ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್‌: ಬಾಬರ್‌ ಅಜಂ ಶತಕ, ನ್ಯೂಜಿಲೆಂಡ್‌ ವಿರುದ್ಧ ಪಾಕ್‌ಗೆ ಜಯ

ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ
Published 6 ಮೇ 2023, 14:08 IST
Last Updated 6 ಮೇ 2023, 14:08 IST
ಅಕ್ಷರ ಗಾತ್ರ

ಕರಾಚಿ (ಎಎಫ್‌ಪಿ/ ಎಪಿ): ನಾಯಕ ಬಾಬರ್‌ ಅಜಂ ಗಳಿಸಿದ ಶತಕದ ನೆರವಿನಿಂದ ಪಾಕಿಸ್ತಾನ ತಂಡ, ನಾಲ್ಕನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು 102 ರನ್‌ಗಳಿಂದ ಮಣಿಸಿತು.

ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 4–0 ರಲ್ಲಿ ಮುನ್ನಡೆ ಸಾಧಿಸಿತಲ್ಲದೆ, ಐಸಿಸಿ ಏಕದಿನ ಕ್ರಿಕೆಟ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 334 ರನ್‌ ಗಳಿಸಿದರೆ,  ಟಾಮ್‌ ಲಥಾಮ್‌ ಬಳಗ 43.4 ಓವರ್‌ಗಳಲ್ಲಿ 232 ರನ್‌ಗಳಿಗೆ ಆಲೌಟಾಯಿತು. ಬಾಬರ್‌ 117 ಎಸೆತಗಳಲ್ಲಿ 107 ರನ್‌ ಗಳಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಅವರ 18ನೇ ಶತಕ ಇದು.

ಅತಿವೇಗದಲ್ಲಿ 5 ಸಾವಿರ ರನ್‌: ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಇನಿಂಗ್ಸ್‌ಗಳಲ್ಲಿ 5 ಸಾವಿರ ರನ್‌ ಪೂರೈಸಿದ ಸಾಧನೆಯನ್ನು ಬಾಬರ್‌ ಮಾಡಿದರು. ಇದು ಅವರ 97ನೇ ಇನಿಂಗ್ಸ್‌ ಆಗಿತ್ತು. ದಕ್ಷಿಣ ಆಫ್ರಿಕಾದ ಹಾಶಿಮ್‌ ಆಮ್ಲಾ (101 ಇನಿಂಗ್ಸ್‌) ಹೆಸರಲ್ಲಿದ್ದ ದಾಖಲೆಯನ್ನು ಮುರಿದರು. ಏಕದಿನ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ಗಳ ಗಡಿ ದಾಟಿದ ಪಾಕಿಸ್ತಾನದ 14ನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

ಸತತ ನಾಲ್ಕನೇ ಗೆಲುವಿನ ಮೂಲಕ ಪಾಕ್‌ ತಂಡ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ, ಅಗ್ರಸ್ಥಾನ ಪಡೆಯಿತು. ಐಸಿಸಿಯು 2005 ರಲ್ಲಿ ಅಧಿಕೃತವಾಗಿ ರ್‍ಯಾಂಕಿಂಗ್‌ ಆರಂಭಿಸಿದ ಬಳಿಕ ‍ಪಾಕ್‌ ತಂಡ ಏಕದಿನ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದು ಇದೇ ಮೊದಲು. 2018ರ ಜನವರಿ ಮತ್ತು 2022ರ ಜೂನ್‌ನಲ್ಲಿ ಮೂರನೇ ಸ್ಥಾನ ಪಡೆದದ್ದು ಈ ಹಿಂದಿನ ಶ್ರೇಷ್ಠ ಸಾಧನೆ ಎನಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 334 (ಶಾನ್‌ ಮಸೂದ್‌ 44, ಬಾಬರ್‌ ಅಜಂ 107, ಮೊಹಮ್ಮದ್‌ ರಿಜ್ವಾನ್‌ 24, ಆಘಾ ಸಲ್ಮಾನ್ 58, ಮ್ಯಾಟ್‌ ಹೆನ್ರಿ 65ಕ್ಕೆ 3)

ನ್ಯೂಜಿಲೆಂಡ್‌ 43.4 ಓವರ್‌ಗಳಲ್ಲಿ 232 (ಟಾಮ್‌ ಲಥಾಮ್‌ 60, ಮಾರ್ಕ್‌ ಚಾಪ್‌ಮನ್‌ 46, ಉಸ್ಮಾನ್‌ ಮಿರ್‌ 43ಕ್ಕೆ 4, ಮೊಹಮ್ಮದ್‌ ವಸೀಂ 40ಕ್ಕೆ 3, ಹ್ಯಾರಿಸ್‌ ರವೂಫ್‌ 37ಕ್ಕೆ 2) ಫಲಿತಾಂಶ: ಪಾಕಿಸ್ತಾನಕ್ಕೆ 102 ರನ್‌ ಜಯ

ಬಾಬರ್‌ ಅಜಂ ಬ್ಯಾಟಿಂಗ್‌ –ಎಎಫ್‌ಪಿ ಚಿತ್ರ
ಬಾಬರ್‌ ಅಜಂ ಬ್ಯಾಟಿಂಗ್‌ –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT