ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ವೇಳಾಪಟ್ಟಿಯಂತೆ ಟಿ20 ವಿಶ್ವಕಪ್ ಆಯೋಜಿಸುವ ವಿಶ್ವಾಸದಲ್ಲಿ ಆಸ್ಟ್ರೇಲಿಯಾ

Last Updated 17 ಮಾರ್ಚ್ 2020, 9:18 IST
ಅಕ್ಷರ ಗಾತ್ರ

ಮೆಲ್ಬೋರ್ನ್‌:ಇದೇ ವರ್ಷ ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಟಿ20 ವಿಶ್ವಕಪ್‌ ಟೂರ್ನಿಯು ನಿಗದಿಯಂತೆ ನಡೆಯಲಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.

ಕ್ರಿಕೆಟ್‌ ಆಸ್ಟ್ರೇಲಿಯಾದ ಸಿಇಒ ಕೆವಿನ್‌ ರಾಬರ್ಟ್‌ ಅವರು, ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನವು ಪ್ರೇಕ್ಷಕರಿಂದತುಂಬಿರಲಿದ್ದು, ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದ ನಂತರ ಜಗತ್ತಿಗೆ ಸ್ಫೂರ್ತಿಯ ಸಂದೇಶ ರವಾನೆಯಾಗಲಿದೆ ಎಂದಿದ್ದಾರೆ.

‘ಇನ್ನು ಕೆಲವೇ ವಾರ ಅಥವಾ ಕೆಲವೇ ತಿಂಗಳುಗಳಲ್ಲಿ ಎಲ್ಲ ಮಾದರಿಯಕ್ರೀಡಾ ಚಟುವಟಿಕೆಗಳು ಆರಂಭವಾಗಲಿವೆ’ ಎಂದು ಕ್ರೀಡಾ ವೆಬ್‌ಸೈಟ್‌ವೊಂದಕ್ಕೆ ಹೇಳಿಕೆ ನೀಡಿದ್ದಾರೆ.

‘ಸದ್ಯದ ಪರಿಸ್ಥಿತಿಯನ್ನು ಊಹಿಸಲು ನಾವ್ಯಾರೂ ತಜ್ಞರಲ್ಲ ಎಂಬುದು ಸತ್ಯ.ನಮ್ಮ ಆಶಾಭಾವನೆಯು ನಮ್ಮನ್ನು ಅಕ್ಟೋಬರ್‌–ನವೆಂಬರ್‌ ವೇಳೆಗೆಸಂಪೂರ್ಣವಾಗಿ ನಮ್ಮನ್ನು ಸಾಧಾರಣ ಸ್ಥಿತಿಗೆ ಕೊಂಡೊಯ್ಯಲಿದೆ. ಆ ವೇಳೆಟಿ20 ವಿಶ್ವಕಪ್‌ ಜರುಗಲಿದೆ ಮತ್ತು ಆ ಟೂರ್ನಿಯ ಮೂಲಕ ನವೆಂಬರ್‌ 15ರ ನಂತರ ಜಗತ್ತಿಗೆ ಸ್ಫೂರ್ತಿಯ ಸಂದೇಶ ರವಾನೆಯಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ರೀಡಾ ಚಟುವಟಿಕೆಗಳ ಮೇಲೆ ಕೋವಿಡ್–19 ಭೀತಿಯು ಅಪಾರ ಪರಿಣಾಮ ಉಂಟುಮಾಡಿದೆ. ಇದೇ ವರ್ಷ ಜಪಾನ್‌ನಲ್ಲಿ ನಡೆಯಬೇಕಿರುವ ಒಲಿಂಪಿಕ್‌ ಕ್ರಿಡಾಕೂಟವೂ ಮುಂದೂಡಿಕೆಯಾಗುವ ಸಾಧ್ಯತೆಇದೆ.

ಈಗಾಗಲೇ ಭಾರತ–ದಕ್ಷಿಣ ಆಫ್ರಿಕಾ ಹಾಗೂಆಸ್ಟ್ರೇಲಿಯಾ–ನ್ಯೂಜಿಲೆಂಡ್‌ ಏಕದಿನ ಸರಣಿಗಳನ್ನು ಮೊದಲ ಪಂದ್ಯದ ಬಳಿಕ ರದ್ದು ಮಾಡಲಾಗಿದೆ. ಶ್ರೀಲಂಕಾ ಪ್ರವಾಸದಿಂದ ಇಂಗ್ಲೆಂಡ್‌ ತಂಡ ಹೊರನಡೆದಿದೆ. ಪಾಕಿಸ್ತಾನ–ಬಾಂಗ್ಲಾದೇಶ ಸರಣಿಯೂ ಮುಂದೂಡಿಕೆಯಾಗಿದೆ.

ಆಸ್ಟ್ರೇಲಿಯಾದಲ್ಲಿ ದೇಶಿ ಕ್ರಿಕೆಟ್‌ ಟೂರ್ನಿಗಳನ್ನು ನಿಲ್ಲಿಸಲಾಗಿದೆ. ಮುಂದಿನ 60 ದಿನಗಳ ವರೆಗೆ ಕ್ರಿಕೆಟ್‌ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಪ್ರಕಟಿಸಿದೆ.

ಇದೇ ತಿಂಗಳು 29ರಿಂದ ಆರಂಭವಾಗಬೇಕಿದ್ದ ಐಪಿಎಲ್‌ ಟೂರ್ನಿಯನ್ನು ಮುಂದಿನ ತಿಂಗಳು 15ರವರೆಗೆ ಮುಂದೂಡಲಾಗಿದೆ. ಪಾಕಿಸ್ತಾನ ಸೂಪರ್ ಲೀಗ್‌ ಟೂರ್ನಿಯನ್ನು ಪರಿಸ್ಥಿತಿ ಸುಧಾರಿಸುವವರೆಗೆ ನಿಲ್ಲಿಸಲಾಗಿದೆ.

ಜಗತ್ತಿನಾದ್ಯಂತ ಸುಮಾರು 1.7 ಲಕ್ಷ ಜನರಲ್ಲಿಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಇದರಿಂದಾಗಿ 7,174 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.ಭಾರತದಲ್ಲಿ ಇದುವರೆಗೆ ಮೂವರು ಸಾವನ್ನಪ್ಪಿದ್ದು, 127 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT