ವಿಜಯಪುರ:ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಇಬ್ಬರನ್ನು ವಿಜಯಪುರದ ಆದರ್ಶ ನಗರ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರದ ಉಪ್ಪಲಿ ಬುರುಜ್ ಬಳಿಯ ಮನ್ಸೂರ್ ಅಲಿ ಮಹ್ಮದ್ ಶರೀಫ್ ಡಾಲಾಯತ್, ವಿಜಯಪುರ ತಾಲ್ಲೂಕಿನ ಕುಮಟಗಿ ತಾಂಡಾದ ಸುರೇಶ ಮೋತಿಸಿಂಗ್ ಚವ್ಹಾಣ ಬಂಧಿತರು.

ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯಕ್ಕೆ ಇವರಿಬ್ಬರು ನಗರದ ದರ್ಗಾ ಕ್ರಾಸ್ ಬಳಿ ಬೆಟ್ಟಿಂಗ್ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

‘ಸನ್ರೈಸರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಗೆದ್ದರೆ ₹ 100ಕ್ಕೆ ₹ 1000 ಕೊಡುವುದಾಗಿ ಹಾಗೂ ರಾಯಲ್ ಚಾಲೆಂಜರ್ಸ್ ವಿರುದ್ಧ ಸನ್ರೈಸರ್ಸ್ ಗೆದ್ದರೆ ₹ 500ಕ್ಕೆ ₹ 1000 ಕೊಡುವುದಾಗಿ ಭಾನುವಾರ ಮುಸ್ಸಂಜೆ ಬೆಟ್ಟಿಂಗ್ ಆಡುತ್ತಿದ್ದ ಸಂದರ್ಭ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಆದರ್ಶ ನಗರ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.