆಯು ಕಾಂಗರೂ ಪಡೆಯನ್ನು ಕಟ್ಟಿ ಹಾಕಲಿದೆಯೇ? ಕಾದು ನೋಡಬೇಕು.

ಕೋವಿಡ್ ಕಾಲದಲ್ಲಿ ಭಾರತ ತಂಡ ಪಾಲ್ಗೊಳ್ಳುತ್ತಿರುವ ಮೊದಲ ದ್ವಿಪಕ್ಷೀಯ ಸರಣಿ ಇದಾಗಿದೆ. ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಆಡಲು ಇಳಿಯಬೇಕಾಗಿರುವ ಭಾರತ ತಂಡಕ್ಕೆ ಇದು ಹೊಸ ಅನುಭವ. ತಂಡದ ಜೆರ್ಸಿಯ ಬಣ್ಣದಲ್ಲೂ ಬದಲಾವಣೆಯಾಗಿದ್ದು, ಬ್ಲೂ ಬಾಯ್ಸ್‌ ಇಲ್ಲಿ ‘ರೆಟ್ರೊ ಬ್ಲೂ‘ನಲ್ಲಿ ಮಿಂಚುತ್ತಿದ್ದಾರೆ.

ಗಾಯದಿಂದ ಚೇತರಿಸಿಕೊಳ್ಳದ ಅನುಭವಿ ಆಟಗಾರ, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಏಕದಿನ ಸರಣಿಗೆ ಲಭ್ಯವಿಲ್ಲ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಭಮನ್ ಗಿಲ್, ಕೆ.ಎಲ್‌.ರಾಹುಲ್ (ಉಪನಾಯಕ–ವಿಕೆಟ್ ಕೀಪರ್‌),ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಂಕ್ ಅಗರವಾಲ್‌, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಡೇವಿಡ್‌ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೊಯಿನಿಸ್‌, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್)‌, ಪ್ಯಾಟ್ ಕಮಿನ್ಸ್, ಮಿಷೆಲ್ ಸ್ಟಾರ್ಕ್‌, ಆ್ಯಡಂ ಜಂಪಾ, ಜೋಶ್ ಹ್ಯಾಜಲ್‌ವುಡ್‌, ಸೀನ್ ಅಬೋಟ್‌, ಆ್ಯಶ್ಟನ್ ಅಗರ್‌, ಕ್ಯಾಮರೂನ್ ಗ್ರೀನ್‌, ಮೊಯಸಸ್ ಹೆನ್ರಿಕ್ಸ್‌, ಆ್ಯಂಡ್ರ್ಯೂ ಟೈ, ಡ್ಯಾನಿಯಲ್ ಸ್ಯಾಮ್ಸ್‌, ಮ್ಯಾಥ್ಯೂ ವೇಡ್‌ (ವಿಕೆಟ್ ಕೀಪರ್)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು