ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ | ಪಾಕಿಸ್ತಾನದಲ್ಲಿ ಟೆಸ್ಟ್‌ ಆಡಲು ನಕಾರ: ನಿಲುವಿಗೆ ಅಂಟಿಕೊಂಡ ಬಾಂಗ್ಲಾ

Last Updated 26 ಡಿಸೆಂಬರ್ 2019, 7:04 IST
ಅಕ್ಷರ ಗಾತ್ರ

ಢಾಕಾ: ಪಾಕಿಸ್ತಾನದಲ್ಲಿ ಟಿ–20 ಪಂದ್ಯಗಳನ್ನು ಮಾತ್ರ ಆಡಲು ಸಿದ್ಧ. ಆದರೆ ಉದ್ದೇಶಿತ ಟೆಸ್ಟ್‌ ಸರಣಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಬೇಕೆಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಹೇಳಿದೆ. ಆ ಮೂಲಕ ತನ್ನ ನಿಲುವಿಗೇ ಅಂಟಿಕೊಂಡಿದೆ.

ಬಿಸಿಬಿ ಚೀಫ್‌ ಎಕ್ಸಿಕ್ಯುಟಿವ್‌ ನಿಜಾಮುದ್ದೀನ್‌ ಚೌಧುರಿ ಅವರು ಮಂಗಳವಾರ ಈ ಸಂದೇಶ ರವಾನಿಸಿದ್ದಾರೆ.

‘ತವರಿನ ಎಲ್ಲ ಸರಣಿಗಳನ್ನು ಸ್ವದೇಶದಲ್ಲೇ ಆಡುವುದು. ಇದರಲ್ಲಿ ಅನುಮಾನವೇ ಬೇಡ’ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಎಹ್ಸಾನ್‌ ಮಣಿ ಹೇಳಿದ ಮರುದಿನವೇ ಚೌಧರಿ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ನಮ್ಮ ನಿಲುವು ಅಚಲವಾದುದು. ನಾವು ಪಾಕಿಸ್ತಾನದಲ್ಲಿ ಬರೇ ಟಿ–20 ಪಂದ್ಯಗಳನ್ನಷ್ಟೇ ಆಡುತ್ತೇವೆ. ಈ ಸರಣಿಗೆ ಸಂಬಂಧಿಸಿದ ಆಯೋಜಕರು ಪಾಕಿಸ್ತಾನದಲ್ಲಿ ದೀರ್ಘ ಮಾದರಿಯ ಕ್ರಿಕೆಟ್‌ ಆಡುವುದನ್ನು ಬಯಸಿಲ್ಲ’ ಎಂದು ನಿಜಾಮುದ್ದೀನ್‌ ಅವರನ್ನು ಉಲ್ಲೇಖಿಸಿ ‘ಡೇಲಿ ಸ್ಟಾರ್‌’ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT